ಟಾಲಿವುಡ್ಡಿಗೆ ಹಾರಿದ 'ಭಜರಂಗಿ' ನಿರ್ದೇಶಕ ಹರ್ಷ
ನೃತ್ಯ ನಿರ್ದೇಶಕ ಹರ್ಷ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. ಅನೇಕ ಹಾಡುಗಳಿಗೆ ಸ್ಟೈಲಿಶ್ ಕೊರಿಯೋಗ್ರಾಫಿ ನೀಡಿರುವ ಹರ್ಷ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಕೂಡ ಹೌದು.
'ಭಜರಂಗಿ', 'ವಜ್ರಕಾಯ' ಅಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಹರ್ಷ ಇದೀಗ ಟಾಲಿವುಡ್ ಗೆ ಹಾರಿದ್ದಾರೆ. ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ ಜೊತೆ ಕೆಲಸ ಮಾಡುತ್ತಿದ್ದಾರೆ.

ನಂಬಿದ್ರೆ ನಂಬಿ, ರವಿತೇಜಾ ಅಭಿನಯಿಸುತ್ತಿರುವ ಹೊಚ್ಚ ಹೊಸ 'ಬೆಂಗಾಲ್ ಟೈಗರ್' ಚಿತ್ರದ ಮೂರು ಹಾಡುಗಳಿಗೆ ಹರ್ಷ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ನಲ್ಲಿ ಶೂಟಿಂಗ್ ಕೂಡ ಶುರುವಾಗಿದೆ. ಆ ಮೂಲಕ ಮೊಟ್ಟ ಮೊದಲ ಬಾರಿಗೆ ತೆಲುಗು ಸಿನಿ ಅಂಗಳಕ್ಕೆ ಹರ್ಷ ಕಾಲಿಟ್ಟಿದ್ದಾರೆ.
ಅಷ್ಟಕ್ಕೂ, ಹರ್ಷ ನೃತ್ಯ ಸಂಯೋಜನೆಯಲ್ಲಿ ರವಿತೇಜಾ ಸ್ಟೆಪ್ಸ್ ಹಾಕುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ 'ವಜ್ರಕಾಯ' ಚಿತ್ರದಲ್ಲಿ ಹರ್ಷ ಜೊತೆ ರವಿತೇಜಾ ವರ್ಕ್ ಮಾಡಿದ್ದಾರೆ. ['ವಜ್ರಕಾಯ' ಶಿವಣ್ಣ ಜೊತೆ ರವಿತೇಜಾ ಆಟ ನೋಡಿ...]
'ವಜ್ರಕಾಯ' ಚಿತ್ರದಲ್ಲಿ ಹರ್ಷ ಅವರ ಟ್ಯಾಲೆಂಟ್ ನೋಡಿ ಟಾಲಿವುಡ್ ಗೆ ಬುಲಾವ್ ನೀಡಿದರಂತೆ ರವಿತೇಜಾ. ಮೊದಲ ಬಾರಿಗೆ ಕನ್ನಡೇತರ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡುತ್ತಿರುವುದು ಹರ್ಷ ಅವರಿಗೆ ಖುಷಿ ಕೊಟ್ಟಿದೆ.


Click it and Unblock the Notifications











