»   » ಹರ್ಷಿಕಾ ಪೂಣಚ್ಚಗೆ ಲಕ್ ತಂದುಕೊಟ್ಟ ಒಂದೇ ಒಂದು ಫೋಟೋ.!

ಹರ್ಷಿಕಾ ಪೂಣಚ್ಚಗೆ ಲಕ್ ತಂದುಕೊಟ್ಟ ಒಂದೇ ಒಂದು ಫೋಟೋ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಕಿಂತ ಹೆಚ್ಚಾಗಿ ನಟಿ ಹರ್ಷಿಕಾ ಪೂಣಚ್ಚ ಈಗ ಟಾಲಿವುಡ್ ಮತ್ತು ಕಾಲಿವುಡ್ ನಲ್ಲೇ ಸಖತ್ ಬಿಜಿ. ತೆಲುಗು ಮತ್ತು ತಮಿಳು ಸಿನಿ ಅಂಗಳದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಕೊಡಗಿನ ಕುವರಿ ಹರ್ಷಿಕಾ ಇದೀಗ ಬಾಲಿವುಡ್ ಗೆ ಹಾರಲಿದ್ದಾರೆ.

ಬಾಲಿವುಡ್ ನಲ್ಲಿ ಹರ್ಷಿಕಾ ಪೂಣಚ್ಚ ಅಭಿನಯಿಸಲಿರುವ ಸಿನಿಮಾ ಬಗ್ಗೆ ಹೇಳುವ ಮುನ್ನ ಆಕೆಗೆ ಅಲ್ಲಿಂದ ಆಫರ್ ಹುಡುಕಿಕೊಂಡು ಬಂದ ಕಥೆ ಹೇಳ್ತೀವಿ ಕೇಳಿ.

Harshika Poonacha to make Bollywood debut

ಕೆಲ ತಿಂಗಳ ಹಿಂದೆಯಷ್ಟೆ ನಟಿ ಹರ್ಷಿಕಾ ಪೂಣಚ್ಚ ಮುಂಬೈಗೆ ಹೋಗಿದ್ದರು. ಮೊದಲೇ ಮೇಕ್ ಓವರ್ ಮಾಡಿಕೊಂಡಿದ್ದ ಹರ್ಷಿಕಾ, ಸಮಯ ಬಿಡುವು ಮಾಡಿಕೊಂಡು ಅಲ್ಲಿ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ.['ಬಿತ್ರಿ' ಹರ್ಷಿಕಾ ಪೋಸ್ಟರ್ ನೊಳಗ ಅಂತದ್ದೇನಿತ್ರಿ?]

ಹರ್ಷಿಕಾ ಪೂಣಚ್ಚ ಸೌಂದರ್ಯವನ್ನು ಕ್ಯಾಮರಾ ಕಂಗಳಲ್ಲಿ ಸೆರೆಹಿಡಿದವರು ಬಾಲಿವುಡ್ ನ ಸ್ಟೈಲಿಶ್ ಫೋಟೋಗ್ರಾಫರ್ ಮುನ್ನಾ ಸಿಂಗ್. ಇದೇ ಮುನ್ನಾ ಸಿಂಗ್, ಹರ್ಷಿಕಾ ಫೋಟೋವೊಂದನ್ನ ಮುಂಬೈ ಪ್ರೊಡಕ್ಷನ್ ಹೌಸ್ ಗೆ ಕಳುಹಿಸಿದರಂತೆ.

ತಕ್ಷಣ ಹರ್ಷಿಕಾಗೆ ಪ್ರೊಡಕ್ಷನ್ ಹೌಸ್ ಕಡೆಯಿಂದ ಬುಲಾವ್ ಬಂದಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕರ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚಗೆ ನಟಿಸುವ ಅವಕಾಶ ಸಿಕ್ಕಿದೆ ಅನ್ನೋದು ಬಿಟ್ರೆ, ಬಾಕಿ ತಾರಾಗಣದ ಬಗ್ಗೆ ಗುಪ್ತವಾಗಿದೆ.

ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಹರ್ಷಿಕಾ ಪೂಣಚ್ಚ ಫುಲ್ ಖುಷ್ ಆಗಿದ್ದಾರೆ. ಒಂದೇ ಒಂದು ಫೋಟೋ ತಮ್ಮ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.

English summary
Kannada Actress Harshika Poonacha is all set to make her Bollywood Debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada