ಸಚಿವ ಸಾರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಹರ್ಷಿಕಾ ಪೂಣಚ್ಚ

'ಕೊಡಗು ಸಂತ್ರಸ್ಥರಿಗಾಗಿ ಕಟ್ಟಲಾಗಿರುವ ಮನೆ ಚೆನ್ನಾಗಿಲ್ಲ' ಎಂದು ಹೇಳುವ ಮೂಲಕ ನಟಿ ಹರ್ಷಿಕಾ ಪೂಣಚ್ಚ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದರು. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ 'ನಾನೊಂದು ಮಾದರಿ ಮನೆ ನೋಡಿದೆ. ತುಂಬ ಕೆಟ್ಟದಾಗಿದೆ. ಆ ರೀತಿ ಮಾಡಿಕೊಡಬೇಡಿ' ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

ಕಳೆದ ವರ್ಷ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ನಾಶವಾಗಿತ್ತು. ಬಹುತೇಕ ಕೊಡುಗು ಜನರು ಮನೆಗಳನ್ನ ಕಳೆದುಕೊಂಡಿದ್ದರು. ನಂತರ ಕೊಡುಗು ಸಂತ್ರಸ್ಥರಿಗಾಗಿ ಸರ್ಕಾರದ ವತಿಯಿಂದ ಮನೆಗಳನ್ನ ಕಟ್ಟಿಕೊಡಲು ತೀರ್ಮಾನಿಸಿ ಆ ಕೆಲಸ ಪ್ರಗತಿಯಲ್ಲಿದೆ.

ಸದ್ಯ ಕೊಡಗಿನ ಸಂತ್ರಸ್ಥರಿಗಾಗಿ ತಯಾರಾಗುತ್ತಿರುವ ಮನೆಗಳ ಕೆಲಸ ಸಂಪೂರ್ಣವಾಗಿ ಮುಗಿದಿಲ್ಲ. ಮತ್ತು ಯಾರಿಗೂ ವಾಸ ಮಾಡಲು ಅಧಿಕೃತವಾಗಿ ನೀಡಿಲ್ಲ. ಹೀಗಿರುವಾಗ ಹರ್ಷಿಕಾ ಅವರ ಹೇಳಿಕೆ ಸರ್ಕಾರಕ್ಕೆ ಮುಜುಗರ ಉಂಟುಮಾಡುವಂತಿದೆ. ಹರ್ಷಿಕಾ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಸಾರಾ ಮಹೇಶ್ ನಟಿ ಯಾರು, ಅವರ ವಿದ್ಯಾರ್ಹತೆ ಏನು ಎಂದು ಪ್ರಶ್ನಿಸಿದ್ದಾರೆ. ? ಮುಂದೆ ಓದಿ....

ಹರ್ಷಿಕಾ ಪೂಣಚ್ಚ ವಿದ್ಯಾರ್ಹತೆ ಏನು?

ಹರ್ಷಿಕಾ ಪೂಣಚ್ಚ ವಿದ್ಯಾರ್ಹತೆ ಏನು?

ಕೊಡಗಿನ ಸಂತ್ರಸ್ಥರಿಗಾಗಿ ಕಟ್ಟಲಾಗುತ್ತಿರುವ ಮನೆಗಳು ಕೆಟ್ಟದಾಗಿದೆ ಎಂದು ಹೇಳಿದ್ದ ನಟಿ ಹರ್ಷಿಕಾ ಪೂಣಚ್ಚ ಅವರ ಹೇಳಿಕೆಗೆ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ. ''ಅವರು ಸಿನಿಮಾ ಬಗ್ಗೆ ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಅವರು ಯಾವಾಗ ತಾಂತ್ರಿಕ ತಜ್ಞರು ಆದರು ಎಂದು ಗೊತ್ತಿಲ್ಲ. ಅವರು ಏನು ಓದಿದ್ದಾರೆ ಎಂಬುದರ ಮೇಲೆ ಸರ್ಕಾರ ತೀರ್ಮಾನ ಮಾಡುತ್ತೆ ಬಿಡಿ'' ಎಂದು ಹೇಳಿ ಹೋದರು.

ಸ್ಪಷ್ಟನೆ ನೀಡಿದ ಹರ್ಷಿಕಾ

ಸ್ಪಷ್ಟನೆ ನೀಡಿದ ಹರ್ಷಿಕಾ

''ನಾನು ಕೆಲವು ಮಾದರಿ ಮನೆಗಳ ಫೋಟೋಗಳನ್ನ ನೋಡಿದೆ. ಅದು ನನಗೆ ಇಷ್ಟ ಆಗಿಲ್ಲ. ಶೀಟ್ ಮನೆಗಳ ರೀತಿ, ವೆಂಟಿಲೇಟರ್ ಇಲ್ಲದೆ ಬಹಳ ಕೆಟ್ಟದಾಗಿತ್ತು. ಕೊಡಗಿನ ಸಂತ್ರಸ್ಥರ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿ ಮನೆಗಳನ್ನ ಕಟ್ಟಿ ಕೊಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡಿದ್ದು ಅಷ್ಟೆ. ನಾನು ಯಾರನ್ನು ದೂಷಿಸಿಲ್ಲ. ದಯವಿಟ್ಟು ಒಳ್ಳೆಯ ಮನೆಯನ್ನ ಕಟ್ಟಿಸಿಕೊಡಿ'' ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡರು.

ನಾನು ಇಂಜಿನಿಯರ್

ನಾನು ಇಂಜಿನಿಯರ್

''ಸಚಿವ ಸಾರಾ ಮಹೇಶ್ ಅವರು ಮಾತನಾಡುವಾಗ ಹರ್ಷಿಕಾ ಪೂಣಚ್ಚ ಏನು ಓದಿದ್ದಾರೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ತಿರುಗೇಟು ನೀಡಿದ ಹರ್ಷಿಕಾ, ''ನಾನು ಇಂಜಿನಿಯರ್. ಬಿಇ ಪದವೀಧರೆ, ನಾನು ಕೇಳುವುದಕ್ಕೆ ಹಕ್ಕಿದೆ. ಯಾಕಂದ್ರೆ ನಾನು ಕೊಡಗಿನ ಮನೆ ಮಗಳು'' ಎಂದು ಪ್ರತಿಕ್ರಿಯಿಸಿದ್ದಾರೆ.

ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ

ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ

''ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿನಿಮಾದವರು. ತಮಿಳುನಾಡಿನಲ್ಲಿ ಅನೇಕ ವರ್ಷಗಳು ಮುಖ್ಯಮಂತ್ರಿಯಾಗಿ ಆಳ್ವಿಕೆ ಮಾಡಿದವರು ಸಿನಿಮಾದವರೇ. ಇತ್ತೀಚಿಗೆ ಮಂಡ್ಯದಲ್ಲಿ ಸಿನಿಮಾದವರು ಏನು ಮಾಡಬಹುದು ಎಂದು ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ'' ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

More from Filmibeat

English summary
Kannada actress Harshika poonacha said 'Homes Built For Kodagu Victims Are Not Good'. Minister Sa Ra Mahesh reply to her. she Should Talk Only About Cinema said minister
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X