ಫಿಲಂ ಚೇಂಬರ್ ಅಧ್ಯಕ್ಷರಾಗಿ ಗಂಗರಾಜು ಆಯ್ಕೆ?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2013-14ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಅ.26) ಚುನಾವಣೆ ನಡೆಯುತ್ತಿದ್ದು ಈ ಬಾರಿ ವಿತರಕರ ವಲಯಕ್ಕೆ ಅವಕಾಶ ನೀಡಲಾಗಿದೆ. ಎಚ್.ಡಿ.ಗಂಗರಾಜು ಅವರು ವಿತರಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರೂ ಇಂದು ಸಂಜೆ ವೇಳೆಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಖಜಾಂಚಿಯಾಗಿ ಸಿಂಗಾರಿ ಮಹೇಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ರೇಸ್ ಕೋರ್ಸ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2 ರಿಂದ 5 ಗಂಟೆಗೆ ಚುನಾವಣೆ ನಡೆಯಲಿದೆ. ಸಂಜೆ ಆರು ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಕಾರ್ಯದರ್ಶಿ ಹುದ್ದೆಗೆ ನಿರ್ಮಾಪಕರ ವಲಯದಿಂದ ಸಾ.ರಾ.ಗೋವಿಂದು, ಬಿ.ಆರ್. ಕೇಶವ, ವಿತರಕರ ವಲಯದಿಂದ ಎನ್.ಎಂ.ಸುರೇಶ್, ಜ್ಞಾನೇಶ್ವರ್ ಮತ್ತು ಪ್ರದರ್ಶಕರ ವಲಯದಿಂದ ಜಯರಾಜ್ ಹಾಗೂ ಹನುಮಂತರಾಜು ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಚುನಾವಣಾ ಅಧಿಕಾರಿಗಳಾಗಿ ನಟ ಶಿವಾರಾಂ ಹಾಗೂ ನಿರ್ಮಾಪಕ ಎ.ಆರ್.ರಾಜು ಕಾರ್ಯನಿರ್ವಹಿಸಲಿದ್ದಾರೆ. ಮಂಡಳಿಯಲ್ಲಿ ಒಟ್ಟು 850 ಮಂದಿ ಮತದಾರರಿದ್ದಾರೆ. ಆಯ್ಕೆಯಾದವರು ಒಂದು ವರ್ಷ ಕಾಲಾವಧಿಯ ತನಕ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ವಿತರಕ ಎಚ್.ಡಿ.ಗಂಗರಾಜು ಅವರು ಈ ಹಿಂದೆಯೇ ಫಿಲಂ ಚೇಂಬರ್ ಅಧ್ಯಕ್ಷರಾಗಿದ್ದರು. ಇದು ಅವರಿಗೆ ಎರಡನೇ ಚಾನ್ಸ್. ಅವರು ಅವಿರೋಧವಾಗಿ ಆಯ್ಕೆಯಾಗಿರುವ ಕಾರಣ ಈ ಬಾರಿಯ ಚುನಾವಣೆ ಬಣ್ಣ ಕಳೆದುಕೊಂಡಿದೆ. (ಏಜೆನ್ಸೀಸ್)


Click it and Unblock the Notifications











