14 ವರ್ಷ ತುಂಬಿದ ಸಂಭ್ರಮದಲ್ಲಿ ಸೂಪರ್ ಹಿಟ್ 'ಜೋಗಿ' ಸಿನಿಮಾ
Recommended Video
ತಾಯಿ ಸೆಂಟಿಮೆಂಟ್, ಅದ್ಭುತ ಸಂಗೀತ, ಶಿವರಾಜ್ ಕುಮಾರ್ ಅಭಿನಯ, ಪ್ರೇಮ್ ನಿರ್ದೇಶನ ಕನ್ನಡಿಗರನ್ನು ಮೋಡಿ ಮಾಡಿದ್ದ ಸಿನಿಮಾ ಜೋಗಿ. ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರಿಯರನ್ನು ನಿದ್ದೆ ಗೆಡಿಸಿದ್ದ ಸಿನಿಮಾ ಜೋಗಿ. ಎಲ್ಲಿ ನೋಡಿದ್ರು ಜೋಗಿ ಚಿತ್ರದ್ದೆ ಮಾತು, ಯಾವ ಚಿತ್ರಮಂದಿರಗಳಲ್ಲಿ ನೋಡಿದ್ರು ಜೋಗಿ ಸಿನಿಮಾದೆ ಪೋಸ್ಟರ್ಸ್ ಮತ್ತು ಬ್ಯಾನರ್ಸ್. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಜೋಗಿ ಸಿನಿಮಾಕ್ಕೆ ಈಗ 14 ವರ್ಷ ತುಂಬಿದೆ.
ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು ಜೋಗಿ. ಶಿವರಾಜ್ ಕುಮಾರ್ ಮತ್ತು ಪ್ರೇಮ್ ಕಾಂಬಿನೇಶನ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೆ ಸೃಷ್ಟಿಸಿತ್ತು. ಇದೆಲ್ಲ ಈಗ ಇತಿಹಾಸ. 14 ವರ್ಷದ ಸಂಭ್ರಮದಲ್ಲಿರುವ ಜೋಗಿ ಚಿತ್ರದ ಹಳೆಯ ನೆನಪನ್ನು ಮೆಲಕುಹಾಕಿದೆ ಚಿತ್ರತಂಡ.

14 ವರ್ಷದ ಸಂಭ್ರಮದಲ್ಲಿ ಜೋಗಿ
ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರೇಮ್ ಮತ್ತು ಶಿವಣ್ಣ ಕಾಂಬಿನೇಶನ್ ನ ಜೋಗಿ ಸಿನಿಮಾಗೆ 14 ವರ್ಷ. ಇದೇ ತಿಂಗಳು, ಇದೇ ದಿನ ಆಗಸ್ಟ್ 19 ಜೋಗಿ ಸಿನಿಮಾ ತೆರೆಗೆ ಬಂದಿತ್ತು. ಸುಮಾರು 60ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಜೋಗಿ ಶತದಿನೋತ್ಸವನ್ನು ಆಚರಿಸಿಕೊಂಡಿತ್ತು. ಶತಕದ ಸಂಭ್ರಮವನ್ನು ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಲಾಗಿತ್ತು.

ಇತಿಹಾಸ ನೆನಪಿಸಿಕೊಂಡ ಪ್ರೇಮ್
"ಇಡೀ ಭಾರತೀಯ ಚಿತ್ರರಂಗವೇ ಒಂದು ಭಾರಿ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ ಜೋಗಿಗೆ ಗೆ ಇಂದು 14ವರ್ಷ ತುಂಬಿದೆ. ನನ್ನ ಪ್ರೀತಿಯ ಅಣ್ಣ ಹ್ಯಾಟ್ರಿಕ್ ಹೀರೋ ಶಿವಣ್ಣ, ಅಶ್ವಿನಿ ಕಂಪನಿ, ಗುರು ಕಿರಣ್ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಸದಾ ಕನ್ನಡ ಸಿನಿಮಾಗಳನ್ನು ಬೆಳೆಸಿ, ಪ್ರೋತ್ಸಾಹಿಸಿ" ಎಂದು ಪ್ರೇಮ್ ಹೇಳಿದ್ದಾರೆ.

ಡಾ.ರಾಜ್ ದಂಪತಿಯಿಂದ ಪ್ರಾರಂಭವಾದ ಸಿನಿಮಾ
ಚಿತ್ರದ ಮೊದಲ ಶಾಟ್ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ದಂಪತಿ ಜೋಳಿಗೆ ತುಂಬವ ದೃಶ್ಯದೊಂದಿಗೆ ಪ್ರಾರಂಭವಾಗುತ್ತೆ. ಅವರು ತುಂಬಿದ ಜೋಳಿಗೆಯಂತೆ ಈ ಸಿನಿಮಾ ಬಿಡುಗಡೆಯ ನಂತರ ನಿರ್ಮಾಪರ ಜೋಳಿಗೆ ಭರ್ತಿಯಾಗಿತ್ತು. ಈ ದೃಶ್ಯದ ಬಳಿಕ ರಾಜ್ ಕುಮಾರ್ ತುಂಬ ಎಮೋಷನಲ್ ಆಗಿದ್ರಂತೆ. ಅದೆ ಎಮೋಷನಲ್ ಇಡೀ ಸಿನಿಮಾದಲ್ಲಿ ಇದೆ.

ಸೆಂಟಿಮೆಂಟ್, ಸಂಗೀತ
ಚಿತ್ರದ ಹೈಲೆಟ್ ಅಂದ್ರೆ ತಾಯಿ ಮಗನ ಸೆಂಟಿಮೆಂಟ್ ಮತ್ತು ಸಂಗೀತ. ಶಿವರಾಜ್ ಕುಮಾರ್ ಮತ್ತು ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರುದಂತಿ ನಾಗ್ ಕಾಂಬಿನೇಶನ್ ಗೆ ಅಭಿಮಾನಿಗಳು ಬೆರಗಾಗಿದ್ರು. ತಾಯಿ ಮಗನ ಕುಣಿತ, ಇಬ್ಬರ ಪ್ರೀತಿ ನೋಡಿ ನೋಡುಗರು ಭಾವುಕರಾಗಿದ್ದರು. ಜೊತೆಗೆ ಗುರುಕಿರಣ್ ಸಂಗೀತ ಕೂಡ ಚಿತ್ರಕ್ಕೆ ಹೊಸ ರಂಗನ್ನು ತಂದು ಕೊಟ್ಟಿತ್ತು.

ಭಾವುಕರಾಗಿದ್ದ ಡಾ.ರಾಜ್
ಜೋಗಿ ಸಿನಿಮಾದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಆಗ ರಾಜ್ ಕುಮಾರ್, ಶಿವರಾಜ್ ಕುಮಾರ್, ರಜನಿಕಾಂತ್ ಸೇರಿದಂತೆ ಅನೇಕ ಕಲಾವಿದರು ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ಮುಗಿದ ಮೇಲೆ ಡಾ. ರಾಜ್ ಮೌನವಾಗಿಬಿಟ್ಟಿದ್ದರಂತೆ. ಶಿವಣ್ಣ ಅಂತು ಚಿಕ್ಕ ಮಗುವಿನ ಹಾಗೆ ಕಣ್ಣೀರು ಹಾಕಿದ್ರಂತೆ.


Click it and Unblock the Notifications











