ಮೊಮ್ಮಗನ 'ಸೀತಾರಾಮ ಕಲ್ಯಾಣ' ಮೆಚ್ಚಿದ ತಾತ ಎಚ್.ಡಿ.ದೇವೇಗೌಡ

'ಯುವರಾಜ' ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ 'ಸೀತಾರಾಮ ಕಲ್ಯಾಣ' ಸಿನಿಮಾಗೆ ಬಹುತೇಕ ಕಡೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ.

ಎ.ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಹೀಗಿರುವಾಗಲೇ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ 'ಸೀತಾರಾಮ ಕಲ್ಯಾಣ' ಸಿನಿಮಾವನ್ನ ವೀಕ್ಷಿಸಿದರು.

ಬೆಂಗಳೂರಿನ ಒರಾಯನ್ ಮಾಲ್ ನ ಪಿವಿಆರ್ ಸಿನಿಮಾಸ್ ನಲ್ಲಿ ಪುತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪತ್ನಿ ಚೆನ್ನಮ್ಮ, ಮೊಮ್ಮಗ ನಿಖಿಲ್ ಕುಮಾರ್, ನಟಿ ರಚಿತಾ ರಾಮ್, ನಿರ್ದೇಶಕ ಹರ್ಷ ಜೊತೆಗೆ ಕುಳಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ 'ಸೀತಾರಾಮ ಕಲ್ಯಾಣ' ಚಿತ್ರವನ್ನ ಕಣ್ತುಂಬಿಕೊಂಡರು.

HD Devegowda watches Nikhil Kumar starrer Seetharama Kalyana movie

ಮೊಮ್ಮಗ ನಿಖಿಲ್ ಕುಮಾರ್ ಆಕ್ಟಿಂಗ್, ಡೈಲಾಗ್ ಡೆಲಿವರಿ ಮತ್ತು ಫೈಟ್ಸ್ ದೊಡ್ಡಗೌಡರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಗೂ ದೇವೇಗೌಡರು ಭೇಷ್ ಎಂದಿದ್ದಾರೆ.

ಈ ಮೊದಲು 'ಸೀತಾರಾಮ ಕಲ್ಯಾಣ' ಚಿತ್ರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಈಶ್ವರಪ್ಪ, ಶಾಸಕ ಬಿ.ಸಿ.ಪಾಟೀಲ್ ಸೇರಿದಂತೆ ಹಲವು ರಾಜಕಾರಣಿಗಳು ವೀಕ್ಷಿಸಿ ಚಪ್ಪಾಳೆ ತಟ್ಟಿದ್ದರು.

HD Devegowda watches Nikhil Kumar starrer Seetharama Kalyana movie

ಅಂದಹಾಗೆ ನಿಖಿಲ್, ರಚಿತಾ ರಾಮ್, ಮಧೂ, ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾ ಬಳಗ ಹೊಂದಿರುವ 'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಎಲ್ಲೂ ಕಾಂಪ್ರಮೈಸ್ ಆಗದಂತೆ ಎಚ್.ಡಿ.ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಬಂಡವಾಳ ಹಾಕಿದ್ದಾರೆ. ಕುಟುಂಬ ಸಮೇತ ಕೂತು ನೋಡುವ 'ಸೀತಾರಾಮ ಕಲ್ಯಾಣ' ಸಿನಿಮಾ ಸದ್ಯ ಟಾಕ್ ಅಫ್ ದಿ ಟೌನ್ ಆಗಿದೆ.

More from Filmibeat

English summary
EX Prime Minister HD Devegowda watches Nikhil Kumar starrer 'Seetharama Kalyana' movie in PVR, Orion Mall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X