ಹೊಸ ವರ್ಷದ ಸಂಭ್ರಮ: ಮಗಳಿಗೆ ಹೆಸರಿಟ್ಟ ಹರೀಶ್ ರಾಜ್ ದಂಪತಿ
ಕನ್ನಡದ ಪ್ರತಿಭಾನ್ವಿತ ನಟ ಹರೀಶ್ ರಾಜ್ ದಂಪತಿ ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈಗ ಹೊಸ ವರ್ಷದ ಸ್ವಾಗತ ಮಾಡಿರುವ ದಂಪತಿ ಸಂಭ್ರಮವನ್ನು ಹೆಚ್ಚಿಸಿಕೊಂಡಿದ್ದಾರೆ.
Recommended Video
ಹೌದು, ಹರೀಶ್ ರಾಜ್ ಮತ್ತು ಶ್ರುತಿ ದಂಪತಿ ತಮ್ಮ ಎರಡನೇ ಮಗಳಿಗೆ ನಾಮಕರಣ ಮಾಡಿದ್ದಾರೆ. ಹೊಸ ವರ್ಷದ ವಿಶೇಷವಾಗಿ ಈ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಮಕ್ಕಳ ಜೊತೆಗಿನ ಮುದ್ದಾದ ಫೋಟೋ ಶೇರ್ ಮಾಡಿರುವ ಫೋಟೋ ''ನನ್ನ ಮಗಳಿಗೆ ದಾರ್ಷಿಕ ಎಂದು ಹೆಸರಿಟ್ಟಿದ್ದೇವೆ'' ಎಂದು ತಿಳಿಸಿದ್ದಾರೆ.
ಅಂದ್ಹಾಗೆ, ಹರೀಶ್ ರಾಜ್ ಮತ್ತು ಶ್ರುತಿ 2014ರಲ್ಲಿ ವಿವಾಹವಾಗಿದ್ದರು. ಈ ಮದುವೆಯಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಹರೀಶ್ ರಾಜ್ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು ಇದೆ. ಶ್ರುತಿ ಲೋಕೇಶ್ ಎಂಎಸ್‌ಸಿ ಪದವೀಧರೆ ಆಗಿದ್ದಾರೆ.

ಹರೀಶ್ ರಾಜ್ ಅವರು ಕಿರುತೆರೆ ಹಾಗೂ ಸಿನಿಮಾ ಇಂಡಸ್ಟ್ರಿ ಎರಡು ಕಡೆಯೂ ತೊಡಗಿಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಸಿನಿಮಾ ಮಾಡಿದ್ದಾರೆ. ಜೊತೆಗೆ ನಿರ್ದೇಶಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
2009ರಲ್ಲಿ ಕಲಾಕರ್ ಚಿತ್ರ ನಿರ್ದೇಶಿಸಿದ್ದರು. ನಂತರ 2011ರಲ್ಲಿ ಗನ್ ಎಂಬ ಚಿತ್ರ ನಿರ್ದೇಶಿಸಿದ್ದರು. ಜೈಲಲಿತಾ, ನಮೋ ಭೂತಾತ್ಮ, ಪವರ್, ಅಂಬರ, ಬರ್ಫಿ, ಸುಗ್ರೀವ, ಐದೊಂದ್ಲ ಐದು ಸೇರಿದಂತೆ ಹಲವರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











