ಆಂಧ್ರದ ಉದ್ಯಮಿ ಪುತ್ರಿ ಜೊತೆಗೆ ನಿಖಿಲ್ ವಿವಾಹ: ತಂದೆ ಎಚ್.ಡಿ.ಕುಮಾರಸ್ವಾಮಿ ಏನಂತಾರೆ.?

By Harshitha

Recommended Video

ನಿಖಿಲ್ ಮದುವೆ ಆಗ್ತಿದ್ದಾರಾ..? | Filmibeat Kannada

ಮೂರು ವರ್ಷಗಳ ಹಿಂದೆ, ಅಂದ್ರೆ 2015 ರಲ್ಲಿ ಪ್ರೀತಿಸಿದ ಹುಡುಗಿಯೊಂದಿಗೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಿತ್ರ ನಿರ್ಮಾಪಕ ಕೆ.ಸಿ.ಎನ್.ಮೋಹನ್ ಪುತ್ರಿ ಸ್ವಾತಿಯೊಂದಿಗೆ ನಿಖಿಲ್ ಕುಮಾರ್ ಎಂಗೇಜ್ಮೆಂಟ್ ನಡೆದಿತ್ತು.

ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಿಖಿಲ್-ಸ್ವಾತಿ, ಕುಟುಂಬದ ಸಮ್ಮುಖದಲ್ಲಿ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದರು. ಬಳಿಕ ಸ್ಯಾಂಡಲ್ ವುಡ್ ಗೆ ನಿಖಿಲ್ ಕುಮಾರ್ ಪದಾರ್ಪಣೆ ಮಾಡಿದರು. ಆಮೇಲೆ ಏನಾಯ್ತೋ, ಏನೋ... ನಿಖಿಲ್-ಸ್ವಾತಿ ಮದುವೆ ನಡೆಯಲಿಲ್ಲ. ಇದೀಗ ನಿಖಿಲ್ ಕುಮಾರ್ ಮದುವೆ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ.

ಆಂಧ್ರ ಪ್ರದೇಶದ ಪ್ರಖ್ಯಾತ ಉದ್ಯಮಿಯೊಬ್ಬರ ಪುತ್ರಿಯನ್ನ ನಿಖಿಲ್ ಕುಮಾರ್ ಮದುವೆ ಆಗಲಿದ್ದಾರಂತೆ. ಮದುವೆ ಮಾತುಕತೆ ನಡೆಸುವ ಸಲುವಾಗಿಯೇ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಂಧ್ರ ಪ್ರದೇಶಕ್ಕೆ ಹೋಗಿದ್ದರಂತೆ ಎಂಬ ಅಂತೆ-ಕಂತೆ ಮಾಧ್ಯಮಗಳ ಕಿವಿಗೆ ಬಿದ್ದಿದೆ.

ಇದೇ ಗಾಸಿಪ್ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಆಂಧ್ರ ಪ್ರದೇಶಕ್ಕೆ ಸಿಎಂ ಹೋಗಿದ್ದು ಯಾಕೆ.?

ಆಂಧ್ರ ಪ್ರದೇಶಕ್ಕೆ ಸಿಎಂ ಹೋಗಿದ್ದು ಯಾಕೆ.?

ಪುತ್ರ ನಿಖಿಲ್ ಕುಮಾರ್ ಗೆ ಹೆಣ್ಣು ನೋಡಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಂಧ್ರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬ ಗುಸುಗುಸು ಇಂದು ಬೆಳಗ್ಗೆ ರಾಜಕೀಯ ಪಡಸಾಲೆಯಲ್ಲಿ ಗಿರಗಿಟ್ಲೆ ಹೊಡೆಯಿತು. ಆದ್ರೆ, ಅಲ್ಲಿ, ಕನಕದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ್ದು ಮಾತ್ರ ಇಂದು ಸುದ್ದಿ ಆಯ್ತು.

ನಿಖಿಲ್ ವಿವಾಹದ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ!

ಎಚ್.ಡಿ.ದೇವೇಗೌಡರು ಹೇಳಿದ್ದೇನು.?

ಎಚ್.ಡಿ.ದೇವೇಗೌಡರು ಹೇಳಿದ್ದೇನು.?

ಇಂದು ಬೆಳಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಿಖಿಲ್ ಮದುವೆ ಬಗ್ಗೆ ಎಚ್.ಡಿ.ದೇವೇಗೌಡ ಹೇಳಿದಿಷ್ಟು - ''ಅದು ವೈಯಕ್ತಿಕ ವಿಚಾರ. ಹುಡುಗಿ ಒಪ್ಪಿದರೆ ಮದುವೆ ಮಾಡಿಸೋಣ ಬಿಡಿ''

ಹುಡುಗಿ ಯಾರು.?

ಹುಡುಗಿ ಯಾರು.?

ಆಂಧ್ರಪ್ರದೇಶದ ಪ್ರಖ್ಯಾತ ಉದ್ಯಮಿ ಕೋಟೇಶ್ವರ ರಾವ್ ಪುತ್ರಿ ಸಹಜರನ್ನು ನಿಖಿಲ್ ಕುಮಾರ್ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ, ಇದೆಲ್ಲ ಸುಳ್ಳು ಅಂತ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದೆಲ್ಲ ವದಂತಿ

ಇದೆಲ್ಲ ವದಂತಿ

''ಕೋಟೇಶ್ವರ ರಾವ್ ನನಗೆ ಸ್ನೇಹಿತರು. ನಿಖಿಲ್ ಗೆ ಹೆಣ್ಣು ನೋಡಲು ನಾನು ಆಂಧ್ರ ಪ್ರದೇಶಕ್ಕೆ ಹೋಗಿರಲಿಲ್ಲ. ಅದು ವದಂತಿ ಅಷ್ಟೇ'' ಎಂದಿದ್ದಾರೆ ಎಚ್.ಡಿ.ಕುಮಾರಸ್ವಾಮಿ.

More from Filmibeat

English summary
Karnataka Chief Minister HD Kumaraswamy clarified about his son Nikhil Kumar's marriage with Andra Pradesh Businessman Koteswara Rao Daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X