ಭೋಜ್‌ಪುರಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ: ಆಶೀರ್ವಾದ ಕೇಳಿದ ನಟಿ
ಕನ್ನಡ ನಟಿ ಹರ್ಷಿಕಾ ಪೂಣಚ್ಚ ಉತ್ತರ ಭಾರತದ ಕಡೆ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿ ಕಳೆದ ತಿಂಗಳಲ್ಲಿ ಹೊರಬಿತ್ತು. ಭೋಜ್‌ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸಂತಸ ಹಂಚಿಕೊಂಡಿದ್ದರು.
ಇದೀಗ, ಭೋಜ್‌ಪುರಿ ನಟ ಪವನ್ ಸಿಂಗ್ ಜೊತೆಗಿನ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ನಟಿ ''ಭೋಜ್‌ಪುರಿ ಸಿನಿಮಾ ಆರಂಭಿಸುತ್ತಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ಬೇಕು'' ಎಂದು ಪೋಸ್ಟ್ ಹಾಕಿದ್ದಾರೆ.
ಕನ್ನಡ, ತೆಲುಗು, ಕೊಡುವ, ಮಲಯಾಳಂ, ತಮಿಳು ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟಿ ಎನಿಸಿಕೊಂಡಿದ್ದ ಹರ್ಷಿಕಾ ಈಗ ಭೋಜ್‌ಪುರಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿ ಅಪರೂಪದ ದಾಖಲೆ ಬರೆದಿದ್ದಾರೆ.

ಬಹುಶಃ ಭೋಜ್‌ಪುರಿ ಸಿನಿಮಾದಲ್ಲಿ ನಟಿಸಿರುವ ಕೆಲವೇ ಕೆಲವು ಸೌತ್ ಇಂಡಸ್ಟ್ರಿಯರ ಪೈಕಿ ಹರ್ಷಿಕಾ ಸಹ ಒಬ್ಬರು ಎನ್ನುವುದು ಗಮನಾರ್ಹ.
ಅಂದ್ಹಾಗೆ, ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಸಿನಿಮಾದ ಚಿತ್ರೀಕರಣ ಈಗಾಗಲೇ ಲಂಡನ್‌ನಲ್ಲಿ ನಡೆದಿದೆ. ಶೇಕಡಾ 50 ರಷ್ಟು ಶೂಟಿಂಗ್ ಮಾಡಲಾಗಿತ್ತು. ಚಿತ್ರದ ಸಂಪೂರ್ಣ ಚಿತ್ರೀಕರಣ ಲಂಡನ್‌ನಲ್ಲಿಯೇ ನಡೆಯಲಿದೆ. ಹರ್ಷಿಕಾ ಪೂಣಚ್ಚ ಲಂಡನ್‌ನ ಶ್ರೀಮಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
Recommended Video
ಸಿನಿಮಾವನ್ನು ಯಾಶಿ ಪ್ರೊಡಕ್ಷನ್‌ನಲ್ಲಿ ಅಭಯ್ ಸಿನ್ಹಾ ಎಂಬುವರು ನಿರ್ಮಿಸುತ್ತಿದ್ದಾರೆ. ಪ್ರೇಮಾಂಶು ಸಿಂಗ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications