ಸಲ್ಮಾನ್ 'ಟೈಗರ್ ಜಿಂದಾ ಹೈ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಇದ್ದಾರಾ?
ಬಾಲಿವುಡ್ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಟೈಗರ್ ಜಿಂದಾ ಹೈ'. ಈ ಸಿನಿಮಾ ನಿನ್ನೆ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತೆ ಗೆದ್ದಿದ್ದಾರೆ. ಸಿನಿಮಾಗೆ ಎಲ್ಲ ಕಡೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ.
ಆದರೆ ವಿಷಯ ಏನೆಂದರೆ ಈ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರಾ.. ಇಲ್ವಾ.. ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಈ ಸಿನಿಮಾ ಪ್ರಾರಂಭವಾದಾಗ ಚಿತ್ರದ ಒಂದು ಪಾತ್ರದಲ್ಲಿ ನಟ ಸುದೀಪ್ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಬರುಬರುತ್ತಾ ಆ ಸುದ್ದಿ ಸೈಲೆಂಟ್ ಆಯಿತು. ಅದರೊಂದಿಗೆ ಚಿತ್ರದ ಟ್ರೇಲರ್ ನಲ್ಲಿ ಕೂಡ ಸುದೀಪ್ ಮುಖ ಕಾಣಿಸಲಿಲ್ಲ. ಆದರೂ ಸಹ ಎಷ್ಟೊ ಅಭಿಮಾನಿಗಳಿಗೆ ಇನ್ನೂ ಕೂಡ ಒಂದು ಗೊಂದಲ ಇದೆ. ಸಲ್ಮಾನ್ ನಟನೆಯ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಇದ್ದಾರಾ ಎನ್ನುವ ಕುತೂಹಲ ಇದೆ. ಮುಂದೆ. ಓದಿ..

ವಿಕಿಪೀಡಿಯದಲ್ಲಿ ಕಿಚ್ಚ
'ಟೈಗರ್ ಜಿಂದಾ ಹೈ' ಸಿನಿಮಾದ ವಿಕಿಪೀಡಿಯವನ್ನು ಈಗ ತೆರೆದು ನೋಡಿದರು ಅಲ್ಲಿ ನಟ ಸುದೀಪ್ ಹೆಸರು ಕಂಗೊಳಿಸುತ್ತಿದೆ.

ಪೋಸ್ಟರ್ ನಲ್ಲಿ ಕಿಚ್ಚ
ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ 'ಟೈಗರ್ ಜಿಂದಾ ಹೈ' ಸಿನಿಮಾ ಪ್ರದರ್ಶನವಾಗುತ್ತಿದೆ. ಆ ಚಿತ್ರಮಂದಿರದವರು ಹಾಕಿರುವ ಪೋಸ್ಟರ್ ನಲ್ಲಿಯೂ ಸುದೀಪ್ ಹೆಸರು ಇದೆ.

ಸಾಮಾಜಿಕ ಜಾಲತಾಣಗಳಲ್ಲಿ
ಸಾಮಾಜಿಕ ಜಾಲತಾಣಗಳಲ್ಲಿಯೂ 'ಟೈಗರ್ ಜಿಂದಾ ಹೈ' ಸಿನಿಮಾ ತಾರಾಗಣ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಕತ್ರೀನಾ ಕೈಫ್ ಜೊತೆಗೆ ಸುದೀಪ್ ಅವರ ಹೆಸರು ಕೂಡ ಹರಿದಾಡಿದೆ.

ಸುದೀಪ್ ಇಲ್ಲ
'ಟೈಗರ್ ಜಿಂದಾ ಹೈ' ಸಿನಿಮಾದಲ್ಲಿ ನಟ ಸುದೀಪ್ ನಟಿಸಿಲ್ಲ ಎಂದು ಈ ಹಿಂದೆಯೇ ಚಿತ್ರತಂಡ ಸ್ಪಷ್ಟ ಪಡಿಸಿದೆ.

'ಟೈಗರ್ ಜಿಂದಾ ಹೈ' ವಿಮರ್ಶೆ
'ಟೈಗರ್ ಜಿಂದಾ ಹೈ' ಸಿನಿಮಾ ನಿನ್ನೆ ರಿಲೀಸ್ ಆಗಿದೆ. ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್ ಚಿತ್ರ ನೋಡಿ ಸಲ್ಮಾನ್ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಅದ್ಬುತವಾದ ಮೇಕಿಂಗ್ ಜೊತೆಯಲ್ಲಿ ಉತ್ತಮವಾದ ಸಂದೇಶ ಇರುವ ಸಿನಿಮಾವನ್ನ ಅಭಿಮಾನಿಗಳಿಗೆ ನೀಡಿದ್ದಾರೆ ಸಲ್ಲು ಬಾಯ್. ಪ್ರಾರಂಭದಿಂದಲೂ ಕುತೂಹಲ ಮೂಡಿಸಿದ್ದ 'ಟೈಗರ್ ಜಿಂದಾ ಹೈ' ಚಿತ್ರ ದೇಶಗಳ ನಡುವೆ ಬಾಂದವ್ಯ ಬೆಸೆಯುವಂತ ಕಥಾಹಂದರ ಹೊಂದಿದೆ. ಭಾರತದ 'ರಾ ಏಜೆಂಟ್' ಆಗಿ ಸಲ್ಮಾನ್ ಖಾನ್ ಅಭಿನಯಿಸಿದ್ದು ಪಾಕಿಸ್ತಾನದ 'ರಾ ಏಜೆಂಟ್' ಆಗಿ ನಟಿ ಕತ್ರಿಕಾ ಕೈಫ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











