ಮದುವೆಗೂ ಮುನ್ನ ನಿರ್ಮಾಪಕಿಯಾದ ಹರ್ಷಿಕಾ: ಭಾವಿ ಪತಿಗಾಗಿ 'ಭುವನಂ ಶ್ರೇಷ್ಠಮ್ ಗಚ್ಚಾಮಿ' ಎಂದು ನಟಿ

By ಫಿಲ್ಮಿಬೀಟ್ ಡೆಸ್ಕ್

ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇನ್ನೇ ಕೆಲವೇ ದಿನಗಳಲ್ಲಿ ಈ ಜೋಡಿ ಹೊಸ ಜೀವನವನ್ನು ಶುರು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಜೋಡಿ ಮದುವೆ ಮುನ್ನ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದೆ.

ಮದುವೆ ತಯಾರಿ, ಆಮಂತ್ರಣ ಪತ್ರಿಕೆ ಹಂಚುವುದು ಹೀಗೆ ಮದುವೆಯ ವಿವಿಧ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆನೇ ಹೊಸ ಜೀವನಕ್ಕೆ ಕಾಲಿಡುವ ಸಂದರ್ಭದಲ್ಲಿಯೇ ಹೊಸ ಯೋಜನೆಗೂ ಕೈ ಹಾಕಿದ್ದಾರೆ. ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಜಂಟಿಯಾಗಿ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ.

Harshika Poonacha producing Movie for future husband Bhuvan Ponnanna

ಈ ಜೋಡಿ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡಿದ್ದಷ್ಟೇ ಅಲ್ಲ. ಅದರ ಜೊತೆಗೆ ಹೊಸ ಸಿನಿಮಾದ ಟೈಟಲ್ ಅನ್ನು ಕೂಡ ಘೋಷಣೆ ಮಾಡಿದ್ದಾರೆ. ಅದುವೇ 'ಭುವನಂ ಶ್ರೇಷ್ಠಮ್ ಗಚ್ಚಾಮಿ'. ಪ್ರೊಡಕ್ಷನ್ ಹೌಸ್‌ಗೆ ಭುವನಂ ಎಂಟಟೈನ್‌ಮೆಂಟ್ ಎಂದು ಹೆಸರಿಟ್ಟಿದ್ದು, ಅದೇ ಬ್ಯಾನರ್‌ನಲ್ಲಿ ಮೊದಲ ಸಿನಿಮಾ ನಿರ್ಮಾಣ ಆಗಲಿದೆ.

'ಭುವನಂ ಶ್ರೇಷ್ಠಮ್ ಗಚ್ಚಾಮಿ' ಮೂಲಕ ಭುವನ್ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭುವನ್ ಇಲ್ಲಿ ಹಲವು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೆಟ್ರೋ ಸ್ಟೈಲ್‌ನಲ್ಲಿ ಭುವನ್‌ರನ್ನು ನೋಡಬಹುದು. ಅಂದ್ಹಾಗೆ, ಇದು ಮದುವೆ ಸಂದರ್ಭದಲ್ಲಿ ಹುಟ್ಟಿಕೊಂಡ ಕಥೆಯಲ್ಲ. ಸುಮಾರು 6 ವರ್ಷಗಳ ಹಿಂದೆನೇ ಈ ಜೋಡಿ ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದರು. ಅದಕ್ಕಾಗಿ ಭುವನ್ ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡುತ್ತಲೇ ಇದ್ದರು.

Harshika Poonacha producing Movie for future husband Bhuvan Ponnanna

ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಮದುವೆ ಸಮಾರಂಭ ಮುಗಿದ ಬಳಿಕ ಸಿನಿಮಾ ಸೆಟ್ಟೇರಲಿದೆ. ಗಡಿಬಿಡಿಯಲ್ಲಿ ಸಿನಿಮಾ ಮಾಡದೆ, ನಿಧಾನವಾಗಿ ಉತ್ತಮ ಸಿನಿಮಾವನ್ನು ನೀಡಲು ನಿರ್ಧರಿಸಿದ್ದಾರೆ. 'ಭುವನಂ ಶ್ರೇಷ್ಠಮ್ ಗಚ್ಚಾಮಿ' ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ, ಸ್ವತ: ಭುವನ್ ಕಥೆ ಬರೆದು, ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ವಿವಾಹ ಇದೇ ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ವಿರಾಜಪೇಟೆಯ ಅಮ್ಮತ್ತಿಯಲ್ಲಿ ಗ್ರ್ಯಾಂಡ್ ಆಗಿ ಮದುವೆ ನಡೆಯಲಿದೆ. ಈಗಾಗಲೇ ಈ ಜೋಡಿ ಸ್ಯಾಂಡಲ್‌ವುಡ್ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖ ಗಣ್ಯರನ್ನು ತಮ್ಮ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ.

More from Filmibeat

English summary
Harshika Poonacha producing Movie for future husband Bhuvan Ponnanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X