For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಹಾಡು ಹಾಡಿದ ಬಾಲಿವುಡ್ ಖ್ಯಾತ ನಟ ಗೋವಿಂದ: ವಿಡಿಯೋ ಹಂಚಿಕೊಂಡ ನಟಿ ಹರ್ಷಿಕಾ

  |

  ಬಾಲಿವುಡ್ ನ ಖ್ಯಾತ ನಟ ಗೋವಿಂದ ಇತ್ತೀಚಿಗೆ ಅಣ್ಣಾವ್ರ ಹಾಡು ಹಾಡುವ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದಿದ್ದಾರೆ. ಕನ್ನಡದ ಹಾಡುಗಳು, ಕನ್ನಡ ಸಿನಿಮಾಗಳು ಎಂದರೇ ಕನ್ನಡಿಗರೇ ತಿರಸ್ಕಾರ ಮಾಡುತ್ತಿರುವ ಇಂಥ ಸಮಯದಲ್ಲಿ ಪರಭಾಷೆಯ ಕಲಾವಿದರು ಕನ್ನಡದ ಹಾಡುಗಳನ್ನು, ಸಿನಿಮಾಗಳನ್ನು ಇಷ್ಟ ಪಡುವುದು ಮತ್ತು ಹಾಡುವುದನ್ನು ನೋಡುವುದೇ ಹೆಮ್ಮೆ ಅನಿಸುತ್ತೆ.

  ಇದಕ್ಕೆ ಉತ್ತಮ ಉದಾಹರಣೆ ಎಂದರೇ ಬಾಲಿವುಡ್‌ನ ಖ್ಯಾತ ನಟ ಗೋವಿಂದ. ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ನಟ ಗೋವಿಂದ ಅವರನ್ನು ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಅವರ ಬಳಿ ಕನ್ನಡ ಹಾಡನ್ನು ಹೇಳುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಅವರು ಡಾ.ರಾಜ್ ಕುಮಾರ್ ಎಂದೆಂದೂ ನಿನ್ನನು ಮರೆತು ನಾನಿರಲಾರೆ...ಹಾಡನ್ನು ಅದ್ಭುತವಾಗಿ ಹಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.

  ಬಾಲಿವುಡ್ ಜನರ ಕುತಂತ್ರಗಳ ಬಿಚ್ಚಿಟ್ಟ ಹಿರಿಯ ನಟ ಗೋವಿಂದಬಾಲಿವುಡ್ ಜನರ ಕುತಂತ್ರಗಳ ಬಿಚ್ಚಿಟ್ಟ ಹಿರಿಯ ನಟ ಗೋವಿಂದ

  ಡಾ.ರಾಜ್ ಕುಮಾರ್ ನಟನೆಯ ಎರಡು ಕನಸು ಸಿನಿಮಾದ ಹಾಡು ಇದಾಗಿದ್ದು, ಕನ್ನಡಿಗರ ನೆಚ್ಚಿನ ಗೀತೆಗಳಲ್ಲಿ ಇದು ಒಂದಾಗಿದೆ. ಈ ಹಾಡು ಎಂದರೆ ಬಾಲಿವುಡ್ ನಟ ಗೋವಿಂದ ಅವರಿಗೂ ತುಂಬಾ ಇಷ್ಟ. ಗೋವಿಂದ ಹಾಡಿರುವ ಹಾಡನ್ನು ನಟಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕನ್ನಡಿಗರಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ.

  ಅಂದಹಾಗೆ ಗೋವಿಂದ ಈ ಹಾಡನ್ನು ಹಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಹಿಂದಿ ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಈ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಗೋವಿಂದ ಅವರ ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮತ್ತೆ ಅದೇ ಹಾಡನ್ನು ಹಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.

  English summary
  Bollywood Actor Govinda singing Dr.Rajkumar song with harshika poonacha video goes viral.
  Tuesday, March 23, 2021, 15:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X