ಹೊಸ ಕಾರ್ ಖರೀದಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಹೌದು, ಶಿವಣ್ಣ ಇದೀಗ ಮತ್ತೊಂದು ಹೊಸ ಕಾರನ್ನು ಖರೀದಿಸಿದ್ದಾರೆ. ಪತ್ನಿ ಗೀತಾ ಅವರಿಗೆ ಈ ಕಾರನ್ನು ಗಿಫ್ಟಾಗಿ ನೀಡಿದ್ದಾರೆ.
ವಿಶೇಷ ಅಂದರೆ, ಕಳೆದ ಮೂರು-ನಾಲ್ಕು ತಿಂಗಳಲ್ಲಿ ಶಿವಣ್ಣ ಮೂರು ಕಾರನ್ನು ಖರೀದಿಸಿದ್ದಾರೆ. ಸೆಲೆಬ್ರಿಟಿ ಅಂದಮೇಲೆ ಐಶಾರಾಮಿ ಕಾರುಗಳು ಇರುವುದು, ಕಾರ್ ಕ್ರೇಜ್ ಇರುವುದು ಸರ್ವೇ ಸಾಮಾನ್ಯ. ಇದಕ್ಕೆ ಶಿವಣ್ಣ ಏನು ಹೊರತಾಗಿಲ್ಲ. ಶಿವಣ್ಣ ಕಾರ್ ಕ್ರೇಜ್ ಗೆ ಮತ್ತೊಂದು ದುಬಾರಿ ಕಾರು ಸೇರಿಕೊಂಡಿದೆ. ಅಂದಮೇಲೆ ಸೆಂಚುರಿ ಸ್ಟಾರ್ ಮನೆಯಲ್ಲೀಗ ಐದಾರು ಕಾರುಗಳಿವೆ.
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ ಶಿವಣ್ಣ ಹೊಸ ಕಾರನ್ನು ಕೊಂಡುಕೊಂಡಿದ್ದಾರೆ. ರಾತ್ರಿ ಮನೆಗೆ ಆಗಮಿಸಿದ ಹೊಸ ಅತಿಥಿಗೆ ಶಿವಣ್ಣ ದಂಪತಿ ಪೂಜೆ ಮಾಡುವ ಮೂಲಕ ಬರಮಾಡಿಕೊಂಡಿದ್ದಾರೆ. ಅಂದಹಾಗೆ, ಶಿವಣ್ಣ ಕೊಂಡುಕೊಂಡ ಕಾರು ಯಾವುದು? ಇಲ್ಲಿದೆ ಮಾಹಿತಿ..

ವೋಲ್ವೋ S 90 ಕಾರ್ ಖರೀದಿಸಿದ ಶಿವಣ್ಣ
ಸೆಂಚುರಿ ಸ್ಟಾರ್ ಮನೆಯಲ್ಲಿ ಈಗಾಗಲೇ ಸಾಕಷ್ಟು ಕಾರುಗಳಿವೆ. ಅವುಗಳ ಜೊತೆ ಈಗ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ಎರಡು ದಿನಗಳ ಹಿಂದೆ ಶಿವಣ್ಣ ನೀಲಿ ಬಣ್ಣದ ವೋಲ್ವೋ S 90 ಕಾರನ್ನು ಕೊಂಡುಕೊಂಡಿದ್ದಾರೆ. ವೋಲ್ವೋ S 90 ಕಾರು ಸುಮಾರು 1 ಕೋಟಿ ಬೆಲೆಬಾಳುವ ಕಾರಾಗಿದೆ.

ಪೂಜೆ ಸಲ್ಲಿಸಿದ ಶಿವಣ್ಣ ದಂಪತಿ
ಹೊಸದಾಗಿ ವಾಹನ ಖರೀದಿಸಿದ್ರೆ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರಂತೆ, ಶಿವಣ್ಣ ದಂಪತಿ ಹೊಸ ವೋಲ್ವೋ S 90 ಕಾರಿಗೆ ಪೂಜೆ ಮಾಡಿದ್ದಾರೆ. ಪೂಜೆ ನಂತರ ಶಿವಣ್ಣ ಕಾರ್ ಏರಿ ಜಾಲಿ ರೈಡ್ ಕೂಡ ಮಾಡಿದ್ದಾರೆ. ಲೇಟೆಸ್ಟ್ ಮಾಡೆಲ್ ಕಾರ್ ಇದಾಗಿದ್ದು, ಭಾರತಕ್ಕೆ ಬಂದ ಮೊದಲ ಕಾರು ಅಂತ ಹೇಳಲಾಗುತ್ತಿದೆ.. 18 ಕಿಲೋಮೀಟರ್ ಮೈಲೇಜ್ ನೀಡುವ ಕಾರು ಇದಾಗಿದೆ.

ಶಿವಣ್ಣ ಮನೆಯಲ್ಲಿರುವ ಕಾರುಗಳು ಯಾವುವು?
ಹ್ಯಾಟ್ರಿಕ್ ಹೀರೊ ಮನೆಯಲ್ಲಿ ಈಗಗಾಲೇ ಐದಾರು ದುಬಾರಿ ಕಾರುಗಳಿವೆ. ಫಾರ್ಚುನರ್, ಎರಡು ಇನೋವಾ ಮತ್ತು ನಿಶಾನ್ ಟಿಡಾ ಕಾರುಗಳಿವೆ. ಇದರ ಜೊತೆಗೀಗ ವೋಲ್ವೋ s 90 ಕಾರು ಕೂಡ ಸೇರ್ಪಡೆಯಾಗಿದೆ. ಮಗಳು ನಿವೇದಿತಾ, ಪತ್ನಿ ಗೀತಾ ಮತ್ತು ಶಿವಣ್ಣ ಅವರಿಗೆ ಓಡಾಡಲು ಮನೆಯಲ್ಲಿ ಪ್ರತ್ಯೇಕ ಕಾರುಗಳಿವೆ. ಸದ್ಯ, ಖರೀದಿಸಿದ ವೋಲ್ವೋ S 90 ಕಾರನ್ನು ಪತ್ನಿ ಗೀತಾ ಅವರಿಗೆ ಗಿಫ್ಟಾಗಿ ನೀಡಿದ್ದಾರೆ.

ಇತ್ತೀಚಿಗಷ್ಟೆ ಹೊಸ ಕಾರು ಖರೀದಿಸಿದ್ದ ಪುನೀತ್
ಇತ್ತಿಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಹೊಸ ಕಾರನ್ನು ಖರೀದಿಸಿದ್ರು. ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಕೊಂಡುಕೊಂಡಿದ್ದ ಅಪ್ಪು ಪತ್ನಿ ಅಶ್ವಿನಿ ಅವರಿಗೆ ಗಿಫ್ಟ್ ಆಗಿ ನೀಡಿದ್ರು. ಅದರ ನಂತರ ಶಿವಣ್ಣ ವೋಲ್ವೋ S 90 ಕಾರನ್ನು ಪತ್ನಿ ಗೀತಾ ಅವರಿಗೆ ಗಿಫ್ಟಾಗಿ ನೀಡಿದ್ದಾರೆ.


Click it and Unblock the Notifications











