ಪದೇ ಪದೆ ಭೇಟಿ ಆಗದಿದ್ದರೆ ಏನು? ಸ್ನೇಹಿತರ ಬಗ್ಗೆ ಪವಿತ್ರಾ ಗೌಡ ಮನದಾಳ

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬಂದಿದ್ದಾರೆ. ಡಿಸೆಂಬರ್ 17ರಂದು ಆಕೆ ಜೈಲಿನಿಂದ ಹೊರ ಬಂದಿದ್ದರು. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದಿದ್ದ ಪವಿತ್ರಾ ಗೌಡ ಮತ್ತೆ ತಮ್ಮ ದೈನಂದಿನ ಕೆಲಸಗಳನ್ನು ಮಗ್ನರಾಗಿದ್ದಾರೆ. ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ 777 ಬ್ಯೂಟಿಕ್ ಮುನ್ನಡೆಸುತ್ತಿದ್ದಾರೆ.

ಕುಂಭಮೇಳದಲ್ಲಿ ಭಾಗಿ ಆಗಿದ್ದ ನಟಿ ಪವಿತ್ರಾ ಗೌಡ ಪವಿತ್ರ ಸ್ನಾನ ಮಾಡಿದ್ದರು. ಬಳಿಕ ಕಾಶಿಗೂ ಭೇಟಿ ನೀಡಿದ್ದರು. ಅದಕ್ಕೂ ಮುನ್ನ ಸಾಯಿ ಬಾಬ ಸನ್ನಿಧಿಗೆ ಹೋಗಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇತ್ತೀಚೆಗೆ ನೀಲಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಸ್ನೇಹ ಹಾಗೂ ಸ್ನೇಹಿತರ ಬಗ್ಗೆ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಬಹುಭಾಷಾ ನಟಿ ರಾಶಿ ಖನ್ನಾ ತಮ್ಮ ಸ್ನೇಹಿತರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದನ್ನು ಪವಿತ್ರಾ ಹಂಚಿಕೊಂಡಿದ್ದಾರೆ.

Having Good circle of friends important says Actress Pavitra Gowda

"ಒಳ್ಳೆ ಸ್ನೇಹಿತರ ಸರ್ಕಲ್ ಎಷ್ಟು ಮುಖ್ಯ ಎನ್ನುವುದನ್ನು ನಾನು ಅರಿತೆ. ಅದು ಬಹಳ ಮುಖ್ಯ. ನೀವು ಯಾರು ಎನ್ನುವುದನ್ನು ಇದು ನಿರ್ಧರಿಸುತ್ತದೆ. ನನಗೆ ಒಂದಷ್ಟು ಅದ್ಭುತ ಸ್ನೇಹಿತರಿದ್ದಾರೆ. ಒಳ್ಳೆ ಕೆಲಸಗಳನ್ನು ಮಾಡಲು ಸದಾ ಹುರಿದುಂಬಿಸುವವರು, ನಿಮ್ಮನ್ನು ಹಿಂದಕ್ಕೆ ತಳ್ಳುವವರಲ್ಲ" ಎಂದು ರಾಶಿ ಖನ್ನಾ ಹೇಳಿದ್ದರು.

"ನನಗೆ ಟೈಮ್ ಸಿಗಲಿಲ್ಲ, ಭೇಟಿ ಆಗಲು ಸಾಧ್ಯವಾಗಲಿಲ್ಲ. ಅದು ಇದು ಎನ್ನುವವರು ಬೇಕಿಲ್ಲ. ಭೇಟಿ ಆಗದಿದ್ದರೂ ಪರವಾಗಿಲ್ಲ, ಏನು ಮಾಡುತ್ತಿದ್ದೀಯಾ? ನಿನ್ನ ಬಗ್ಗೆ ನನಗೆ ಖುಷಿ ಇದೆ. ನಾನು ನಿನ್ನ ಬೆಂಬಲಕ್ಕೆ ನಿಲ್ತೀನಿ ಅಂತ ಹೇಳುವ ಸ್ನೇಹಿತರು ಬೇಕು" ಎಂದು ರಾಶಿ ವಿವರಿಸಿದ್ದರು.

ಸ್ನೇಹಿತರ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ರಾಖಿ ಖನ್ನಾ ವೀಡಿಯೋ ಮೂಲಕ ಪವಿತ್ರಾ ಗೌಡ ತೆರೆದಿಟ್ಟಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿ ಆಗಿಲ್ಲ ಎನ್ನಲಾಗ್ತಿದೆ. ಜನವರಿ 10ರಂದು ರೇಣುಕಾಸ್ವಾಮಿ ಪ್ರಕರಣದ ಸಂಬಂಧ ಎಲ್ಲಾ ಆರೋಪಿಗಳು ಸಿಸಿಹೆಚ್ 57 ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದರು. ಅಂದು ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿ ಆಗಿದ್ದರು.

ತಿಂಗಳುಗಳ ಬಳಿಕ ಕೋರ್ಟ್‌ನಲ್ಲಿ ದರ್ಶನ್ ಅವರನ್ನು ನೋಡಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದರು ಎನ್ನಲಾಗಿತ್ತು. ಇತ್ತೀಚೆಗೆ ಪವಿತ್ರಾ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ 777 ಬ್ಯೂಟಿಕ್ ರೀ ಲಾಂಚ್ ಮಾಡಿದ್ದಾರೆ. ಹೊಸ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿ ಪೋಸ್ಟ್ ಮಾಡುತ್ತಿದ್ದಾರೆ.

ಪವಿತ್ರಾ ಗೌಡ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷದ 96 ಸಾವಿರ ಫಾಲೋವರ್ಸ್ ಇದ್ದಾರೆ. ಆಕೆ 1200 ಜನರನ್ನು ಫಾಲೋ ಮಾಡುತ್ತಿದ್ದಾರೆ. 137 ಪೋಸ್ಟ್‌ಗಳನ್ನು ಈವರೆಗೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಟ ದರ್ಶನ್ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಪವಿತ್ರಾ ಗೌಡ ಪೋಸ್ಟ್ ಮಾಡಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದು ದೊಡ್ಡದಾಗಿ ಸುದ್ದಿ ಆಗಿತ್ತು.

More from Filmibeat

English summary
Actress Pavitra Gowda on Friends and Friendship, her Instagram story goes viral;
Read more about: darshan pavitra gowda sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X