»   » ಯಶ್-ರಾಧಿಕಾ ಪಂಡಿತ್ ಮದುವೆಗೆ ಇದ್ಯಾ ದರ್ಶನ್ ಗೆ ಆಹ್ವಾನ.?

ಯಶ್-ರಾಧಿಕಾ ಪಂಡಿತ್ ಮದುವೆಗೆ ಇದ್ಯಾ ದರ್ಶನ್ ಗೆ ಆಹ್ವಾನ.?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ಅನಂತ್ ನಾಗ್, ಕ್ರೇಜಿ ಸ್ಟಾರ್ ರವಿಚಂದ್ರನ್... ಹೀಗೆ ಸ್ಯಾಂಡಲ್ ವುಡ್ ನ ದಿಗ್ಗಜರಿಗೆಲ್ಲ ತಮ್ಮ ಮದುವೆಗೆ ಆತ್ಮೀಯ ಆಮಂತ್ರಣ ನೀಡಿದ್ದರು ರಾಕಿಂಗ್ ಸ್ಟಾರ್ ಯಶ್.

ಸ್ಯಾಂಡಲ್ ವುಡ್ ನ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಅನೇಕರಿಗೆ ತಮ್ಮ ಮದುವೆಯ ಮಮತೆಯ ಕರೆಯೋಲೆ ನೀಡಿದ್ದ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೂ ಆಹ್ವಾನ ನೀಡಿದ್ರಾ.?[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

ಈ ಒಂದು ಅನುಮಾನ ಮೂಡಲು ಕಾರಣ ಗಾಂಧಿನಗರದಲ್ಲಿ ಒಂದ್ ಕಾಲದಲ್ಲಿ ಹರಿದಾಡಿದ್ದ ಗುಸು ಗುಸು. ರಾಕಿಂಗ್ ಸ್ಟಾರ್ ಯಶ್ ಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ಆಗ್ಬರಲ್ಲ ಅಂತ ಹಿಂದೊಮ್ಮೆ ಗಾಸಿಪ್ ಹಬ್ಬಿತ್ತು.

ಫೋಟೋ ಕೂಡ ಕಾಣಲಿಲ್ಲ.!

ರಾಧಿಕಾ ಪಂಡಿತ್ ಜೊತೆಗಿನ ತಮ್ಮ ಮದುವೆಗೆ ಯಾರಿಗೆಲ್ಲ ಯಶ್ ಆಹ್ವಾನ ನೀಡಿದ್ರೋ, ಆ ಎಲ್ಲರ ಪೋಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡಿತ್ತು. ಆದ್ರೆ,

ದರ್ಶನ್ ಗೆ ಯಶ್ ಆಮಂತ್ರಣ ಪತ್ರಿಕೆ ನೀಡಿದ್ದ ಫೋಟೋ ಮಾತ್ರ ಎಲ್ಲೂ ಕಾಣಲಿಲ್ಲ. ಹೀಗಾಗಿ ದರ್ಶನ್ ಗೆ ಯಶ್ ಇನ್ವಿಟೇಷನ್ ಕೊಟ್ಟಿದ್ದಾರೋ, ಇಲ್ವೋ ಎಂಬ ಡೌಟ್ ಕೆಲವರಿಗೆ ಕಾಡಿದ್ದು ಸುಳ್ಳಲ್ಲ.

ಡೌಟ್ ಕ್ಲಿಯರ್ ಆಯ್ತು.!

ಡೌಟ್ ಯಾಕೆ, ಕ್ಲಿಯರ್ ಮಾಡಿಕೊಳ್ಳೋಣ ಅಂತ ನಿರ್ಧರಿಸಿದ ಒಬ್ಬರು ಫೇಸ್ ಬುಕ್ ನಲ್ಲಿ ನೇರವಾಗಿ ಪ್ರಶ್ನೆ ಕೇಳ್ಬಿಟ್ಟರು. ಅದಕ್ಕೆ ಯಶ್ ಕೂಡ ಉತ್ತರ ಕೊಟ್ಟರು.

ದರ್ಶನ್ ಗೆ ಆಹ್ವಾನ ನೀಡಲಾಗಿದೆ.!

''ದರ್ಶನ್ ಅವರಿಗೆ ಇನ್ವೈಟ್ ಮಾಡಿದ್ದೀರಾ? ನಾನು ತಿಳಿದುಕೊಳ್ಳಬೇಕು. ಪ್ಲೀಸ್ ಸತ್ಯ ಹೇಳಿ'' ಅಂತ ಲೋಕೇಶ್ ಗೌಡ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್, ''ಹೌದು, ಅವರಿಗೆ ಫೋನ್ ಮಾಡಿದ್ದೇನೆ. ಅವರು ಮೈಸೂರಿನಲ್ಲಿ ಇದ್ದೇನೆ. ಸಿಗೋದೇನು ಬೇಡ. ಖಂಡಿತ ಬರ್ತೀನಿ ಅಂದಿದ್ದಾರೆ'' ಅಂತ ಯಶ್ ಫೇಸ್ ಬುಕ್ ನಲ್ಲಿ ಉತ್ತರ ಕೊಟ್ಟಿದ್ದಾರೆ.

ಅನುಮಾನ ಬೇಡ.!

ಅಲ್ಲಿಗೆ, ದರ್ಶನ್ ಹಾಗೂ ಯಶ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಯಶ್ ಮದುವೆಗೆ ಬರ್ತಾರಾ ದರ್ಶನ್.?

ತಮ್ಮ ಬಿಜಿ ಶೆಡ್ಯೂಲ್ ನಲ್ಲಿ ಕೊಂಚ ಬಿಡುವು ಮಾಡಿಕೊಂಡು ಯಶ್ ಮದುವೆಗೆ ದರ್ಶನ್ ಆಗಮಿಸುತ್ತಾರಾ ಅಂತ ಕಾದು ನೋಡೋಣ.

English summary
Has Kannada Actor Yash invited Darshan for his marriage with Kannada Actress Radhika Pandit? Read this article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada