Harshika-Bhuvan: ಸರಳವಾಗಿ ನಡೆದ ಹರ್ಷಿಕಾ ಮೆಹಂದಿ ಶಾಸ್ತ್ರ, ಪಿಂಕ್ ಸೀರೆಯಲ್ಲಿ ಮದುಮಗಳ ಮೆರಗು
ಚಂದನವನದ ಮುದ್ದು ಜೋಡಿ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಾಪಂತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಆಗಸ್ಟ್ 24 ರಂದು ಕೊಡಗಿನಲ್ಲಿ ಇಬ್ಬರ ಮದುವೆ ನಡೆಯುತ್ತಿದ್ದು, ಅಪ್ಪಟ ಕೊಡವ ಶೈಲಿಯಲ್ಲಿ ಸಂಪ್ರದಾಯಗಳು ನಡೆಯುತ್ತಿವೆ.
ಮದುವೆ ಸಂಭ್ರಮದಲ್ಲಿ ಮೆಹಂದಿ ಶಾಸ್ತ್ರ ನಡೆದಿದ್ದು, ಅತಿ ಸರಳವಾಗಿ ನಟಿ ಹರ್ಷಿಕಾ ಪೂಣಚ್ಚ ಮೆಹಂದಿ ಹಾಕಿಸಿಕೊಂಡಿದ್ದಾರೆ. ಕಾರ್ಯಕ್ರಮ ಕೂಡ ಸರಳವಾಗಿ ನಡೆದಿದೆ. ಕೈಯಲ್ಲಿನ ಮದರಂಗಿ ಡಿಸೈನ್ ಕೂಡ ಸಿಂಪಲ್ ಆಗಿದೆ. ಹರ್ಷಿಕಾ ತಮ್ಮ ಕೈಗಳಲ್ಲಿ ಭುವನ್ ಮತ್ತು ತಮ್ಮ ಹೆಸರನ್ನು ಸೂಚಿಸುವ ಅಕ್ಷರಗಳನ್ನು ಬರೆಸಿಕೊಂಡಿದ್ದಾರೆ.

ಮದರಂಗಿಯಲ್ಲಿ H ಹಾಗೂ B ಅಕ್ಷರ
ಮೆಹಂದಿ ಶಾಸ್ತ್ರದಲ್ಲಿ ಮದುಮಕ್ಕಳ ಕೈಯಲ್ಲಿನ ಮದರಂಗಿಯಲ್ಲಿ ಇಬ್ಬರ ಹೆಸರುಗಳನ್ನು ಬರೆಸಿಕೊಳ್ಳುವುದು ಸಹಜ. ಉತ್ತರ ಭಾರತದಲ್ಲಿ ಮದರಂಗಿಯೊಳಗೆ ಅಡಗಿರುವ ಸಂಗಾತಿಯ ಹೆಸರನ್ನು ಹುಡುಕುವುದೇ ಒಂದು ಸಂಪ್ರದಾಯವಿದೆ. ಇದೆ ರೀತಿ ಹರ್ಷಿಕಾ ಕೂಡ ತಮ್ಮ ಕೈಯಲ್ಲಿ ಹೆಸರು ಬರೆಸಿಕೊಂಡಿದ್ದಾರೆ. ಅಂದರೆ ಇಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ತಮ್ಮ ಮೆಹಂದಿಯಲ್ಲಿ ಸೇರಿಸಿಕೊಂಡಿದ್ದಾರೆ. ಮೆಹಂದಿಯಲ್ಲಿ H (ಹರ್ಷಿಕಾ) ಹಾಗೂ B (ಭುವನ್) ಎಂದು ಬರೆಸಿಕೊಂಡಿದ್ದಾರೆ.
ಪಿಂಕ್ ಸೀರೆಯಲ್ಲಿ ಮಿಂಚಿದ ಮುದ್ದು ಚಿಟ್ಟೆ
ಸ್ಯಾಂಡಲ್‌ವುಡ್ ಸೇರಿ ಹಲವು ಭಾಷೆಗಳಲ್ಲಿ ಅಭಿನಯಿಸುವ ನಟಿ ಹರ್ಷಿಕಾ ಪೂಣಚ್ಚ ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಪಿಂಕ್ ಸೀರೆಯುಟ್ಟು ಅಪ್ಸರೆಯಂತೆ ಕಾಣಿಸುತ್ತಿದ್ದಾರೆ. ಅಪ್ಪಟ ಕೊಡವ ಶೈಲಿಯಲ್ಲಿ ಮದುವೆ ನಡೆಯುತ್ತಿದ್ದು, ಹರ್ಷಿಕಾ ಕುಡ ಕೊಡವ ಸಂಪ್ರದಾಯದಂತೆ ಸೀರೆ ಧರಿಸಿದ್ದಾರೆ. ಪಿಂಕ್ ಸೀರೆ ಜೊತೆಗೆ ನ್ಯಾಚೂರಲ್ ಮೆಕಪ್ ಲುಕ್ ಮದುಮಗಳಿಗೆ ಮತ್ತಷ್ಟು ಕಳೆ ನೀಡಿದೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮದುವೆ ಸಮಾರಂಭ
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮದುವೆ ಸಮಾರಂಭಕ್ಕೆ ಕಳೆದ ಕೆಲವು ದಿನಗಳಿಂದ ಸಿದ್ಧತೆ ನಡೆಯುತ್ತಿತ್ತು. ಕಳೆದ 12 ವರ್ಷಗಳಿಂದ ಪ್ರೀತಿಯಲ್ಲಿದ್ದ ಭುವನ್ ಹಾಗೂ ಹರ್ಷಿಕಾ ಪ್ರೀತಿಗೆ ದಾಂಪತ್ಯದ ಮುದ್ರೆ ಬೀಳುತ್ತಿದೆ. ಮದುವೆ ಘೋಷಣೆಯಾದ ಬೆನ್ನಲ್ಲೆ ಈ ಜೋಡಿ ಹಲವು ವಿಷಯಗಳಿಂದ ಸುದ್ದಿಯಲ್ಲಿದ್ದರು. ಅದರಲ್ಲಿ ನಟಿ ನಿರ್ಮಾಪಕಿ ಆಗಿದ್ದು ಕೂಡ ಒಂದು.
ತನ್ನ ಭಾವಿ ಪತಿ ಭುವನ್‌ಗಾಗಿ ನಟಿ ಹರ್ಷಿಕಾ ಪೂಣಚ್ಚ 'ಭುವನಂ ಎಂಟರ್ಟೇನ್ಮೆಂಟ್' ಎಂಬ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಈ ಸಂಸ್ಥಡ ಅಡಿಯಲ್ಲಿ 'ಭುವನಂ ಶ್ರೇಷ್ಠಮ್ ಗಚ್ಚಾಮಿ' ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಈ ಸಿನಿಮಾ ಮೂಲಕ ಹರ್ಷಿಕಾ ಪೂಣಚ್ಚ ನಿರ್ಮಾಪಕಿಯಾಗಿದ್ದಾರೆ.

ಇನ್ನು, ಭುವನ್ ಪೊನ್ನಣ್ಣ ತಮ್ಮ ತೋಟದ ಮನೆಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದು, ಮದುವೆಗೂ ಮೊದಲೇ. ಭಾವಿ ಪತ್ನಿ ಹರ್ಷಿಕಾ ದೀಪವಿಡಿದು ಗೃಹಪ್ರವೇಶ ಮಾಡಿದ್ದಾರೆ.


Click it and Unblock the Notifications











