ಕ್ವಾರಂಟೈನ್ ತಪ್ಪಿಸಿಕೊಂಡರೇ ಲಂಡನ್‌ನಿಂದ ಮರಳಿದ ಹರ್ಷಿಕಾ ಪೂಣಚ್ಚ? ಸ್ಪಷ್ಟನೆ

ನಟಿ ಹರ್ಷಿಕಾ ಪೂಣಚ್ಚ ಲಂಡನ್‌ನಿಂದ ವಾಪಸ್ ಬಂದಿದ್ದಾರೆ ಆದರೆ ನಿಯಮಾನುಸಾರ ಕ್ವಾರಂಟೈನ್ ಆಗಿಲ್ಲ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ ಹರ್ಷಿಕಾ ಪೂಣಚ್ಚ.

ನಾನು ಲಂಡನ್‌ಗೆ ಹೋಗಿದ್ದಿದ್ದು ನಿಜ, ಆದರೆ ಲಂಡನ್‌ನಿಂದ ವಾಪಸ್ ಬಂದು ಈಗಾಗಲೇ ಎರಡು ವಾರಗಳ ಮೇಲಾಯಿತು. ಆದರೆ ನಾನು ಇನ್ನೂ ಲಂಡನ್‌ನಲ್ಲಿ ಇದ್ದೀನೆಂದು ಕೆಲವೆಡೆ, ಕೆಲವು ದಿನಗಳ ಹಿಂದಷ್ಟೆ ವಾಪಸ್ಸಾಗಿದ್ದೇನೆ ಎಂದು ಇನ್ನೊಂದು ವರದಿಯಲ್ಲಿ ಹೇಳಲಾಗುತ್ತಿದೆ.

ಆದರೆ ನಾನು ಲಂಡನ್‌ನಿಂದ ವಾಪಸ್ಸಾಗಿ ಎರಡು ವಾರದ ಮೇಲಾಯಿತು. ಕಳೆದ ಎರಡು ವಾರದಿಂದ ಬೆಂಗಳೂರಿನಲ್ಲಿಯೇ ಇದ್ದೇನೆ. ಒಂದು ವಾರದ ಹಿಂದೆ ಬೆಂಗಳೂರಿನಲ್ಲಿಯೇ ಒಂದು ಫೊಟೊ ಶೂಟ್ ಸಹ ಮಾಡಿಸಿದ್ದೇನೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

ಮನವಿ ಮಾಡಿದ ಹರ್ಷಿಕಾ ಪೂಣಚ್ಚ

ನಾನು ಲಂಡನ್‌ನಲ್ಲಿದ್ದಾಗ ತೆಗೆಸಿಕೊಂಡಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಇದಕ್ಕೆ ಕೆಲವರು ಗೊಂದಲಕ್ಕೆ ಈಡಾಗಿ, ನಾನಿನ್ನೂ ಲಂಡನ್‌ನಲ್ಲಿಯೇ ಇದ್ದೀನಿ ಎಂದುಕೊಂಡಂತಿದ್ದಾರೆ. ನಾನು ಬೆಂಗಳೂರಿನಲ್ಲಿಯೇ ಇದ್ದೀನಿ, ದಯವಿಟ್ಟು ಯಾರೂ ತಪ್ಪು ಮಾಹಿತಿ ವರದಿ ಮಾಡಬೇಡಿ ಎಂದು ಹರ್ಷಿಕಾ ಮನವಿ ಮಾಡಿದ್ದಾರೆ.

ಲಂಡನ್‌ನಿಂದ ಬಂದವರ ಮೇಲೆ ನಿಗಾ

ಲಂಡನ್‌ನಿಂದ ಬಂದವರ ಮೇಲೆ ನಿಗಾ

ಲಂಡನ್‌ನಿಂದ ಅಥವಾ ಯೂರೋಪ್ ರಾಷ್ಟ್ರಗಳಿಂದ ಭಾರತಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇಡಲು ಸರ್ಕಾರ ನಿರ್ಧರಿಸಿದೆ. ಯುಕೆ ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿರುವ ಕಾರಣ ಈ ನಿರ್ಣಯ ತೆಗೆದುಕೊಂಡಿದೆ ಸರ್ಕಾರ.

ಡಿಸೆಂಬರ್ 31 ರ ವರೆಗೆ ವಿಮಾನ ಬ್ಯಾನ್

ಡಿಸೆಂಬರ್ 31 ರ ವರೆಗೆ ವಿಮಾನ ಬ್ಯಾನ್

ಡಿಸೆಂಬರ್ 31 ರ ವರೆಗೆ ಯುಕೆಯಿಂದ ಬರುವ ಎಲ್ಲಾ ವಿಮಾನಗಳನ್ನು ಬ್ಯಾನ್ ಮಾಡಲಾಗಿದೆ. ಅಲ್ಲದೆ ಲಂಡನ್‌ನಿಂದ ವಾಪಸ್ ಬಂದವರನ್ನು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಸರ್ಕಾರ ಆದೇಶಿಸಿದೆ.

Recommended Video

Roberrt Release ಲೇಟ್ ಆಗ್ತಾ ಇರೋದಕ್ಕೆ ಕಾರಣ ಹೇಳಿದ Tarun Sudhir | Filmibeat Kannada
ಭೊಜಪುರಿ ಸಿನಿಮಾದ ಚಿತ್ರೀಕರಣ

ಭೊಜಪುರಿ ಸಿನಿಮಾದ ಚಿತ್ರೀಕರಣ

ಹರ್ಷಿಕಾ ಪೂಣಚ್ಚ ಭೋಜಪುರಿ ಸಿನಿಮಾದ ಚಿತ್ರೀಕರಣಕ್ಕಾಗಿ ಲಂಡನ್‌ಗೆ ತೆರಳಿದ್ದರು. ಕೆಲ ವಾರಗಳ ಕಾಲ ಲಂಡನ್‌ನಲ್ಲಿಯೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಹರ್ಷಿಕಾ ಪೂಣಚ್ಚ, ಎರಡು ವಾರದ ಹಿಂದಷ್ಟೆ ಬೆಂಗಳೂರಿಗೆ ಮರಳಿದ್ದಾರೆ.

More from Filmibeat

English summary
Actress Harshika Poonacha said 'i am back from London two weeks before. Some people reported that i am still in London.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X