ಸರ್ಜರಿ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾದ ಹ್ಯಾಟ್ರಿಕ್ ಹೀರೋ
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸರ್ಜರಿ ಬಳಿಕ ರೆಸ್ಟ್ ನಲ್ಲಿದ್ದರು. ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ವಿಶ್ರಾಂತಿ ಪಡೆಯುತ್ತಿರುವ ಶಿವಣ್ಣ ಮತ್ತೆ ಆಕ್ಷನ್ ಗೆ ಮರಳಿದ್ದಾರೆ. ಸರ್ಜರಿಗೂ ಮೊದಲು ಹರ್ಷ ನಿರ್ದೇಶನದ ಭಜರಂಗಿ-2 ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.
ಕೆಲವು ದಿನಗಳ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಶಿವಣ್ಣ ಸರ್ಜರಿಗಾಗಿ ಚಿತ್ರೀಕರಣ ಅರ್ಧದಲ್ಲೆ ನಿಲ್ಲಿಸಿದ್ದರು. ನಂತರ ಶಿವಣ್ಮ ಲಂಡನ್ ಗೆ ತೆರಳಿದ್ದರು. ಜುಲೈ 10ರಂದು ಕರುನಾಡ ಚಕ್ರವರ್ತಿ ಬಲ ಭುಜದ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಬಳಿಕ ಮತ್ತೀಗ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

ಚೆನ್ನೈನಲ್ಲಿ ಹ್ಯಾಟ್ರಿಕ್ ಹೀರೋ
ಶಿವರಾಜ್ ಕುಮಾರ್ ಸದ್ಯ ಚೆನ್ನೈನಲ್ಲಿದ್ದಾರೆ. ಜಾಹಿರಾತು ಚಿತ್ರೀಕರಣಕ್ಕೆಂದು ಶಿವಣ್ಣ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ಸಿನಿಮಾ ಚಿತ್ರೀಕರಣದ ನಡುವೆಯು ಶಿವರಾಜ್ ಕುಮಾರ್ ಜಾಹಿರಾತು ಚಿತ್ರೀಕರಣದಲ್ಲೂ ಭಾಗಿಯಾಗುತ್ತಿದ್ದಾರೆ.

ನಾಳೆಯಿಂದ ಭಜರಂಗಿ-2 ಶೂಟಿಂಗ್
ಸದ್ಯ ಜಾಹಿರಾತು ಚಿತ್ರೀಕರಣದಲ್ಲಿರುವ ಶಿವಣ್ಣ ನಾಳೆಯಿಂದ ಭಜರಂಗಿ-2 ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಭಜರಂಗಿ-2 ಈಗಾಗಲೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಶಿವಣ್ಣಗೆ ನಾಯಕಿಯಾಗಿ ಭಾವನ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಒಂದು ವಾರ ಚಿತ್ರೀಕರಣ ಮಾಡಿದೆ ಚಿತ್ರತಂಡ.

ನವೆಂಬರ್ ನಂತರ ಆಕ್ಷನ್ ಸೀನ್
ಸದ್ಯ ಶಿವಣ್ಣ 70ರಷ್ಟು ಗುಣಮುಖರಾಗಿದ್ದಾರೆ. ಹಾಗಾಗಿ ಆಕ್ಷನ್ ದೃಶ್ಯ ಬಿಟ್ಟು ಉಳಿದೆಲ್ಲ ಸೀನ್ ಗಳಲ್ಲಿ ಶಿವಣ್ಣ ಕಾಣಿಸಿಕೊಳ್ಳಬಹುದಂತೆ. ಹಾಗಾಗಿ ಮುಂದಿನ ಎರಡು ತಿಂಗಳಲ್ಲಿ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ನವೆಂಬರ್ ನಂತರ ಮತ್ತೆ ಆಕ್ಷನ್ ಸೀನ್ ಗಳಲ್ಲಿ ಮಿಂಚಲಿದ್ದಾರೆ.

ಐದು ಭಾಷೆಯಲ್ಲಿ ಭಜರಂಗಿ-2
ಭಜರಂಗಿ-2 ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆಯಂತೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿವೆ. ಭಜರಂಗಿ-2 ಐದು ಭಾಷೆಯಲ್ಲಿ ತೆರೆಗೆ ಬಂದರೆ, ಮೊದಲ ಬಾರಿಗೆ ಶಿವರಾಜ್ ಕುಮಾರ್ ಬೇರೆ ಬೇರೆ ಭಾಷೆಯಲ್ಲೂ ಮಿಂಚಲಿದ್ದಾರೆ.


Click it and Unblock the Notifications











