For Quick Alerts
  ALLOW NOTIFICATIONS  
  For Daily Alerts

  ವಿವೇಕ್ ಒಬೆರಾಯ್ ಗೆ ಮೊದಲು ಸಿನಿಮಾ ಆಫರ್ ನೀಡಿದ್ದೆ ಶಿವಣ್ಣ

  |

  ಬಾಲಿವುಡ್ ನಟ ವಿವೇಕ್ ಒಬೆರಾಯ್ ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿವೇಕ್ ಕನ್ನಡ ಸಿನಿಮಾದಲ್ಲಿ ಮಿಂಚಿದ್ದಾರೆ. ಖಾಕಿ ತೊಟ್ಟು ಕನ್ನಡ ಚಿತ್ರಪ್ರಿಯರ ಮುಂದೆ ಬಂದಿರುವ ವಿವೇಕ್ ಒಬೆರಾಯ್ ಒಂದು ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.

  ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ವಿವೇಕ್ ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ನೀಡಿದ ಸಿನಿಮಾ ಆಫರ್ ನ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ವಿವೇಕ್ ಒಬೆರಾಯ್ ಇನ್ನು 18 ವರ್ಷದವರಾಗಿದ್ದಾಗಲೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕೊಟ್ಟಿದ್ದರಂತೆ.

  ಡಬಲ್ ಖುಷಿಯ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಕುಟುಂಬ ಡಬಲ್ ಖುಷಿಯ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಕುಟುಂಬ

  ವಿವೇಕ್ ಒಬೆರಾಯ್ ಅಂದ್ರೆ ಅಂದು ಯಾರು ಎನ್ನುವುದೆ ಯಾರಿಗೂ ಗೊತ್ತಿರಲಿಲ್ಲ. ಈ ಸಂದರ್ಭದಲ್ಲೆ ಶಿವಣ್ಣ ನೀಡಿದ ಆಫರ್ ಕೇಳಿ ತುಂಬಾ ಖುಷಿ ಪಟ್ಟಿದ್ದರಂತೆ ವಿವೇಕ್. ಒಬೆರಾಯ್ ಚಿಕ್ಕಮ್ಮನ ಮನೆ ಇರುವುದು ಬೆಂಗಳೂರಿನಲ್ಲಿ. ಚಿಕ್ಕಮ್ಮ ಅವರ ಕುಟುಂಬ ಡಾ.ರಾಜ್ ಕುಮಾರ್ ಕುಟುಂಬಕ್ಕೆ ತುಂಬಾ ಆಪ್ತರಂತೆ. ಆ ಸಮಯದಲ್ಲಿ ವಿವೇಕ್ ಒಬೆರಾಯ್ ಅವರನ್ನು ನೋಡಿದ ಶಿವಣ್ಣ ಸಿನಿಮಾದಲ್ಲಿ ಅಭಿನಯಸುವಂತೆ ಹೇಳಿದ್ದರಂತೆ.

  "ನೋಡಲು ತುಂಬಾ ಸುಂದರವಾಗಿದ್ದಾನೆ. ಕನ್ನಡದಲ್ಲಿ ನಿನ್ನನ್ನು ಲಾಂಚ್ ಮಾಡುತ್ತೇನೆ" ಎಂದು ಶಿವಣ್ಣ ಅಂದೇ ಹೇಳಿದ್ದರಂತೆ. ಶಿವರಾಜ್ ಕುಮಾರ್ ಅಭಿನಯದ ಚಿತ್ರದಲ್ಲಿ ಶಿವಣ್ಣನ ತಮ್ಮನ ಪಾತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದ್ರಂತೆ. ಆದ್ರೆ ವಿವೇಕ್ ಅಮೆರಿಕಾಗೆ ಹೋಗಬೇಕಾಗಿದ್ದರಿಂದ ಅವತ್ತು ಶಿವಣ್ಣ ನೀಡಿದ ಆಫರ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಾಗಿರ್ಲಿಲ್ಲವಂತೆ. ಆದ್ರೀಗ ಅದೆ ಪ್ರೀತಿ ವಿಶ್ವಾಸಕ್ಕೆ ಇಂದು ಶಿವಣ್ಣ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ ವಿವೇಕ್.

  ರುಸ್ತುಂ ಚಿತ್ರದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ನಿರ್ದೇಶಕ ರವಿ ವರ್ಮಾ ಮೊದಲ ಬಾರಿಗೆ ರುಸ್ತುಂ ಮೂಲಕ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ರುಸ್ತುಂ' ಜೂನ್ 14ಕ್ಕೆ ತೆರೆಗೆ ಬರುತ್ತಿದೆ.

  English summary
  Bollywood actor Vivek Oberoi said that Hatrick Hero Shivaraj Kumar first offered to me in his film. He is playing important role in Shivaraj Kumar starrer 'Rustom' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X