ಟ್ವಿಟ್ಟರ್ ನಲ್ಲಿ ಕಾಲೆಳೆದ ವ್ಯಕ್ತಿಗೆ ಸರಿಯಾಗಿ ಚಳಿ ಬಿಡಿಸಿದ ನಟಿ ಹರ್ಷಿಕಾ

By Bharath Kumar

ಚಂದನವನದ ಮುದ್ದು ಚೆಲುವೆ ಹರ್ಷಿಕಾ ಪೂಣಚ್ಚ ಎಲ್ಲೂ ವಿವಾದವನ್ನ ಮಾಡಿಕೊಳ್ಳುವುದಿಲ್ಲ. ತಾನಾಯ್ತು, ತನ್ನ ಸಿನಿಮಾಗಳಾಯ್ತು ಎಂದು ಇರುವ ನಟಿ. ಆದ್ರೆ, ಇತ್ತೀಚೆಗೆ ತಮ್ಮ ಟ್ವಿಟ್ಟರ್ ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಅರೇ...ಆ ವ್ಯಕ್ತಿ ಏನು ಮಾಡಿದ್ರು ಗೊತ್ತಾ? ಹರ್ಷಿಕಾ ಪೂಣಚ್ಚ ಅವರು ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಅದಕ್ಕೆ ಕಾಮೆಂಟ್ ಮಾಡುವ ಮೂಲಕ ನಟಿಯ ಕಾಲೆಳೆದಿದ್ದಾನೆ ಆ ವ್ಯಕ್ತಿ. ಇದರಿಂದ ಪಿತ್ತ ನೆತ್ತಿಗೇರಿಸಿಕೊಂಡ ನಟಿ ಟ್ವಿಟ್ಟರ್ ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಅಷ್ಟಕ್ಕೂ, ಹರ್ಷಿಕಾ ಪೂಣಚ್ಚ ಪೋಸ್ಟ್ ಮಾಡಿದ್ದ ಆ ವಿಡಿಯೋ ಯಾವುದು? ಆ ವ್ಯಕ್ತಿ ಮಾಡಿದ ಕಾಮೆಂಟ್ ಏನು? ಎಂದು ತಿಳಿಯಲು ಮುಂದೆ ಓದಿ.....

ಡಬ್ಮ್ಯಾಶ್ ವಿಡಿಯೋಗೆ ಕಾಮೆಂಟ್

ಡಬ್ಮ್ಯಾಶ್ ವಿಡಿಯೋಗೆ ಕಾಮೆಂಟ್

ನಟಿ ಹರ್ಷಿಕಾ ಪೂಣಚ್ಚ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಿಂದಿ ಚಿತ್ರದ ಹಾಡೊಂದಕ್ಕೆ ಡಬ್ಮ್ಯಾಶ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವ್ಯಕ್ತಿಯೊಬ್ಬ ಕೀಳಾಗಿ ಕಾಮೆಂಟ್ ಮಾಡಿದ್ದಾನೆ.

ಆ ವ್ಯಕ್ತಿ ಮಾಡಿದ ಕಾಮೆಂಟ್ ಏನು?

ಆ ವ್ಯಕ್ತಿ ಮಾಡಿದ ಕಾಮೆಂಟ್ ಏನು?

''ಸಿನಿಮಾದಲ್ಲಿ ಅವಕಾಶ ಸಿಗ್ತೀಲ್ಲ ಅಂಥ dubsmash ಶುರು ಮಾಡಿದಾ ಚಿನ್ನಾ'' ಎಂದು ಮಲ್ಲಿಕಾರ್ಜುನ ಎಂಬ ವ್ಯಕ್ತಿ ಕಾಮೆಂಟ್ ಮಾಡಿದ್ದಾನೆ.

ರೊಚ್ಚಿಗೆದ್ದ ಹರ್ಷಿಕಾ

ರೊಚ್ಚಿಗೆದ್ದ ಹರ್ಷಿಕಾ

ಇನ್ನು ಈ ಕಾಮೆಂಟ್ ಕಂಡು ಸಹಜವಾಗಿ ಕೋಪಿಸಿಕೊಂಡ ನಟಿ ಆ ವ್ಯಕ್ತಿಗೆ ಪ್ರತಿಕ್ರಿಯೆ ನೀಡುವ ಮೂಲಕ ಚಳಿ ಬಿಡಿಸಿದ್ದಾರೆ. ''ಥೂ ನಿನ್ನ ಜನ್ಮಕ್ಕೆ. ಟ್ವೀಟ್ ಮಾಡಿದ್ರೆ ಯಾರೂ ಲೈಕ್ ಮಾಡಿಲ್ಲ ಅಂತ ಈ ಥರ ಸ್ಟುಪಿಡ್ ಆಗಿ ಬರೆಯೋದಾ. ನಾಚಿಕೆ ಆಗ್ಬೇಕು ನಿನಗೆ. ನಾನು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಈ ರೀತಿ ವಿಡಿಯೋ ಮಾಡುತ್ತೇನೆ. ನೀನು ಕೆಲಸ ಇಲ್ಲದೆ ಕೂತಿರಬಹುದು. ನಾನಲ್ಲ. ನಾನು ಮೂರು ದೊಡ್ಡ ಸಿನಿಮಾಗಳನ್ನ ಮಾಡುತ್ತಿದ್ದೇನೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಚಿತ್ರದಲ್ಲಿ ನಟನೆ

ಮಲಯಾಳಂ ಚಿತ್ರದಲ್ಲಿ ನಟನೆ

'ಉಪೇಂದ್ರ ಮತ್ತೆ ಬಾ' ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದ ಹರ್ಷಿಕಾ ಪೂಣಚ್ಚ ಸದ್ಯ ಮಲಯಾಳಂನ 'ಚಾರ್ ಮಿನರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ 'ಚಿಟ್ಟೆ', 'ಅಧಿತಿ' ಚಿತ್ರಗಳಲ್ಲಿ ನಟಿಸುತ್ತಿರುವ ಹರ್ಷಿಕಾ, ತೆಲುಗು ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada actress harshika poonacha has taken her twitter account to express her Outrage on Unknown Person.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X