»   » ನಟಿ ಹರ್ಷಿಕಾ ಪೂಣಚ್ಚ ವಿರುದ್ಧ ದೂರು

ನಟಿ ಹರ್ಷಿಕಾ ಪೂಣಚ್ಚ ವಿರುದ್ಧ ದೂರು

Posted By:
Subscribe to Filmibeat Kannada
ನಟಿ ಹರ್ಷಿಕಾ ಪೂಣಚ್ಚ ವಿರುದ್ಧ ನಿರ್ಮಾಪಕ ರಮೇಶ್ ಡಿ ರೆಡ್ಡಿ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಅವರ ನಿರ್ಮಾಣದ 'ಸೈಕಲ್' ಚಿತ್ರದ ಪ್ರಚಾರಕ್ಕೆ ಹರ್ಷಿಕಾ ಪೂಣಚ್ಚ ಬರುತ್ತಿದ್ದ ಎಂಬ ಆರೋಪವನ್ನು ನಿರ್ಮಾಪಕರು ಮಾಡಿದ್ದಾರೆ.

ಶಿವಾರ್ಜುನ್ ನಿರ್ದೇಶನದ ಈ ಚಿತ್ರ ಮೂರು ವರ್ಷಗಳ ಹಿಂದೆ ಸೆಟ್ಟೇರಿತ್ತು. ಸುದೀರ್ಘ ಸಮಯದ ಬಳಿಕ ಈ ಚಿತ್ರ ಜೂನ್ 28ರಂದು ತೆರೆಗೆ ಅಪ್ಪಳಿಸುತ್ತಿದೆ. ಈಗ ಬಿಡುಗಡೆಗೆ ಸಜ್ಜಾಗಿರುವ ತಮ್ಮ ಚಿತ್ರದ ಪ್ರಚಾರಕ್ಕೆ ಹರ್ಷಿಕಾ ಬರುತ್ತಿಲ್ಲ ಎಂಬ ದೂರು ನಿರ್ಮಪಕರದು.

ಈ ಬಗ್ಗೆ ಹರ್ಷಿಕಾ ಪೂಣಚ್ಚ ಹೇಳುವುದೇನೆಂದರೆ, ಈ ಚಿತ್ರದಲ್ಲಿ ಅಭಿನಯಿಸಿದಾಗ ನನ್ನ ವಯಸ್ಸು ಆಗ ಕೇವಲ 16 ವರ್ಷ. ಆ ಚಿತ್ರದ ಜೊತೆಗಿನ ನನ್ನ ಕಮಿಟ್ ಮೆಂಟ್ ಮುಗಿದಿದೆ. ಈಗ ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ರಮೇಶ್ ಡಿ ರೆಡ್ಡಿ ಅವರು ಸರಿಸುಮಾರು ರು.1.25 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ತಂದೆತಾಯಿ, ಭಾವಿ ಪತಿ ಹಾಗೂ ಭೂಗತ ಜಗತ್ತಿನ ಸಂಬಂಧಗಳ ಸುತ್ತ ಹೆಣೆದ ಕಥೆ ಇದಾಗಿದೆ. ಸಿನೆಟೆಕ್ ಸೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಧಮ್ ಕುಮಾರ್ ಚಿತ್ರದಲ್ಲಿ ಖಳನಟನ ಪಾತ್ರವನ್ನು ಪೋಷಿಸಿದ್ದಾರೆ. (ಏಜೆನ್ಸೀಸ್)

English summary
The producer Ramesh D Reddy is upset that actress Harshika Poonacha is not attending the promotion of the film Cycle. The producer is now contemplating complaining to the Film Chamber against her.
Please Wait while comments are loading...