»   » ನಟ ಹರೀಶ್ ರಾಜ್‌ಗೆ 'ಲಿಮ್ಕಾ ದಾಖಲೆ' ಪ್ರಮಾಣ ಪತ್ರ

ನಟ ಹರೀಶ್ ರಾಜ್‌ಗೆ 'ಲಿಮ್ಕಾ ದಾಖಲೆ' ಪ್ರಮಾಣ ಪತ್ರ

Posted By:
Subscribe to Filmibeat Kannada

ನಟ ಹರೀಶ್ ರಾಜ್ ರವರು ಆಕ್ಷನ್ ಕಟ್ ಹೇಳಿ, ನಟಿಸಿ ಜೊತೆಗೆ ತಾವೇ ನಿರ್ಮಾಣ ಮಾಡಿದ್ದ 'ಶ್ರೀ ಸತ್ಯನಾರಾಯಣ' ಎಂಬ ಭಕ್ತಿ ಪ್ರಧಾನ ಚಿತ್ರ 'ಲಿಮ್ಕಾ ಬುಕ್ ಆಫ್ ರೆಕಾರ್ಡ್'ಗೆ ಸೇರಿದ್ದು, ಈಗ ಚಿತ್ರಕ್ಕೆ ಪ್ರಮಾಣ ಪತ್ರ ದೊರೆದಿದೆ.

ಹರೀಶ್ ರಾಜ್ 'ಶ್ರೀ ಸತ್ಯ ನಾರಾಯಣ' ಚಿತ್ರದಲ್ಲಿ 16 ಪಾತ್ರಗಳಲ್ಲಿ ಒಬ್ಬರೇ ನಟಿಸಿದ್ದರು, ಭಾರತೀಯ ಚಿತ್ರರಂಗದಲ್ಲಿ ಇದು ಹೊಸ ದಾಖಲೆಯಾಗಿದ್ದು, ಒಬ್ಬನೇ ನಟ ಒಂದೇ ಚಿತ್ರದಲ್ಲಿ ಅತಿಹೆಚ್ಚು ಪಾತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಗೆ ಹರೀಶ್ ರಾಜ್ ಪಾತ್ರರಾಗಿದ್ದಾರೆ.

Harish Raj recieved 'Limca Book of Records Certificate for his 'Shree Satyanarayana movie

ಭಕ್ತಿ ಪ್ರಧಾನವಾದ 'ಶ್ರೀ ಸತ್ಯನಾರಾಯಣ' ಚಿತ್ರದಲ್ಲಿ ಹರೀಶ್ ರಾಜ್ ವ್ಯಾಸ ಮಹಾಮುನಿ, ಸತು ಮಹಾಮುನಿ, ಶೌನಕ ಮಹರ್ಷಿ, ನಾರದ ಮಹರ್ಷಿ, ಬಡ ಬ್ರಾಹ್ಮಣ, ಸುಂದರ, ಕಳ್ಳ, ರಾಜ ಚಂದ್ರಕೇತು ಸೇರಿದಂತೆ 16 ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಈ ಚಿತ್ರದ ಇಂಗ್ಲೀಷ್ ಸಬ್‌ಟೈಟಲ್‌ ಗಾಗಿ ಹರೀಶ್ ರಾಜ್ ಪ್ರಕೃತಿ ಬನವಾಸಿ ಬಳಿ ಹೋದಾಗ ಈ ಚಿತ್ರವನ್ನು 'ಲಿಮ್ಕಾ' ರೆಕಾರ್ಡ್‌ಗೆ ಕಳುಹಿಸಿಕೊಡಿ ಎಂದು ಸಲಹೆ ನೀಡಿದ್ದರಂತೆ. ಇವರ ಸಲಹೆ ಮೇರೆಗೆ ಹರೀಶ್ ರಾಜ್ ಕಳುಹಿಸಿಕೊಟ್ಟಿದ್ದ ಚಿತ್ರದ ನಟನ ಪಾತ್ರಗಳು, ನಟಿಯರ ಪಟ್ಟಿ ನೋಡಿ 'ಲಿಮ್ಕಾ ರೆಕಾರ್ಡ್‌' ಅಧ್ಯಕ್ಷರಾದ ವಿಜಯ್ ಗೋಸ್ ರವರು ಚಿತ್ರವನ್ನು 'ಲಿಮ್ಕಾ ಬುಕ್ ಆಫ್ ರೆಕಾರ್ಡ್'ಗೆ ಸೇರ್ಪಡೆ ಮಾಡಿದ್ದು ಪ್ರಮಾಣ ಪತ್ರ ಕೊಟ್ಟಿದ್ದಾರೆ.

ಪ್ರಮಾಣ ಪತ್ರವನ್ನು ಇಂದು(ಜುಲೈ 25) ಹರೀಶ್ ರಾಜ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರ ಸಮ್ಮುಖದಲ್ಲಿ ಪಡೆಯಲು ತೀರ್ಮಾನಿಸಿದ್ದಾರೆ.

Harish Raj recieved 'Limca Book of Records Certificate for his 'Shree Satyanarayana movie

ಅಂದಹಾಗೆ ಈ ಹಿಂದೆ ಬಾಲಿವುಡ್ ನ ಸಂಜೀವ್ ರಾವ್ 'ನಯಾ ದಿನ್ ನಯೀ ರಾತ್' ಚಿತ್ರದಲ್ಲಿ 9 ಪಾತ್ರಗಳಲ್ಲಿ, ತಮಿಳಿನ 'ದಶಾವತಾರಂ' ಚಿತ್ರದಲ್ಲಿ ಕಮಲ್ ಹಾಸನ್‌ ರವರು 10 ಪಾತ್ರಗಳಲ್ಲಿ, 'ವಾಟ್ಸ್‌ ಯುವರ್ ರಾಶಿ' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ 12 ಪಾತ್ರಗಳಲ್ಲಿ ನಟಿಸಿದ್ದರು. ಈಗ ಈ ಎಲ್ಲಾ ದಾಖಲೆಗಳನ್ನು ಹರೀಶ್ ರಾಜ್ ಬ್ರೇಕ್ ಮಾಡಿದ್ದಾರೆ. ಹರೀಶ್ ರಾಜ್ ಈಗ ಮಣಿರತ್ನಂ ನಿರ್ದೇಶನದ ತಮಿಳಿನ 'ಕಾಟ್ರವೈಲಿಡೈ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
Kannada Actor and Director Harish Raj has recieved 'Limca Book of Records' Certificate for his 'Shree Satyanarayana' movie. This Movie is directed by Harish Raj And also he played 16 diferent roles in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada