»   » ಎಲ್ಲರಿಗೂ ಧನ್ಯವಾದಗಳು: ಗೀತಾ ಮತ್ತು ಶಿವರಾಜಕುಮಾರ್

ಎಲ್ಲರಿಗೂ ಧನ್ಯವಾದಗಳು: ಗೀತಾ ಮತ್ತು ಶಿವರಾಜಕುಮಾರ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೇಷ್ಠ ಪುತ್ರಿ ಡಾ.ನಿರುಪಮಾ ಅವರ ವಿವಾಹವು ಡಾ.ದಿಲೀಪ್ ಅವರ ಜೊತೆ ಕಳೆದ ಸೋಮವಾರ (ಆಗಸ್ಟ್ 31) ದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಭವದಿಂದ ನೆರವೇರಿದೆ.

ಇದೀಗ ನಟ ಶಿವರಾಜ್ ಕುಮಾರ್ ಅವರು ತಮ್ಮ ಮುದ್ದು ಮಗಳ ಮದುವೆಯ ಸಂಭ್ರಮವನ್ನು ಎಲ್ಲಾ ಅಭಿಮಾನಿ ಬಳಗಕ್ಕೆ ಹಾಗೂ ಪ್ರೇಕ್ಷಕರಿಗೆ ತಲುಪಿಸಿದ್ದಕ್ಕಾಗಿ ಎಲ್ಲಾ ಮಾಧ್ಯಮ ಬಂಧುಗಳಿಗೆ ಶನಿವಾರ (ಸೆಪ್ಟೆಂಬರ್ 5) ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.[ಶಿವಣ್ಣ ಮಗಳ ಮದುವೆಯಲ್ಲಿ ಸುದೀಪ್-ಪುನೀತ್ ಮಾಡಿದ್ದೇನು? ]

shiva rajkumar

ಹೀಗಾಗಿ ನಟ ಶಿವರಾಜ್ ಕುಮಾರ್ ಅವರು ವಿಶೇಷವಾಗಿ ಮಾಧ್ಯಮದವರಿಗೆಂದೇ ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ನಲ್ಲಿ ಶನಿವಾರ (ಸೆಪ್ಟೆಂಬರ್ 5) ದಂದು ಸ್ಪೆಷಲ್ ಗೆಟ್-ಟುಗೆದರ್ ಪಾರ್ಟಿ ಆರೆಂಜ್ ಮಾಡಿದ್ದರು.[ಶಿವಣ್ಣ ಮಗಳ ಮದುವೆಯ 'ರಾಜ' ವೈಭೋಗ]

ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಗಳ ಮದುವೆಯ ಸಂಭ್ರಮವನ್ನು ಅದ್ಧೂರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಿದ್ದಕ್ಕಾಗಿ ಹಾಗೂ ಮದುವೆ ಸಾಂಗವಾಗಿ ನೆರವೇರಿದ್ದಕ್ಕಾಗಿ ಮಾದ್ಯಮ ವರ್ಗದವರಿಗೆ ಧನ್ಯವಾದ ತಿಳಿಸಿದ್ದಾರೆ.[ಮುತ್ತಣ್ಣನ ಮಗಳ ಮದುವೆಗೆ ಕುಮಾರನಿಗಿಲ್ಲ ಆಹ್ವಾನ ]

shiva rajkumar

ಈ ವಿಶೇಷ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಗೀತಾ ಶಿವರಾಜ್ ಕುಮಾರ್ ಅವರ ಸೋದರ ಮಧು ಬಂಗಾರಪ್ಪ, ಕೆ.ಪಿ ಶ್ರೀಕಾಂತ್ ಮುಂತಾದವರು ಭಾಗವಹಿಸಿದ್ದರು.

English summary
Actor Shivarajakumar on Saturday night thanked the media for the support they extended during his daughter Nirupama's wedding which was held in the Palace Grounds on last Monday. Dr.Nirupama has tied knot with Dr.Dileep on (August 31st) in Palace Grounds, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada