twitter
    For Quick Alerts
    ALLOW NOTIFICATIONS  
    For Daily Alerts

    ಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್‌ನಲ್ಲಿ ಹರಿಪ್ರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ

    |

    ಇತ್ತೀಚೆಗೆ ನಡೆದ ಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್‌ನಲ್ಲಿ ನಟಿ ಹರಿಪ್ರಿಯಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಹರಿಪ್ರಿಯಾ, ಈ ಪ್ರಶಸ್ತಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    ಕವಿ ಚಕ್ರವರ್ತಿ ಜನ್ನನ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿದ 'ಅಮೃತಮತಿ' ಚಿತ್ರದಲ್ಲಿ ನಟ ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಮರ್ಷಿಯಲ್ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಹರಿಪ್ರಿಯಾ ಕಲಾತ್ಮಕ ಚಿತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೆ, ತಮ್ಮ ಪ್ರಯತ್ನಕ್ಕೆ ಪ್ರಶಸ್ತಿಯ ಹೆಮ್ಮಯನ್ನೂ ಗಳಿಸಿದ್ದಾರೆ. 13ನೇ ಶತಮಾನದ ಕಥೆಯನ್ನುಳ್ಳ ಸಿನಿಮಾ 'ಅಮೃತಮತಿ'ಯಲ್ಲಿ ಕಷ್ಟಕರವಾದ ಸಂಭಾಷಣೆಗಳಿದ್ದರೂ ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸಿದ್ದನ್ನು ಅವರು ಹೇಳಿಕೊಂಡಿದ್ದರು.

    ರಾಜ್-ವಿಷ್ಣುಗೆ ಯಾಕಿಲ್ಲ ಮೇಣದ ಪ್ರತಿಮೆ: ಮೇಡಮ್ ಟುಸ್ಸಾಡ್ ವಿರುದ್ಧ ಹರಿಪ್ರಿಯಾ ಕಿಡಿರಾಜ್-ವಿಷ್ಣುಗೆ ಯಾಕಿಲ್ಲ ಮೇಣದ ಪ್ರತಿಮೆ: ಮೇಡಮ್ ಟುಸ್ಸಾಡ್ ವಿರುದ್ಧ ಹರಿಪ್ರಿಯಾ ಕಿಡಿ

    ಕ್ರಾಂತಿಕಾರಿ ಪಾತ್ರ

    ಕ್ರಾಂತಿಕಾರಿ ಪಾತ್ರ

    ಇದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಂತಸ ಹಂಚಿಕೊಂಡಿದ್ದಾರೆ. 'ಅಮೃತಮತಿ ಚಿತ್ರದಲ್ಲಿನ ನನ್ನ ಕ್ರಾಂತಿಕಾರಿ ಪಾತ್ರಕ್ಕಾಗಿ ಭಾರತೀಯ ಜಾಗತಿಕ ಸಿನಿಮಾ ಉತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿರುವುದು ಅತ್ಯಂತ ಸಂತಸ ಮತ್ತು ಗೌರವ ತಂದಿದೆ' ಎಂದು ಹರಿಪ್ರಿಯಾ ಹೇಳಿದ್ದಾರೆ.

    ಮಹಿಳಾ ದಿನದಂದು ಪ್ರಶಸ್ತಿ ಗೌರವ

    ಮಹಿಳಾ ದಿನದಂದು ಪ್ರಶಸ್ತಿ ಗೌರವ

    ಜಾಗತಿಕ ಸಿನಿಮಾಗಳ ನಡುವೆ ಸ್ಪರ್ಧಿಯಾಗಿದ್ದು ಮತ್ತು ಗೆದ್ದಿರುವುದು ಅದ್ಭುತವಾದ ಅನುಭವ ನೀಡಿದೆ. ಮಹಿಳಾ ದಿನಾಚರಣೆಯ ದಿನದಂದೇ ಕಾರ್ಯಕ್ರಮ ನಡೆದಿದ್ದು ಇನ್ನಷ್ಟು ವಿಶೇಷವಾಗಿತ್ತು ಎಂದು ಹರಿಪ್ರಿಯಾ ಖುಷಿ ಹಂಚಿಕೊಂಡಿದ್ದಾರೆ.

    ಚಳಿಗಾಲದಲ್ಲಿ ಹರಿಪ್ರಿಯಾಗೆ ಅಮ್ಮ ನೀಡಿದ ವಿಶೇಷ ಉಡುಗೊರೆಚಳಿಗಾಲದಲ್ಲಿ ಹರಿಪ್ರಿಯಾಗೆ ಅಮ್ಮ ನೀಡಿದ ವಿಶೇಷ ಉಡುಗೊರೆ

    ಮಹಿಳೆಯರಿಗೆ ಅರ್ಪಣೆ

    ಮಹಿಳೆಯರಿಗೆ ಅರ್ಪಣೆ

    'ನನ್ನಲ್ಲಿ ನಂಬಿಕೆ ಇರಿಸಿದ್ದಕ್ಕೆ ಮತ್ತು ಈ ಚಿತ್ರದುದ್ದಕ್ಕೂ ನನಗೆ ಮಾರ್ಗದರ್ಶನ ನೀಡಿದ್ದಕ್ಕೆ ಬರಗೂರು ರಾಮಚಂದ್ರಪ್ಪ ಅವರಿಗೆ ಧನ್ಯವಾದಗಳು. ಈ ಪ್ರಶಸ್ತಿಯನ್ನು ನನ್ನ ಅಮ್ಮ ಹಾಗೂ ಎಲ್ಲ ಸುಂದರ, ಪ್ರತಿಭಾನ್ವಿತ ಮತ್ತು ಕಠಿಣ ಪರಿಶ್ರಮಿ ಮಹಿಳೆಯರಿಗೆ ಅರ್ಪಿಸುತ್ತೇನೆ. ಮಹಿಳಾ ದಿನದ ಶುಭಾಶಯಗಳು' ಎಂದು ಹರಿಪ್ರಿಯಾ ತಿಳಿಸಿದ್ದಾರೆ.

    ಐತಿಹಾಸಿಕ ಪಾತ್ರಗಳಲ್ಲಿ ಗ್ಲಾಮರಸ್ ಹರಿಪ್ರಿಯಾ

    ಐತಿಹಾಸಿಕ ಪಾತ್ರಗಳಲ್ಲಿ ಗ್ಲಾಮರಸ್ ಹರಿಪ್ರಿಯಾ

    ಪಕ್ಕಾ ವ್ಯಾಪಾರಿ ಚಿತ್ರಗಳಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುತ್ತಿದ್ದ ಹರಿಪ್ರಿಯಾ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗುರುತಿಸಿಕೊಂಡ ಪ್ರಮುಖ ನಟಿಯರು ಐತಿಹಾಸಿಕ ಕಥೆಗಳನ್ನಾಧರಿಸಿದ ಪಾತ್ರಗಳಲ್ಲಿ ನಟಿಸುವುದು ಅಪರೂಪ. ಹರಿಪ್ರಿಯಾ 'ಅಮೃತಮತಿ' ಚಿತ್ರವಲ್ಲದೆ, ಇತ್ತೀಚೆಗೆ ಬಿಡುಗಡೆಯಾದ 'ಬಿಚ್ಚುಗತ್ತಿ' ಎಂಬ ಐತಿಹಾಸಿಕ ಚಿತ್ರದಲ್ಲಿಯೂ ನಟಿಸಿದ್ದರು.

    English summary
    Haripriya has won best actress award in Indian World Film Festival for Baraguru Ramachandrappa directed Amruthamathi Movie.
    Tuesday, March 10, 2020, 10:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X