»   » #Hash 'ಮಿಸ್ಟರಿ ಥ್ರಿಲ್ಲರ್’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಬನ್ನಿ

#Hash 'ಮಿಸ್ಟರಿ ಥ್ರಿಲ್ಲರ್’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಬನ್ನಿ

Posted By: ರಾಘವೇಂದ್ರ ಸಿ.ವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  #Hash, 'ಹ್ಯಾಶ್ ' ಸಿಂಬಲ್ ಬಿರುಕೇ ಬಿಡದ ನಾಲ್ಕು ರೇಖೆ ಜೊತೆಗೆ ಬದುಕುವ, ಬದುಕಿನ ಪಾಠ ಕಲಿಸುವ .. ಈ ಒಂದು ಅಡಿ ಬರಹದ ಮೂಲಕವೇ ಕುತೂಹಲ ಕೆರಳಿಸುತ್ತಿರುವ 'ಮಿಸ್ಟರಿ ಥ್ರಿಲ್ಲರ್' ಕಥಾಹಂದರವುಳ್ಳ ಒಂದು ಗಂಟೆ ಅವಧಿಯ ಕನ್ನಡದ ವಿಭಿನ್ನ ಚಿತ್ರ ಇದೇ ಮೇ 1 ಕಾರ್ಮಿಕರ ದಿನದಂದು ಸಂಜೆ 6.30ಕ್ಕೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಚಾಮಂಡೇಶ್ವರಿ ಸ್ಟುಡಿಯೋದಲ್ಲಿ ಮೊದಲ ಪ್ರದರ್ಶನ ಕಾಣಲಿದೆ.

  ಈ ಹಿಂದೆ "ಪರಿಚ್ಛೇದ" ಎಂಬ ಕಿರು ಚಿತ್ರ ತಯಾರಿಸಿ ಕೆಂಡಸಂಪಿಗೆ ಸ್ಪರ್ಧೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಈ ತಂಡ ಇದೀಗ ಇನ್ನೊಂದು ವಿಭಿನ್ನ ಸಿನಿಮಾದ ಮೂಲಕ ಚಿತ್ರ ರಸಿಕರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲಿ ರಂಜಿಸುವ ಪ್ರಯತ್ನ ಮಾಡಹೊರಟಿದೆ.

  ಯುವ ಪ್ರತಿಭೆ, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಾತ್ವಿಕ್ ನಿರ್ದೇಶಿಸಿರುವ ಚಿತ್ರಕ್ಕೆ ಈ ವರ್ಷದ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಗಾಯಕ, ಸಂಗೀತ ನಿರ್ದೇಶಕರೂ ಆದಂತ ವಿಕಾಸ್ ವಸಿಷ್ಟ 'ಹೇಳಲೀ ಹೇಗೆ ನಾ' ಎಂಬ ಸುಮಧುರ ಯುಗಳ ಗೀತೆಯೊಂದನ್ನು ಈಶಾ ಸುಚಿಯವರ ಜೊತೆಗೂಡಿ ಹಾಡಿದ್ದಾರೆ.

  Hash

  ಸಾತ್ವಿಕ್ ಅವರ ನಿರೂಪಣೆಯಲ್ಲಿ ಹೊಸತನವಿದ್ದು ಕ್ಷಣಕ್ಷಣಕ್ಕೂ ನೋಡುಗರಿಗೆ ಕುತೂಹಲ ಕೆರಳಿಸುತ್ತದೆ. ನಿರ್ದೇಶಕ ಸಾತ್ವಿಕ್ ಅವರೇ ಹೇಳುವಂತೆ ಈ ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿದ್ದು ಅಂಬರೀಶ್, ಸಂದೀಪ್ ಸುಂಕದ, ಶೇಷಾದ್ರಿ ರಾವ್ ಮತ್ತು ನಾಯಕಿಯಾಗಿ ಬೆರಗುಗಣ್ಣಿನ ಚೆಲುವೆ ಸೀಮಾ ನಟಿಸಿದ್ದಾರೆ.

  ಈವರೆಗೂ ಯಾರೂ ಚಿತ್ರೀಕರಿಸದ ಹಸಿರು ಹೊರಾಂಗಣ, ಹೊರನಾಡು ಸಮೀಪದ ಬಿಳಾಲುಕೊಪ್ಪದಲ್ಲಿ ಚಿತ್ರೀಕರಿಸಲಾಗಿದೆ ಅಲ್ಲದೆ ನೋಡುಗರ ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತದೆ . ಯುವ ಪ್ರತಿಭೆ ಶರತ್ ಸಂಯೋಜಿಸಿರುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ನೋಡುಗರ ಮನಸ್ಸಿನಲ್ಲಿ ಉಳಿಯುತ್ತದೆ. ಸುಮಾರು ಎರಡು-ಎರಡೂವರೆ ಗಂಟೆ ಅವಧಿಯ ಚಿತ್ರವನ್ನು ಕೇವಲ ಒಂದು ಗಂಟೆಯಲ್ಲಿ ಕಟ್ಟಿಕೊಡುತ್ತಾರೆ ಸಾತ್ವಿಕ್.

  -
  -
  ಹ್ಯಾಶ್ ಮಿಸ್ಟರಿ ಥ್ರಿಲ್ಲರ್ ಕನ್ನಡ ಚಿತ್ರ

  ಹ್ಯಾಶ್ ಮಿಸ್ಟರಿ ಥ್ರಿಲ್ಲರ್ ಕನ್ನಡ ಚಿತ್ರ

  -
  -

  ನಾಲ್ಕು ವ್ಯಕ್ತಿಗಳ ನಡುವಿನ ಸಂಬಂಧ ಮತ್ತು ಅವರ ನಿರ್ಧಾರಗಳೇ ಚಿತ್ರದ ಕಥಾವಸ್ತು. #ಹ್ಯಾಶ್ ಎಂಬುದಕ್ಕೆ 'come to agreement on something after lengthy and vigorous discussion' ಎಂಬರ್ಥವೂ ಇದೆ. ಈ ನಾಲ್ಕು ಪಾತ್ರಗಳ ನಡುವೆ ಏನು ಅಂತಹ ಅಗ್ರಿಮೆಂಟ್ ಎಂಬುದೇ ಕ್ಲೈಮ್ಯಾಕ್ಸ್.

  ಏನೇ ಇರಲಿ ಕನ್ನಡದ ಈ ಉತ್ಸಾಹಿ ಸಿನಿಕರ್ಮಿಗಳ ಪ್ರತಿಭೆಗೆ ಅತಿಹೆಚ್ಚು ಪ್ರೇಕ್ಷಕರ ಚಪ್ಪಾಳೆಯ ಪ್ರೋತ್ಸಾಹ ಸಿಗಲಿ .
  #ಹ್ಯಾಶ್ ತಂಡಕ್ಕೆ ಆಲ್ ದಿ ಬೆಸ್ಟ್ .. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಾಸ್ ಬುಕ್ ಮಾಡಿ : https://www.99doing.com/event/hash-478

  English summary
  #Hash- A mystery thriller directed by Sathwik Siddaiah will a special Premier Show at Chamundeshwari studio, Cunningham road, Bengaluru on May 01, 2016. The film has Seema Buthello, Sandeep Sunkada, Ambareesh, Seema, Siddu Mandya and others.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more