'ಚಿಟ್ಟೆ'ಗಾಗಿ ರಸ್ತೆಗಿಳಿದ ಕೊಡಗಿನ ಕುವರಿ ಹರ್ಷಿಕಾ
ನಟಿ ಹರ್ಷಿಕಾ ಪೂಣಚ್ಚ 'ಚಿಟ್ಟೆ'ಗಾಗಿ ರಸ್ತೆಗಿಳಿದಿದ್ದಾರೆ, ಹಾಗಂತ ಹರ್ಷಿಕಾ ನಿಜವಾದ ಚಿಟ್ಟೆ ಹಿಡಿಯುತ್ತಿಲ್ಲ. ಹರ್ಷಿಕಾ ತಮ್ಮ ಮುಂದಿನ ಸಿನಿಮಾದ ಪ್ರಮೋಷನ್ ಕೆಲಸಕ್ಕಾಗಿ ತಾವೇ ಅಭಿಮಾನಿಗಳನ್ನ ನೇರವಾಗಿ ಭೇಟಿ ಮಾಡಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ಈ ಹಿಂದೆ 'ರಂಗಪ್ಪ ಹೋಗ್ಬಿಟ್ನಾ' ಸಿನಿಮಾ ಮಾಡಿದ್ದ ನಿರ್ದೇಶಕ ಎಂ.ಎಲ್ ಪ್ರಸನ್ನ 'ಚಿಟ್ಟೆ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 'ಚಿಟ್ಟೆ' ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಲವ್‌ಸ್ಟೋರಿ ಕೂಡ ಒಳಗೊಂಡಿದೆ. ಹಾಗಾಗಿ ಸಹಜವಾಗಿಯೇ ಹರ್ಷಿಕಾ ಖುಷಿಯಲ್ಲಿದ್ದಾರೆ.
ಹರ್ಷಿಕಾ ಜೊತೆಯಾಗಿ ಯಶಸ್ ಸೂರ್ಯ ಅಭಿನಯ ಮಾಡುತ್ತಿದ್ದು, 'ಚಿಟ್ಟೆ' ಹೆಸರೇ ಹೇಳುವಂತೆ ಸಿನಿಮಾ ಕೂಡ ಕಲರ್ ಫುಲ್ ಆಗಿರಲಿದೆಯಂತೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಮತ್ತು ಹಾಡುಗಳು ಸಖತ್ ಫೇಮಸ್ ಆಗಿವೆ.

ಅಭಿಮಾನಿಗಳು ಕೈನಲ್ಲಿ ಚಿಟ್ಟೆ ಸಿಂಬಲ್ ಮಾಡಿ ಹರ್ಷಿಕಾಗೆ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಹೊಸ ರೀತಿಯ ಸಿನಿಮಾ ಪ್ರಮೋಷನ್ ಗೆ ಹರ್ಷಿಕಾ ಚಾಲನೆ ಕೊಟ್ಟಿದ್ದಾರೆ. ಜೂನ್ 29 ರಂದು 'ಚಿಟ್ಟೆ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.


Click it and Unblock the Notifications











