Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉತ್ತರ ಭಾರತದತ್ತ ಹರ್ಷಿಕಾ ಪೂಣಚ್ಚ, ಭೋಜ್ಪರಿ ಸಿನಿಮಾದಲ್ಲಿ ನಟನೆ
ಕನ್ನಡದ ನಟಿ ಹರ್ಷಿಕಾ ಪೂಣಚ್ಚ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಈಗ ಉತ್ತರ ಭಾರತದತ್ತ ಪ್ರಯಾಣ ಆರಂಭಿಸಿದ್ದಾರೆ.
ಕನ್ನಡ, ತಮಿಳು, ತೆಲುಗು, ಕೊಡವ, ಮಲಾಯಳಂ ಸಿನಿಮಾಗಳಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ ಈಗ ಭೊಜಪುರಿ ಭಾಷೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ ಇದೇ ಮೊದಲ ಬಾರಿಗೆ ಭೋಜ್ಪುರಿ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಸಂಪೂರ್ಣ ಚಿತ್ರೀಕರಣ ಲಂಡನ್ನಲ್ಲಿಯೇ ನಡೆಯಲಿದೆಯಂತೆ.
ಭೊಜ್ಪುರಿ ಸ್ಟಾರ್ ಪವನ್ ಸಿಂಗ್ ಹೀರೋ
ಭೋಜ್ಪುರಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಸಿನಿಮಾದ ನಾಯಕರಾಗಿದ್ದು, ಈ ಸಿನಿಮಾ ಭೋಜ್ಪುರಿ ಜೊತೆಗೆ ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಶೇ 50 ರಷ್ಟು ಪೂರ್ಣವಾಗಿದೆ.
ಲಂಡನ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ
ಸಿನಿಮಾದ ಚಿತ್ರೀಕರಣ ಈಗಾಗಲೆ ಲಂಡನ್ನಲ್ಲಿ ನಡೆಯುತ್ತಿದ್ದು, ಸಿನಿಮಾದ ಸಂಪೂರ್ಣ ಚಿತ್ರೀಕರಣ ಲಂಡನ್ನಲ್ಲಿಯೇ ನಡೆಯಲಿದೆ. ಸಿನಿಮಾದಲ್ಲಿ ಲಂಡನ್ನ ಶ್ರೀಮಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹರ್ಷಿಕಾ ಪೂಣಚ್ಚ.
ಪ್ರೇಮಾಂಶು ಸಿಂಗ್ ನಿರ್ದೇಶನ
ಹರ್ಷಿಕಾ ಪೂಣಚ್ಚ ನಟಿಸುತ್ತಿರುವ ಭೊಜ್ಪುರಿ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾವನ್ನು ಯಾಶಿ ಪ್ರೊಡಕ್ಷನ್ನಲ್ಲಿ ಅಭಯ್ ಸಿನ್ಹಾ ಎಂಬುವರು ನಿರ್ಮಿಸುತ್ತಿದ್ದಾರೆ. ಪ್ರೇಮಾಂಶು ಸಿಂಗ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.
Recommended Video
ಶಿವರಾಜ್ ಕುಮಾರ್ ಸಿನಿಮಾದಲ್ಲಿ ಹರ್ಷಿಕಾ?
ಹರ್ಷಿಕಾ ಪೂಣಚ್ಚ ಕನ್ನಡದ ಕೆಲವು ಸಿನಿಮಾಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್-ಡಾಲಿ ಧನಂಜಯ್ ನಟಿಸುತ್ತಿರುವ 'ಶಿವಪ್ಪ' ಸಿನಿಮಾದಲ್ಲಿ ಹರ್ಷಿಕಾ ನಟಿಸಲಿದ್ದಾರೆ ಎನ್ನಲಾಗಿದೆ. ಉನ್ ಕಾದಲ್ ಇರುಂದಾಲ್ ಎಂಬ ತಮಿಳು ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.