ಮೀಟೂ ಎಫೆಕ್ಟ್: ಹರ್ಷಿಕಾ ಪೂಣಚ್ಚಗೆ ಹೆಸರಾಂತ ವ್ಯಕ್ತಿಗಳಿಂದ ಬೆದರಿಕೆ.!

Recommended Video

ಹೆಸರಾಂತ ವ್ಯಕ್ತಿಗಳಿಂದ ಹರ್ಷಿಕಾ ಪೂಣಚ್ಚಗೆ ಬೆದರಿಕೆ ಕರೆ | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅಂತಹ ಹಿರಿಯ ನಟರ ಮೇಲೆ ಆರೋಪ ಮಾಡಿದ್ರೆ, 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ನಿರ್ದೇಶಕ ರವಿಶ್ರೀವತ್ಸ ಮೇಲೆ ಅಟ್ಯಾಕ್ ಮಾಡಿದ್ದರು.

ಈ ಎರಡು ಪ್ರಕರಣಗಳ ಬೆಳವಣಿಗೆಯನ್ನ ಗಮನಿಸಿದ್ದ ನಟಿ ಹರ್ಷಿಕಾ ಪೂಣಚ್ಚ ತಮ್ಮ ಫೇಸ್ ಬುಕ್ ನಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಮೀಟೂ ಅಭಿಯಾನ ಒಂದು ಉತ್ತಮ ವೇದಿಕೆ, ಆದ್ರೆ, ಇದನ್ನ ಕೆಲವು ನಟಿಯರು ದುರಪಯೋಗಪಡಿಸಿಕೊಳ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು.

ಅಷ್ಟೇ ಅಲ್ಲದೇ ಮೀಟೂ ನಟಿಯರು ಗಾಂಜಾ ಸೇವನೆ ಮಾಡ್ಕೊಂಡು, ಈ ಬಗ್ಗೆ ಸ್ಕೆಚ್ ಹಾಕಿದ್ದನ್ನ, ಮತ್ತು ನಿರ್ಮಾಪಕರ ಬಳಿ ಕುಡಿದು ಅಸಭ್ಯವಾಗಿ ನಡೆದುಕೊಂಡಿದ್ದನ್ನ ನಾನು ಕಣ್ಣಾರೆ ಕಂಡಿದ್ದೇನೆ ಎಂಬ ಸ್ಫೋಟಕ ವಿಷ್ಯಗಳನ್ನ ಬಿಚ್ಚಿಟ್ಟಿದ್ದರು. ಇದರ ಪರಿಣಾಮ ಈಗ ಹರ್ಷಿಕಾ ಅವರಿಗೆ ಬೆದರಿಕೆ ಕರೆ ಬರ್ತಿವೆ. ಹೆಸರಾಂತ ವ್ಯಕ್ತಿಗಳಿಂದಲೇ ಬೆದರಿಕೆ ಬರ್ತಿವೆಯಂತೆ. ಯಾರದು.? ಮುಂದೆ ಓದಿ....

ಹೆಸರಾಂತ ವ್ಯಕ್ತಿಗಳು ಯಾರು.?

ಹೆಸರಾಂತ ವ್ಯಕ್ತಿಗಳು ಯಾರು.?

ಮೀಟೂ ಅಭಿಯಾನದ ಕುರಿತು ಕೆಲವ ನಟಿಯರ ನಡೆಯನ್ನ ಪ್ರಶ್ನಿಸಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಜೀವ ಬೆದರಿಕೆ ಕರೆಗಳು ಬರ್ತಿವೆಯಂತೆ. ಇದನ್ನ ಸ್ವತಃ ಹರ್ಷಿಕಾ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ''ಕಳೆದ ಎರಡು ದಿನಗಳಿಂದ ಕೆಲವು ಹೆಸರಾಂತ ವ್ಯತ್ತಿಗಳಿಂದ ನನಗೆ ಬೆದರಿಕೆ ಕರೆ ಹಾಗು ಮೆಸೇಜುಗಳು ಬರುತ್ತಿವೆ' ಎಂದು ಹೇಳಿಕೊಂಡಿದ್ದಾರೆ. ಆದ್ರೆ, ಯಾರದು ಎಂದು ಬಹಿರಂಗಪಡಿಸಿಲ್ಲ.

ಹಣದ ಆಮಿಷ ನೀಡುತ್ತಿದ್ದಾರೆ

ಹಣದ ಆಮಿಷ ನೀಡುತ್ತಿದ್ದಾರೆ

ಇನ್ನು ಈ ವಿಷ್ಯದಲ್ಲಿ ಹರ್ಷಿಕಾ ಅವರು ಮಾತನಾಡಬಾರದಂತೆ. ಅದಕ್ಕಾಗಿ ಹಣವನ್ನ ಕೊಡಲು ಆ ವ್ಯಕ್ತಿಗಳು ಸಿದ್ಧರಾಗಿದ್ದಾರಂತೆ. 'ಕೆಲವರು ನನ್ನ ಬಾಯಿ ಮುಚ್ಚಿಸಲು ಹಣದ ಆಮಿಷವನ್ನು ಒಡ್ಡಿದರು' ಎಂದು ಆರೋಪಿಸಿದ್ದಾರೆ. 'ಹೀಗೆ ಮುಂದುವರಿದಲ್ಲಿ ನಾನು ಪೊಲೀಸ್ ಕಂಪ್ಲೇಂಟ್ ಕೊಡಲು ಸಿದ್ಧಳಾಗಬೇಕಾಗುತ್ತದೆ' ಎಂದು ತಮ್ಮ ನಿಲುವನ್ನ ತಿಳಿಸಿದ್ದಾರೆ.

ನಾನು ಸತ್ಯದ ಪರ

ನಾನು ಸತ್ಯದ ಪರ

ಇನ್ನು ಈ ಬೆದರಿಕೆ ಹಾಗೂ ಆಮಿಷಕ್ಕೆ ನಾನು ಬಲಿಯಾಗಲ್ಲ. ನಾನು ಯಾವಾಗಲೂ ಸತ್ಯದ ಪರ ನ್ಯಾಯದ ಪರ ಎಂದು ಹರ್ಷಿಕಾ ತಿರುಗೇಟು ನೀಡಿದ್ದಾರೆ. '' ಸತ್ಯವನ್ನು ಮುಚ್ಚುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಕೆಚ್ಚೆದೆಯ ಕನ್ನಡತಿಯಾದ ನಾನು ಸದಾ ಸತ್ಯದ ಪರ' ಎಂದು ಬರೆದುಕೊಂಡು ಕೆಲವು ಸ್ಕ್ರೀನ್ ಶಾರ್ಟ್ ಹಾಕಿದ್ದಾರೆ.

ಆ ಮೆಸೆಜ್ ನಲ್ಲಿ ಏನಿದೆ.?

ಆ ಮೆಸೆಜ್ ನಲ್ಲಿ ಏನಿದೆ.?

ಇನ್ನು ಹರ್ಷಿಕಾ ಪೂಣಚ್ಚ ಅವರು ಪೋಸ್ಟ್ ಮಾಡಿರುವ ವಾಟ್ಸಾಪ್ ಸ್ಕ್ರೀನ್ ಶಾಟ್ ನಲ್ಲಿ ''ನೀನೊಬ್ಬ ಹುಡುಗಿಯಾಗಿ ಇನ್ನೊಬ್ಬ ಮಹಿಳೆಯ ವಿರುದ್ಧ ಮಾತನಾಡುವುದು ಸರಿಯಿಲ್ಲ. ಇದನ್ನ ನಿಲ್ಲಿಸು ಎಂದು'' ಸಂದೇಶ ರವಾನಿಸಿದ್ದಾರೆ. ಬಟ್, ಇದು ಯಾರು ಎಂಬುದು ಗೊತ್ತಿಲ್ಲ.

More from Filmibeat

English summary
'I have been getting a few threat messages and calls from past two days from few wellknown personalities' says harshika poonacha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X