ಅಂಬರೀಶ್ ಸಾವಿನ ಕುರಿತು ಗೊಂದಲದ ಟ್ವೀಟ್ ಗೆ ಹರ್ಷಿಕಾ ಕೊಟ್ಟ ಸ್ಪಷ್ಟನೆ ಇದು.!

ನವೆಂಬರ್ 24 ರಂದು 'ಕಲಿಯುಗದ ಕರ್ಣ' ಅಂಬರೀಶ್ ವಿಧಿವಶರಾದರು. ಅಂಬಿ ನಿಧನದ ವಾರ್ತೆ ಕೇಳಿ ಇಡೀ ಕರುನಾಡು ನೋವಿನ ಮಡುವಿನಲ್ಲಿ ಮುಳುಗಿದ್ದರೆ, ಇತ್ತ ಶೂಟಿಂಗ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಬಿಜಿಯಾಗಿದ್ದರು.

ನವೆಂಬರ್ 23 ರಿಂದ ನೆಟ್ ವರ್ಕ್ ಇಲ್ಲದ ಜಾಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ. ನಿನ್ನೆಯಷ್ಟೇ ಚಿತ್ರೀಕರಣ ಮುಗಿಸಿ ವಾಪಸ್ ಬಂದ ಹರ್ಷಿಕಾಗೆ ಅಂಬಿ ನಿಧನದ ಸುದ್ದಿ ತಿಳಿದಿದೆ. ಆಘಾತಗೊಂಡ ಹರ್ಷಿಕಾ ನಿನ್ನೆ ಒಂದು ಟ್ವೀಟ್ ಮಾಡಿದ್ದರು.

ಆದ್ರೆ, ನವೆಂಬರ್ 24 ರಂದು ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ಅಕೌಂಟ್ ನಿಂದ ಅಂಬರೀಶ್ ಸಾವಿಗೆ ಸಂತಾಪ ಸೂಚಿಸಿದ ಟ್ವೀಟ್ ಹೊರಬಂದಿತ್ತು. ಹೀಗಾಗಿ, ಟ್ವೀಟಿಗರು ಗೊಂದಲಕ್ಕೀಡಾಗಿದ್ದರು. ಅಲ್ಲದೇ, ಪಬ್ಲಿಸಿಟಿಗಾಗಿ ಹರ್ಷಿಕಾ ಹೀಗೆಲ್ಲಾ ಮಾಡುತ್ತಿದ್ದಾರೆ ಅಂತ ಕೆಲವರು ಗರಂ ಆಗಿದ್ದರು.

ಇದೀಗ ಇದೇ ಟ್ವೀಟ್ ಗೊಂದಲಕ್ಕೆ ನಟಿ ಹರ್ಷಿಕಾ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿರಿ...

ಹರ್ಷಿಕಾ ನೀಡಿದ ಸ್ಪಷ್ಟನೆ ಏನು.?

''ಅಂಬರೀಶ್ ರವರ ಸಾವಿನ ಸುದ್ದಿಯನ್ನು ಕೇಳಿ ನಾನು ಆಘಾತಗೊಂಡಿದ್ದೇನೆ. ನನ್ನಿಂದ ಗೊಂದಲ ಉಂಟಾಗಿದೆ ಎಂಬುದು ನನಗೆ ಗೊತ್ತು. ಇದಕ್ಕೆ ಸ್ಪಷ್ಟನೆ ಕೊಡುವೆ. ನಾನು ನಾಟ್ ರೀಚಬಲ್ ಜಾಗದಲ್ಲಿ ಇರುವಾಗ, ನನ್ನ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಪೇಜ್ ಗಳನ್ನು ಕಾರ್ಪರೇಟ್ ಕಂಪನಿ ಹ್ಯಾಂಡಲ್ ಮಾಡುತ್ತದೆ. ನನ್ನ ಪರವಾಗಿ ನವೆಂಬರ್ 25 ರಂದು ಅವರೇ ಟ್ವೀಟ್ ಮಾಡಿದ್ದರು. ನನಗೆ ನೆಟ್ ವರ್ಕ್ ಲಭ್ಯವಾದ ಮೇಲೆ ಅಂಬಿ ಅಂಕಲ್ ಸಾವಿನ ಸುದ್ದಿ ತಿಳಿಯಿತು. ಅಂಬರೀಶ್ ರವರ ಅಂತಿಮ ದರ್ಶನ ಪಡೆಯದ ಕಾರಣ ಬೇಸರಗೊಂಡಿರುವೆ. ಮಿಸ್ ಯು ಅಂಕಲ್'' ಎಂದು ಬರೆದುಕೊಂಡಿದ್ದಾರೆ ಹರ್ಷಿಕಾ ಪೂಣಚ್ಚ.

ಹರ್ಷಿಕಾ ನಿನ್ನೆ ಮಾಡಿದ್ದ ಟ್ವೀಟ್

''ಇಂದು ನನ್ನ ಅತ್ಯಂತ ದುಃಖದ ದಿನ. ನಾನು ಒಂದು ಶೂಟ್ ಗಾಗಿ 23 ರಿಂದ ನೆಟ್ ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು. ನಾನು ಎಂಥ ದುರಾದೃಷ್ಟವಂತೆ. ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ'' ಎಂದು ನಿನ್ನೆಯಷ್ಟೇ ಹರ್ಷಿಕಾ ಟ್ವೀಟ್ ಮಾಡಿದ್ದರು.

ಕಾರ್ಪರೇಟ್ ಕಂಪನಿ ಮಾಡಿದ್ದ ಟ್ವೀಟ್

''ಅಂಬಿ ಅಂಕಲ್ ಬಗ್ಗೆ ತಿಳಿದುಕೊಂಡಿರುವ ನಾನೇ ಧನ್ಯ. ನಿಮ್ಮನ್ನ ನಾನು ಸದಾ ಮಿಸ್ ಮಾಡಿಕೊಳ್ಳುವೆ'' ಎಂದು ನವೆಂಬರ್ 24 ರಂದು ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಆಗಿತ್ತು. ಈ ಎರಡೆರಡು ಟ್ವೀಟ್ ಗಳನ್ನು ನೋಡಿ ನೆಟ್ಟಿಗರು ಗೊಂದಲಕ್ಕೀಡಾಗಿದ್ದರು.

ಟ್ವೀಟಿಗರು ಗರಂ

ಟ್ವೀಟಿಗರು ಗರಂ

ಹರ್ಷಿಕಾ ರವರ ಈ ಎರಡೆರಡು ಟ್ವೀಟ್ ಗಳನ್ನು ನೋಡಿ ಟ್ವೀಟಿಗರು ಗರಂ ಆಗಿದ್ದರು. ಅಂಬಿಗೆ ಅಂತಿಮ ನಮನ ಸಲ್ಲಿಸಲು ಬಾರದ ಹರ್ಷಿಕಾ ಪೂಣಚ್ಚಗೆ ಟ್ವೀಟಿಗರು ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನೆಲ್ಲಾ ನೋಡಿದ್ಮೇಲೆ, ಇದೀಗ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ಕೊಟ್ಟಿದ್ದಾರೆ.

More from Filmibeat

English summary
Kannada Actress Harshika Poonacha gives clarification about her tweet on Ambareesh's death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X