For Quick Alerts
  ALLOW NOTIFICATIONS  
  For Daily Alerts

  ಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತು

  |

  ಚಿರಂಜೀವಿ ಸರ್ಜಾ ಹಠಾತ್ ಅಗಲುವಿಕೆಯ ಆಘಾತದಿಂದ ಹೊರಬರಲು ಹಲವು ದಿನಗಳೇ ಬೇಕಾದೀತು. ಅವರ ಜತೆ ಒಡನಾಟ ಹೊಂದಿದ್ದ ಕಲಾವಿದರು, ತಂತ್ರಜ್ಞರು ಅದರ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ನಟಿ ಹರಿಪ್ರಿಯಾ ಕೂಡ ಆ ನೆನಪುಗಳನ್ನು ಮತ್ತು ನೋವನ್ನು ಹಂಚಿಕೊಂಡಿದ್ದಾರೆ.

  'ಸಂಹಾರ' ಎಂಬ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯಾ ಒಟ್ಟಿಗೆ ನಟಿಸಿದ್ದರು. ಹೀಗಾಗಿ ಸಹ ಕಲಾವಿದರಾಗಿ ಅವರ ಒಡನಾಟ ಮಧುರವಾಗಿತ್ತು. ಚಿರಂಜೀವಿ ಅವರೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಳ್ಳುತ್ತಲೇ, ಒಂದು ಸಾವು ನಮ್ಮನ್ನು ಎಷ್ಟು ವಿಹ್ವಲಗೊಳಿಸುತ್ತದೆ. ಇಲ್ಲಿ ಯಾರನ್ನೂ ಯಾವ ರೀತಿಯಲ್ಲಿಯೂ ಸಮಾಧಾನಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಹರಿಪ್ರಿಯಾ ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಯನ್ನು ಅವರದೇ ಬರಹದಲ್ಲಿ ಓದಿ...

  ಈಗಲೂ ನಂಬಲು ಆಗೊಲ್ಲ

  ಈಗಲೂ ನಂಬಲು ಆಗೊಲ್ಲ

  ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನ ನಾಲ್ಕೈದ್ ಸಲ ಓದ್ದೆ. ಯಾಕಂದ್ರೆ ಆ ಮೆಸೇಜ್‌ನ ನಂಗೆ ನಂಬೋಕ್ ಸಾಧ್ಯನೇ ಆಗ್ಲಿಲ್ಲ. ನಾನೇ ಏನಾದ್ರೂ ತಪ್ ಓದಿದ್ನ ಅಂತನ್ಸಿ ಮತ್ತೆ ಮತ್ತೆ ಓದ್ಕೊಂಡೆ. ಅಷ್ಟರಲ್ಲಿ ಬೇರೆಬೇರೆ ಕಡೆಯಿಂದ್ಲೂ ಅದೇ ಮೆಸೇಜ್ ಬರ್ತಿತ್ತು, ಟಿವಿಲೂ ಅದೇ ಬ್ರೇಕಿಂಗ್ ನ್ಯೂಸ್. "ಚಿರು ಇನ್ನಿಲ್ಲ.." ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗ್ ನಂಬೋಕ್ ಆಗಲ್ಲ.

  'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ

  ಚಿರು ಫ್ಯಾಮಿಲಿಯ ಎಲ್ಲರ ಜತೆ ನಟಿಸಿದ್ದೇನೆ

  ಚಿರು ಫ್ಯಾಮಿಲಿಯ ಎಲ್ಲರ ಜತೆ ನಟಿಸಿದ್ದೇನೆ

  ಚಿರು ಮಾತ್ರ ಅಲ್ಲ, ಅವ್ರ ಫ್ಯಾಮಿಲಿ ಎಲ್ರ ಜೊತೆ ಆಕ್ಟ್ ಮಾಡಿದೀನಿ. ನಾನು ಚಿರು ‘ಸಂಹಾರ' ಸಿನಿಮಾದಲ್ ಆಕ್ಟ್ ಮಾಡಿದ್ವಿ. ಅಲ್ಲಿ ಹೀರೋಯಿನ್ /ವಿಲನ್ ರೋಲ್. ಸೋ.. ನಂಗೂ ಚಿರುಗೂ ಒಟ್ಟಿಗೆ ಇರೋ ಸೀನ್ಸ್ ಜಾಸ್ತಿ ಇರ್ಲಿಲ್ಲ. ಆದ್ರೆ ಸಾಂಗ್ ಶೂಟ್‌ನಲ್ಲಿ ನಾವಿಬ್ರೂ ತುಂಬಾ ಮಾತಾಡಿದ್ದು, ನಕ್ಕಿದ್ದು ಇದೆ. ಅದ್ರಲ್ಲಿ ಕೊನೇಲೊಂದು ಫೈಟ್ ಇತ್ತು. ಆಗ ಒಂದು ಪಲ್ಟಿ ಹೊಡೆಯುವಾಗ ಆಯತಪ್ಪಿ ದಡ್ ಅಂತ ನೆಲಕ್ಕೆ ಬಿದ್ದು ‘ಅಮ್ಮಾ..' ಅಂತ ಕಿರುಚಿದ್ದೆ. (ಸ್ವಲ್ಪ ಹೆಚ್ಚುಕಡಿಮೆ ಆಗಿದ್ರೂ ಬ್ಯಾಕ್‌ಬೋನ್‌ಗೆ ಏಟಾಗಿರ್ತಿತ್ತು). ಆವಾಗಿಂದ ಶೂಟಿಂಗ್ ಮುಗಿಯೋವರೆಗೂ ನಾನ್ ಕಿರುಚಿದ್ ಟೋನ್‌ನಲ್ಲೇ ‘ಅಮ್ಮಾ..' ಅಂತ ರೇಗಿಸ್ತಿದ್ರು ಚಿರು.

  ತಾಯಿ ಮತ್ತು ಹಸಿವು ಬಗ್ಗೆ ಚಿರಂಜೀವಿ ಸರ್ಜಾ ಹೇಳಿದ್ದ ಮನಕಲಕುವ ಘಟನೆತಾಯಿ ಮತ್ತು ಹಸಿವು ಬಗ್ಗೆ ಚಿರಂಜೀವಿ ಸರ್ಜಾ ಹೇಳಿದ್ದ ಮನಕಲಕುವ ಘಟನೆ

  ಮೇಘನಾ ಕಂಡು ದುಃಖ ಹೆಚ್ಚಿತು

  ಮೇಘನಾ ಕಂಡು ದುಃಖ ಹೆಚ್ಚಿತು

  ಚಿರು ಇಲ್ಲ ಅಂದ್ ತಕ್ಷಣ ಶಾಕ್ ಆಗಿತ್ತು. ಭಾನುವಾರ ಟಿವಿಲಿ ನೋಡ್ತ ಮನೆಯಲ್ಲೇ ತುಂಬಾ ಅತ್ತಿದ್ದೆ, ಚಿರುನ ಹಾಗೆ ಹೇಗೆ ನೋಡೋದು ಅಂತ ಹೋಗೋಕ್ ಹಿಂಜರಿದೆ. ಸೋಮವಾರ ಕೊನೆದಾಗಿ ಒಂದ್ಸಾರಿ ನೋಡ್ಬೇಕು ಅಂತ ತಕ್ಷಣ ಹೊರಟೆ. ಆದ್ರೆ ಅಲ್ಲಿ ಮೇಘನಾನ ಕಂಡು ನಂಗೆ ಇನ್ನೂ ಜಾಸ್ತಿ ದುಃಖ ಆಯ್ತು. ಏನ್ ಸಮಾಧಾನ ಹೇಳೋಕೂ ಮಾತೇ ಹೊರಡ್ತಿರ್ಲಿಲ್ಲ.

  ಜೀವ ಎಷ್ಟು ಅನಿಶ್ಚಿತ...

  ಜೀವ ಎಷ್ಟು ಅನಿಶ್ಚಿತ...

  ಅಲ್ಲಿ ಯಾರೋ ಹೇಳ್ತಿದ್ರು, ಮೇಘನಾ ಕ್ಯಾರಿಂಗ್ ವಿಷಯಾನ ಚಿರು ಇನ್ ಸ್ವಲ್ಪದಿನದಲ್ಲೇ ಪಬ್ಲಿಕ್ ಮಾಡ್ತಿದ್ರು ಅಂತ. ಆದ್ರೆ ಅಷ್ಟರಲ್ಲಿ ಏನೇನಾಯ್ತಲ್ಲ? ಲೈಫ್ ಎಷ್ಟ್ ಅನ್‌ಪ್ರೆಡಿಕ್ಟೇಬಲ್ ಅಲ್ವಾ. ಒಬ್ರ ಸ್ಥಾನನ ಇನ್ನೊಬ್ರು ಯಾವತ್ತೂ ತುಂಬೋಕ್ ಆಗಲ್ಲ.

  ಯಾವ ಸಾಂತ್ವನ ನೀಡಲು ಸಾಧ್ಯ?

  ಯಾವ ಸಾಂತ್ವನ ನೀಡಲು ಸಾಧ್ಯ?

  ಇನ್ನು ಅರ್ಜುನ್ ಸರ್.. ಕಾಫೀನ್ ಬಾಕ್ಸ್ ಗ್ಲಾಸ್‌ಗೆ ತಲೆ ಕೊಟ್ಟು, "ಚಿರು.. ಮಾಮ ಬಂದಿದಿನಿ, ಎದ್ದೇಳೋ.." ಅಂದಿದ್ನ ನೋಡ್ದಾಗಂತೂ ತುಂಬಾ ಸಂಕಟ ಆಗಿತ್ತು. ಬೆಳೆದು ನಿಂತಿರೋ ಮಗನ್ನ ಕಳ್ಕೊಂಡಿರೋ ಸಂಕಟದಲ್ಲಿರೋ ಅಪ್ಪ-ಅಮ್ಮಂಗೆ ಯಾವ ಸಾಂತ್ವನ ಸಮಾಧಾನ ನೀಡೋಕ್ ಸಾಧ್ಯ? ಚಿಕ್ಕೋರಿದ್ದಾಗಿಂದ ಒಟ್ಟಿಗೇ ಆಡಿ ಬೆಳೆದ ಧ್ರುವಂಗೆ ಆಗಿರೋ ಕಷ್ಟ ಯಾರಾದ್ರೂ ಊಹಿಸೋಕ್ ಸಾಧ್ಯನಾ? ಈ ಲಾಕ್‌ಡೌನ್ ಟೈಮಲ್ಲಿ ಎಲ್ಲ ಮನೇಲೇ ಇದ್ದು ಎಂದಿಗಿಂತ ಜಾಸ್ತಿ ಸಮಯ ಒಟ್ಟಿಗೇ ಕಳೆದಿರ್ತಾರೆ. ಆದ್ರೆ ಈ ಟೈಮಲ್ಲೇ ಹೀಗಾಯ್ತಲ್ಲ..

  ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?ಚಿರು ಸರ್ಜಾ ಮೇಲೆ ಬಂಡವಾಳ ಹೂಡಿದವರ ನೆರವಿಗೆ ಧ್ರುವ ಸರ್ಜಾ?

  ದೊಡ್ಡ ಯಾತನೆ

  ದೊಡ್ಡ ಯಾತನೆ

  ನಾನಲ್ಲ.. ಯಾರೇ ಆದ್ರೂ ಸಾಂತ್ವನ ಹೇಳೋದ್ ಬಿಟ್ಟು ಬೇರೇನೂ ಮಾಡೋಕಾಗಲ್ಲ. ಮೇಘನಾಗೆ, ಅವ್ರ ಅಮ್ಮ-ಅಪ್ಪಂಗೆ, ಅರ್ಜುನ್ ಸರ್ ಗೆ, ಧ್ರುವಂಗೆ, ಅವ್ರೆಲ್ರಿಗೂ ದುಃಖ ಸಹಿಸ್ಕೊಳೋ ಶಕ್ತಿ ಕೊಡು ದೇವ್ರೇ ಅಂತ ಪ್ರಾರ್ಥನೆ ಮಾಡೋಣ. ಹೋದವರು ಹೋದಾಗ ಆಗೋ ನೋವಿಗಿಂತ ಆಮೇಲೆ ಅವ್ರ ನೆನಪಾಗಿ ಆಗೋ ನೋವಿದ್ಯಲ ಅದೇ ದೊಡ್ಡ ಯಾತನೆ. ಅದನ್ನು ಸಹಿಸ್ಕೊಳ್ಳೋ ಶಕ್ತಿ ಚಿರು ಫ್ಯಾಮಿಲಿಗೆ ದೇವ್ರು ಕೊಡ್ಲಿ.

  ಚಿರು ಯಾವತ್ತೂ ಚಿರಂಜೀವಿನೇ

  ಚಿರು ಯಾವತ್ತೂ ಚಿರಂಜೀವಿನೇ

  ಚಿರು ಸಿನಿಮಾಗಳು ರಿಲೀಸ್ ಆಗೋದಿವೆ. ಇನ್ನೂ ತುಂಬಾ ಸಿನಿಮಾ ಮಾಡೋದಿತ್ತು. ಆದ್ರೆ ಚಿರು ಇಲ್ಲ ಅನ್ನೋದ್ನ ನಂಗಿನ್ನೂ ನಂಬೋಕೇ ಆಗ್ತಿಲ್ಲ. ನೋಡೋಕೆ, ಮಾತಾಡೋಕೆ, ರೇಗ್ಸೋಕೆ ಚಿರು ಇನ್ನು ಕಾಣಿಸದೇ ಇರ್ಬೋದು. ಆದ್ರೆ ಎಲ್ಲರ ಮನಸಲ್ಲಿ ಚಿರು ಯಾವತ್ತೂ ಚಿರಂಜೀವಿನೇ..

  English summary
  Actress Hariprriya wrote an emotional post about Chiranjeevi Sarja in her Babe Knows blog.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X