For Quick Alerts
  ALLOW NOTIFICATIONS  
  For Daily Alerts

  ವಿದೇಶಕ್ಕೆ ಹರ್ಷಿಕಾ ಪೂಣಚ್ಚ ಒಬ್ಬರೇ ಹೋಗಿಲ್ಲ.! ಮತ್ಯಾರಿದ್ದಾರೆ.?

  By Bharath Kumar
  |

  ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಇತ್ತೀಚೆಗಷ್ಟೇ ಆಮ್ ಸ್ಟರ್ ಡ್ಯಾಂ ಗೆ ಭೇಟಿ ಕೊಟ್ಟಿದ್ದ ಹರ್ಷಿಕಾ, ಮೊನ್ನೆಯಷ್ಟೇ ಬೆಲ್ಜಿಯಂ ನಲ್ಲಿರುವ 'ಟುಮಾರೋಲ್ಯಾಂಡ್'ನಲ್ಲಿ ಕಾಣಿಸಿಕೊಂಡರು.

  ಟುಮಾರೋಲ್ಯಾಂಡ್ ನಲ್ಲಿ ನಡೆದ ವಿಶ್ವ ಪ್ರಸಿದ್ಧ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಂಡು ಕೊಡವ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿತ್ತು.

  ಅಂದ್ಹಾಗೆ, ಫಾರೀನ್ ಟೂರ್ ಗೆ ಹರ್ಷಿಕಾ ಒಬ್ಬರೇ ಹೋಗಿಲ್ಲ. ಜೊತೆಯಲ್ಲಿ ಮತ್ತೊಬ್ಬರು ಹೋಗಿದ್ದಾರೆ. ಅವರು ಕೂಡ ಟುಮಾರೋಲ್ಯಾಂಡ್ ನಲ್ಲಿ ಹರ್ಷಿಕಾ ಜೊತೆಯಲ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

  ವಿಡಿಯೋ: ವಿದೇಶದಲ್ಲಿ ಕೊಡವ ನೃತ್ಯ ಮಾಡಿದ ಕೊಡವತಿ ಹರ್ಷಿಕಾ ಪೂಣಚ್ಚ ವಿಡಿಯೋ: ವಿದೇಶದಲ್ಲಿ ಕೊಡವ ನೃತ್ಯ ಮಾಡಿದ ಕೊಡವತಿ ಹರ್ಷಿಕಾ ಪೂಣಚ್ಚ

  Harshika Poonacha went Tomorrowland with her friend

  ಯಾರಪ್ಪಾ ಅದು ಅಂತ ಯೋಚನೆ ಮಾಡ್ತಿದ್ದೀರಾ. ಅದು ಬೇರೆ ಯಾರೂ ಅಲ್ಲ. ಹರ್ಷಿಕಾ ಅವರ ಬೆಸ್ಟ್ ಫ್ರೆಂಡ್ ಭುವನ್ ಪೊನ್ನಣ್ಣ. ಹೌದು, ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಮೊದಲಿಂದ ಸ್ನೇಹಿತರು. ಈ ಸ್ನೇಹಿತರು ಒಟ್ಟಾಗಿ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ.

  'ಚಿಟ್ಟೆ' ಚಿತ್ರದ ನಂತರ 'ಉದ್ಘರ್ಷ' ಚಿತ್ರದ ಶೂಟಿಂಗ್ ಮಾಡ್ತಿರುವ ಹರ್ಷಿಕಾ ಸದ್ಯಕ್ಕೆ ಬ್ರೇಕ್ ತಗೊಂಡು ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಮತ್ತೊಂದೆಡೆ 'ರಾಂಧವ' ಚಿತ್ರವನ್ನ ಬಹುತೇಕ ಮುಗಿಸಿರುವ ಭುವನ್ ಪೊನ್ನಣ್ಣ ಸ್ನೇಹಿತೆಗೆ ಸಾಥ್ ನೀಡಿದ್ದಾರೆ.

  English summary
  Actress Harshika Poonacha and Bhuvan Ponnanna have gone together to Tomorrowland Belgium.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X