»   » ಶಿವಣ್ಣನ ಸಿನಿಮಾದ ನಾಯಕಿ ಗುಟ್ಟಾಗಿ ಮದ್ವೆ ಆದ್ರಂತೆ.!

ಶಿವಣ್ಣನ ಸಿನಿಮಾದ ನಾಯಕಿ ಗುಟ್ಟಾಗಿ ಮದ್ವೆ ಆದ್ರಂತೆ.!

Posted By:
Subscribe to Filmibeat Kannada

ಸದ್ಯ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮದುವೆ ವಿಚಾರವೇ ದೊಡ್ಡ ಚರ್ಚೆಯಾಗಿ ಉಳಿದಿದೆ. ಇಟಲಿಯಲ್ಲಿ ಸಪ್ತಪದಿ ತುಳಿದ ಈ ಜೋಡಿ, ಮುಂಬೈ ಹಾಗೂ ದೆಹಲಿಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದರು.

ಅನುಷ್ಕಾ ಮತ್ತು ವಿರಾಟ್ ಮದುವೆ ಸುದ್ದಿಯ ನಡುವೆ ಬಹುಭಾಷೆ ನಟಿ ಇಲಿಯಾನ ಸೀಕ್ರೆಟ್ ಆಗಿ ಮದ್ವೆ ಆಗಿದ್ದಾರೆ ಎಂಬ ವಿಷ್ಯ ಸರ್ಪ್ರೈಸ್ ಆಗಿತ್ತು. ಇದೀಗ, ಅಷ್ಟರಲ್ಲೇ ಮತ್ತೊರ್ವ ನಟಿ ಗುಟ್ಟಾಗಿ ಮದ್ವೆ ಅಗಿದ್ದಾರೆ ಎಂಬ ವಿಚಾರ ಈಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ನಟಿ ಸ್ಯಾಂಡಲ್ ವುಡ್ ಚಕ್ರವರ್ತಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿದ್ದರು ಎನ್ನುವುದು ವಿಶೇಷ.

ನಟಿ ಇಲಿಯಾನಾ ಸೀಕ್ರೆಟ್ ಮದುವೆ ಆಗ್ಬಿಟ್ರಾ?

ಹಾಗಿದ್ರೆ, ಶಿವರಾಜ್ ಕುಮಾರ್ ಜೊತೆ ಅಭಿನಯಿಸಿದ್ದ ಆ ನಾಯಕಿ ಯಾರು? ಈಗ ಎಲ್ಲಿದ್ದಾರೆ? ಯಾರ ಜೊತೆ ಮದ್ವೆ ಆಗಿದ್ದಾರೆ ಎಂಬ ಕುತೂಹಲಕಾರಿ ಸಂಗತಿ ಇಲ್ಲಿದೆ. ಮುಂದೆ ಓದಿ.....

ಬಹುಕಾಲದ ಗೆಳಯನನ್ನ ಮದ್ವೆ ಆದ್ರಾ?

33 ವರ್ಷದ ನಟಿ ಕಮ್ ನಿರೂಪಕಿ ಸುರ್ವಿನ್ ಚಾವ್ಲಾ ತನ್ನ ಬಹುಕಾಲದ ಗೆಳೆಯ ಅಕ್ಷಯ್ ತಕ್ಕರ್ ಅವರನ್ನ ಗುಟ್ಟಾಗಿ ಮದುವೆ ಎಂಬ ಚರ್ಚೆ ಚಿತ್ರ ವಲಯದಲ್ಲಿ ಗಮನ ಸೆಳೆಯುತ್ತಿದೆ. ಈಗೊಂದು ಸುದ್ದಿ ಹರಿದಾಡಲು ಕಾರಣ, ಸ್ವತಃ ಸುರ್ವಿನ್ ಚಾವ್ಲಾ ಅವರು ಪೋಸ್ಟ್ ಮಾಡಿರುವ ಫೋಟೋ ಮತ್ತು ಅದಕ್ಕೆ ಅವರು ಹಾಕಿರುವ ಸ್ಟೇಟಸ್.

'ಕರಿಯ ಆದರೂ ಮದುವೆ ಆಗ್ತೀನಿ' ಎಂದ ಶುಭಾ ಪೂಂಜಾ

ಯಾವುದು ಫೋಟೋ? ಏನದು ಸ್ಟೇಟಸ್?

''surveen chawla And just like that, right in the middle of an extra-ordinary life, love gave us a fairy tale.. .❤️#Married #bliss #EternalLove #GiveUsYourLove&Blessings''. ಈ ಸ್ಟೇಟಸ್ ನಲ್ಲಿ 'ಮ್ಯಾರೀಡ್' ಎಂಬ ಟ್ಯಾಗ್ ಬಳಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಹೀಗಾಗಿ, ಇವರಿಬ್ಬರ ಮದುವೆ ಆಗಿರಬಹುದು ಎಂಬ ಕುತೂಹಲ ಕಾಡುತ್ತಿದೆ.

2015ರಲ್ಲೇ ಮದುವೆ ಆಗಿದೆಯಂತೆ

2013ರಲ್ಲಿ ಕಾಮನ್ ಫ್ರೆಂಡ್ ಮೂಲಕ ಸುರ್ವಿನ್ ಮತ್ತು ಅಕ್ಷಯ್ ಪರಿಚಯವಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿತು. 2015ರಲ್ಲಿ ಎರಡು ಕುಟುಂಬದವರು ಒಪ್ಪಿಸಿ ವಿವಾಹ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದ್ರೆ, ಇದು ಎಲ್ಲಿಯೂ ಬಹಿರಂಗವಾಗಿಲ್ಲ. ಕೇವಲ ಕುಟುಂಬಸ್ಥರು ಮತ್ತು ಕೆಲವೇ ಸ್ನೇಹಿತರು ಮಾತ್ರ ಭಾಗಿಯಾಗಿದ್ದರಂತೆ. ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಈ ಬಗ್ಗೆ ನಟಿ ಯಾವುದೇ ಸ್ವಷ್ಟನೆ ನೀಡಿಲ್ಲ.

ಶಿವಣ್ಣ ಚಿತ್ರದಲ್ಲಿ ಅಭಿನಯಿಸಿದ್ದರು

ಅಂದ್ಹಾಗೆ, ಸುರ್ವಿನ್ ಚಾವ್ಲಾ ಸಿನಿವೃತ್ತಿ ಆರಂಭಿಸಿರುವುದು ಕನ್ನಡ ಚಿತ್ರರಂಗದ ಮೂಲಕ. ಕಿರುತೆರೆಯಲ್ಲಿ ನಿರೂಪಕಿ ಆಗಿದ್ದ ಸುರ್ವಿನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಪರಮೇಶ ಪಾನಾವಾಲಾ' ಚಿತ್ರದಲ್ಲಿ ನಾಯಕಿಯಾಗಿದ್ದರು. ಇದು ಈಕೆಗೆ ಮೊದಲ ಸಿನಿಮಾ. ನಂತರ ಪಂಜಾಬಿ ಮತ್ತು ಬಾಲಿವುಡ್ ನಲ್ಲಿ ಹೆಚ್ಚು ತೊಡಗಿಕೊಂಡರು. 'ಹೇಟ್ ಸ್ಟೋರಿ-2' ಚಿತ್ರದಿಂದ ಸುರ್ವಿನ್ ಖ್ಯಾತಿ ಹೆಚ್ಚಾಗಿತ್ತು.

ಬೆಂಗಳೂರಿನಲ್ಲಿ ಆರತಕ್ಷತೆಗೆ ಸಜ್ಜಾದ್ರು ಜಾಕಿ ಭಾವನಾ-ನವೀನ್

English summary
33-year-old 'Hate Story 2' actress Surveen Chawla married her long-time boyfriend Akshay Thakker. Surveen shared the news with her fans on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X