ರಜೆಯ ಮಜಾಕ್ಕಾಗಿ ಸಾಗರದಾಚೆ ಹಾರಿದ ಕನ್ನಡ ತಾರೆಯರು

By Pavithra

Recommended Video

ವಿದೇಶದಲ್ಲಿ ಯಾವೆಲ್ಲಾ ಸ್ಯಾಂಡಲ್‌ವುಡ್ ಸ್ಟಾರ್ಸ್ ಇದ್ದಾರೆ..? | Filmibeat Kannada

ಸಿನಿಮಾ ತಾರೆಯರು ಎಂದರೆ ಸದಾ ಬ್ಯುಸಿ ಆಗಿರುತ್ತಾರೆ. ಚಿತ್ರೀಕರಣದಲ್ಲೇ ಅವರ ಮುಕ್ಕಾಲು ಭಾಗ ಜೀವನ ಕಳೆದು ಹೋಗುತ್ತೆ. ಆಗಿದ್ದರೂ ಸ್ಟಾರ್ ಗಳು ತಮ್ಮ ವೈಯಕ್ತಿಕ ಜೀವನಕ್ಕಾಗಿ ಕೆಲ ಸಮಯವನ್ನು ಮುಡಿಪಾಗಿಡುತ್ತಾರೆ.

ಸದಾ ಬ್ಯುಸಿ ಆಗಿರುವ ಲೈಫ್ ನಲ್ಲಿ ಕೊಂಚ ಫ್ರೀ ಮಾಡಿಕೊಂಡು ಸ್ವಲ್ಪ ಸಮಯವನ್ನು ತಮಗಾಗಿ ಮೀಸಲಿಟ್ಟುಕೊಳ್ಳುತ್ತಾರೆ. ಸದ್ಯ ಆಷಾಡ ಮಾಸ. ಸಿನಿಮಾರಂಗದಲ್ಲಿಯೂ ಅಂತಹ ಬೆಳವಣಿಗಳೇನು ಇಲ್ಲ. ಹೊಸ ಸಿನಿಮಾಗಳು, ಒಳ್ಳೆ ಕೆಲಸಗಳನ್ನು ಈ ಸಂದರ್ಭದಲ್ಲಿ ಮಾಡುವುದಿಲ್ಲ. ಇದೇ ಸರಿಯಾದ ಸಮಯ ಎಂದುಕೊಂಡ ಸ್ಟಾರ್ ಗಳು ಸಾಗರದಾಚೆ ತಮ್ಮ ರಜೆಯನ್ನು ಮಜಾ ಮಾಡುತ್ತಿದ್ದಾರೆ.

ಹಾಗಾದರೆ, ಯಾವೆಲ್ಲಾ ಸ್ಟಾರ್ ಗಳು ಸದ್ಯ ರಜೆಯ ಖುಷಿಯಲ್ಲಿದ್ದಾರೆ. ಯಾರು ಯಾವ ಜಾಗಕ್ಕೆ ಪ್ರವಾಸಕ್ಕಾಗಿ ಹೋಗಿದ್ದಾರೆ. ಅಲ್ಲಿಂದ ನಿಮಗಾಗಿ ಸಿಕ್ಕಿರುವ ಅಪ್ಡೇಟ್ ಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಬೆಲ್ಜಿಯಂನಲ್ಲಿ ಹರ್ಷಿಕಾ ಪೂಣಚ್ಚ

ಬೆಲ್ಜಿಯಂನಲ್ಲಿ ಹರ್ಷಿಕಾ ಪೂಣಚ್ಚ

ನಟಿ ಹರ್ಷಿಕಾ ಪೂಣಚ್ಚ ಆಗಾಗ ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೆ ಲಂಡನ್ ಸುತ್ತಿ ಬಂದಿದ್ದ ನಟಿ ಈಗ ಬೆಲ್ಜಿಯಂನಲ್ಲಿ ಬೀಟ್ ಹಾಕುತ್ತಿದ್ದಾರೆ. ಟುಮಾರೋ ಲ್ಯಾಂಡ್ ನಲ್ಲಿ ಸುತ್ತಾಡಿ ಅಲ್ಲಿಯೂ ಕೊಡವ ಡ್ಯಾನ್ಸ್ ಮಾಡಿ ಸಖತ್ ಸುದ್ದಿ ಮಾಡುತ್ತಿದ್ದಾರೆ ಹರ್ಷಿಕಾ ಪೂಣಚ್ಚ.

ಅಮೂಲ್ಯ ಪ್ಯಾರಿಸ್ ನಲ್ಲಿ ಪ್ರವಾಸ

ಅಮೂಲ್ಯ ಪ್ಯಾರಿಸ್ ನಲ್ಲಿ ಪ್ರವಾಸ

ನಟಿ ಅಮೂಲ್ಯ ಪತಿ ಜಗದೀಶ್ ಜೊತೆಯಲ್ಲಿ ಪ್ಯಾರಿಸ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಪ್ಯಾರಿಸ್ ನಲ್ಲಿರುವ ಫೋಟೋಗಳನ್ನು ಅಮೂಲ್ಯ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.

ಸಮುದ್ರ ತೀರದಲ್ಲಿ 'ಎರಡನೇ ಸಲ' ಬೆಡಗಿ

ಸಮುದ್ರ ತೀರದಲ್ಲಿ 'ಎರಡನೇ ಸಲ' ಬೆಡಗಿ

'ಎರಡನೇ ಸಲ' ಸಿನಿಮಾ ಖ್ಯಾತಿಯ ನಟಿ ಸಂಗೀತಾ ಭಟ್ ಕೂಡ ಪ್ರವಾಸದ ಮೂಡ್ ನಲ್ಲಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸಂಗೀತ ಪ್ರಯಾಣ ಆರಂಭಿಸಿದ್ದು ಸದ್ಯ ಗೋವಾದ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದ್ದಾರೆ. ಸಂಗೀತಾ ಭಟ್ ಲೀಸ್ಟ್ ನಲ್ಲಿ ನೋಡಬೇಕಿರುವ, ಸುತ್ತಾಡಬೇಕಿರುವ ಸ್ಥಳಗಳ ಪಟ್ಟಿ ದೊಡ್ಡದಾಗಿಯೇ ಇದೆಯಂತೆ.

ಟುಮಾರೋ ಲ್ಯಾಂಡ್ ನಲ್ಲಿ ಭುವನ್ ಪೊನ್ನಣ್ಣ

ಟುಮಾರೋ ಲ್ಯಾಂಡ್ ನಲ್ಲಿ ಭುವನ್ ಪೊನ್ನಣ್ಣ

'ಬಿಗ್ ಬಾಸ್' ಖ್ಯಾತಿಯ ನಟ ಭುವನ್ ಪೊನ್ನಣ್ಣ ಕೂಡ ವಾರಗಳಿಂದ ಬೆಲ್ಜಿಯಂನಲ್ಲಿ ಬೀಡು ಬಿಟ್ಟಿದ್ದಾರೆ. ಟುಮಾರೋ ಲ್ಯಾಂಡ್ ನಲ್ಲಿ ನಡೆಯುವ ಮ್ಯೂಸಿಕಲ್, ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಭಾಗಿ ಆಗುವ ಉದ್ದೇಶದಿಂದ ಭುವನ್ ಬೆಲ್ಜಿಯಂ ಗೆ ಪ್ರಯಾಣ ಬೆಳೆಸಿದ್ದಾರೆ.

More from Filmibeat

English summary
Kannada artists Harshika Poonaccha, Sangeeta Bhat, and many others are enjoying holiday abroad. All of these artists have uploaded photos taken on a tour of the social network.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X