ಬೆದರಿಸಿ ಬಲವಂತದಿಂದ ನನ್ನ ಮದುವೆ ಮಾಡಲಾಗಿದೆ, ಕನ್ನಡ ಚಿತ್ರರಂಗದ ಹಿರಿಯ ನಟಿಯ ವಿರುದ್ದ ನಿರ್ದೇಶಕ ದೂರು...!

ಮದುವೆ ಎಂಬ ಮೂರಕ್ಷರದ ಸಂಸ್ಕಾರ ಒಂದು ರೀತಿಯಲ್ಲಿ ಕಾನೂನಾತ್ಮಕ ಒಪ್ಪಂದವೂ ಹೌದು. ಇಂತಹ ಮದುವೆಯನ್ನು ಬಲವಂತವಾಗಿ ಮಾಡಲಾಗಿದೆ ಎಂದು ಕನ್ನಡ ಚಿತ್ರದ ನಿರ್ದೇಶಕ ಕಣ್ಣೀರು ಹಾಕಿದ್ದಾರೆ. ಕಟ್ಟಿಕೊಂಡ ಪತ್ನಿಯ ವಿರುದ್ದವೇ ದೂರು ನೀಡಿದ್ದಾರೆ.

ಹೌದು, ಅಸಲಿಗೆ ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದವರು ಶಶಿಕಲಾ. ತೀರಾ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಶಶಿಕಲಾ ಮಗನನ್ನು ಸಾಕಿ ಬೆಳಸಲು ಚಿತ್ರರಂಗಕ್ಕೆ ಬಂದರು. ನಟನಾ ವೃತ್ತಿಯನ್ನು ಶುರು ಮಾಡಿದರು.

harshavardhan-has-registered-a-complaint-against-his-wife-actress-shashikala-alleging-forced-marri

ಇಂಥಾ ಶಶಿಕಲಾ ಕೊರೊನಾ ಕಾಲದಲ್ಲಿ ಪ್ರಜಾರಾಜ್ಯ ಎಂಬ ಚಿತ್ರವನ್ನು ಮಾಡಿದ್ದರು. ಡಿಜೆ ಹರ್ಷವರ್ಧನ ಅಲಿಯಾಸ್ ವಿಜಯ ಭಾರ್ಗವ ಈ ಚಿತ್ರದ ನಿರ್ದೇಶಕರು. ಹೀಗೆ ಚಿತ್ರದ ನೆಪದಲ್ಲಿ ಪರಿಚಯರಾದ ಇಬ್ಬರು ಆ ನಂತರ ಸಹಬಾಳ್ವೆ ನಡೆಸಲು ಮುಂದಾದರು. ಆದರೆ, ಆ ನಂತರ ಅದೊಂದು ದಿನ ಬೇರೆ ಹುಡುಗಿಯ ಹಿಂದೆ ಹರ್ಷವರ್ಧನ್ ಓಡಿ ಹೋಗಿದ್ದರು. ಈ ಸಮಯದಲ್ಲಿ ಶಶಿಕಲಾ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಈ ಸಮಯದಲ್ಲಿ ಕಾಡಿ ಬೇಡಿ ದೂರು ವಾಪಸು ಪಡೆಯುವಂತೆ ಶಶಿಕಲಾ ಅವರಿಗೆ ಹೇಳಿದ್ದ ಹರ್ಷವರ್ಧನ್ ಆ ನಂತರ ರಿಜಿಸ್ಟರ್ ಮ್ಯಾರೇಜ್ ಆದರು. ಆದರೆ ಈಗ ಶಶಿಕಲಾ ವಿರುದ್ಧ ಹರ್ಷವರ್ಧನ್ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದಾರೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವ ಹರ್ಷವರ್ಧನ್, ಶಶಿಕಲಾ ನನಗೆ ಬೆದರಿಕೆ ಹಾಕಿ ಬಲವಂತದಿಂದ ಮದುವೆ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನನ್ನ ಜೊತೆ ಸಂಬಂಧದಲ್ಲಿ ಇದ್ದರೆ ನಿನ್ನ ಸಿನಿಮಾವನ್ನು ನಿರ್ಮಾಣ ಮಾಡುತ್ತೇನೆ ಎಂದು ಶಶಿಕಲಾ ಹೇಳಿದ್ದರು ಅದರಂತೆ ನಾನು ಮದುವೆಯಾಗುವುದಿಲ್ಲ ಆದರೆ ಲಿವ್ ಇನ್ ರಿಲೇಷನ್‌ನಲ್ಲಿ ಇರುವುದಾಗಿ ಹೇಳಿದ್ದೇ ಅವರ ಮಾತಿಗೆ ಒಪ್ಪಿಕೊಂಡೆ ಎಂದು ತಮ್ಮ ದೂರಿನಲ್ಲಿ ತಿಳಿಸಿರುವ ಹರ್ಷವರ್ಧನ್ ಆ ನಂತರ ಹೆದರಿಸಿ ಬೆದರಿಸಿ ಅವರು ನನ್ನನ್ನೂ ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಮದುವೆ ನಂತರ ಮನೆಗೆ ನಿರ್ದೇಶಕರು ನಿರ್ಮಾಪಕರು ಬಂದಾಗ ನನ್ನನ್ನೂ ಮನೆಯಿಂದ ಹೊರಗೆ ಕಳುಹಿಸಲಾಗುತ್ತಿತ್ತು ಈ ಕಾರಣಕ್ಕೆ ಇದೆಲ್ಲ ಸರಿ ಹೊಂದುವುದಿಲ್ಲ ಎಂದು ನಾನೇ ಶಶಿಕಲಾ ಜೊತೆ ಸಂಬಂಧ ಮುರಿದುಕೊಂಡು ಹೊರಬಂದೆ ಎಂದು ಹೇಳಿದ್ದಾರೆ. ಮನೆಯಾಚೆ ಬಂದ ನಂತರ ತಾಯಿಯೂ ತನ್ನ ಜೊತೆ ಇರುವ ಕಾರಣಕ್ಕೆ ಶಶಿಕಲಾ ಜೊತೆ ವಾಸ ಮಾಡಲು ನಾನು ಒಪ್ಪಿಕೊಂಡೆ ಆದರೆ ಕಳೆದ ವರ್ಷ ಆಗಸ್ಟ್ ನಲ್ಲಿ ನನ್ನ ಮತ್ತು ತಾಯಿಯನ್ನು ಮನೆಯಾಚೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಅವರಿಂದ ದೂರ ಬಂದರೂ ಕೂಡ ಕರೆ ಮಾಡಿ ಬೇರೆ ಬೇರೆ ರೀತಿಯಲ್ಲಿ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

More from Filmibeat

Read more about: marriage filmibeat news complaint
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X