ದಸರಾ ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

Recommended Video

ಮೈಸೂರು ದಸರೆಯಲ್ಲಿ ಕನ್ನಡ ಸಿನಿಮಾಗಳ ಕಲರವ..! | FILMIBEAT KANNADA

ಮೈಸೂರು ದಸರಾ ಪ್ರಯುಕ್ತ ನಡೆಯುತ್ತಿರುವ ಚಲನಚಿತ್ರೋತ್ಸವಕ್ಕೆ ಇಂದು (ಅಕ್ಟೋಬರ್ 10) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಕಲಾಮಂದಿರದಲ್ಲಿ ದೀಪ ಬೆಳಗುವ ಮೂಲಕ ದಸರಾ ಚಲನಚಿತ್ರೋತ್ಸವನ್ನ ಕುಮಾರಸ್ವಾಮಿ ಉದ್ಘಾಟಿಸಿದರು.

ಈ ವೇಳ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಸಚಿವರಾದ ಜಯಮಾಲಾ, ಜಿಟಿ ದೇವೇಗೌಡ , ಸಾರಾ ಮಹೇಶ್ , ಎನ್.ಮಹೇಶ್, ಶಾಸಕರಾದ ನಾಗೇಂದ್ರ, ಸೇರಿದಂತೆ ಹಲವರು ಭಾಗಿಯಾಗಿದ್ದರು.

ದಸರಾ ಚಲನಚಿತ್ರೋತ್ಸವಕ್ಕೆ ಮೆರಗು ತಂದ ಸ್ಯಾಂಡಲ್ ವುಡ್ ಸ್ಟಾರ್ಸ್

ಚಿತ್ರೋತ್ಸವ ಉದ್ಘಾಟನೆ ಬಳಿಕ ಮಾತನಾಡಿದ ಕುಮಾರಸ್ವಾಮಿ ''ಚಿತ್ರಗಳನ್ನ ನಿರ್ಮಾಣ ಮಾಡಬೇಕಾದರೇ ಸಮಾಜವನ್ನ ತಪ್ಪುದಾರಿಗೆ ತೆಗೆದುಕೊಂಡು ಹೋಗುವಂತಹ ಸಿನಿಮಾ ಮಾಡಬಾರದು' ಎಂದು ನಿರ್ಮಾಪಕ, ನಿರ್ದೇಶಕರಿಗೆ ಕಿವಿಮಾತು ಹೇಳಿದರು.

HD Kumaraswamy inaugurates Dasara Film Festival

'ಜನರು ಯಾವ ದೃಶ್ಯಗಳನ್ನ, ಯಾವ ಚಿತ್ರಗಳನ್ನ ಇಷ್ಟಪಡ್ತಾರೆ ಎಂಬುದನ್ನ ನಾನು ಚಿತ್ರಮಂದಿರದಲ್ಲಿ ಕೂತು ನೋಡಿದ್ದೇನೆ. ಇದು ನಾನು ನನ್ನ ಉದ್ಯಮಕ್ಕೆ ಸಹಾಯವಾಗಿದೆ ಎಂದು ತಾವು ವಿತರಕ ಹಾಗೂ ಪ್ರದರ್ಶಕರಾಗಿದ್ದ ನೆನಪುಗಳನ್ನ ಹಂಚಿಕೊಂಡರು.

'ನಾನು ಮುಖ್ಯಮಂತ್ರಿ ಆಗಿದ್ರೂ ಕೂಡ ಸಿನಿಮಾರಂಗದ ಜೊತೆ ನಂಟು ಮರೆತಿಲ್ಲ. ನನ್ನ ಗೆಳೆಯರು ಈಗಲೂ ನೆನಪಿನಲ್ಲೇ ಇದ್ದಾರೆ. ರಾಜಕೀಯದ ಬಗ್ಗೆ ಯಾವುದೇ ಚಿಂತೆ ಇಲ್ಲದೇ, ಹಳೆ ಚಿತ್ರಗೀತೆಗಳನ್ನ ಕೇಳುತ್ತಾ ನೆಮ್ಮದಿಯಿಂದ ಮಲಗುತ್ತೇನೆ' ಎಂದರು.

HD Kumaraswamy inaugurates Dasara Film Festival

ಚಿತ್ರೋತ್ಸವದಲ್ಲಿ ಸುಮಾರು 24 ಸಿನಿಮಾಗಳು ಭಾಗಿಯಾಗಲಿದ್ದು, ಅಂಜನಿಪುತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು, ಕಾನೂರಾಯಣ, ಗುಳ್ಟು, ಹೆಬ್ಬೆಟ್ ರಾಮಕ್ಕ, ದಯವಿಟ್ಟು ಗಮನಿಸಿ, ಟಗರು, ನಾಗರಹಾವು, ಚಮಕ್, ಒಂದಲ್ಲಾ ಎರಡಲ್ಲಾ, ರಾಜು ಕನ್ನಡ ಮೀಡಿಯಂ, ತಾರಕ್, Rambo 2, ಹಸರಿ ರಿಬ್ಬನ್, ಮಫ್ತಿ, ಲೈಫ್ ಜೊತೆ ಒಂದು ಸೆಲ್ಫಿ, ರಿಸರ್ವೆಶನ್, ಮುಗುಳುನಗೆ, ಸಾವಿತ್ರಬಾಯಿ ಫುಲೆ, ಭರ್ಜರಿ, ಕನಕ, ಗಂಧದ ಗುಡಿ ಹಾಗೂ ಕೊಡವ ಸಿನಿಮಾ ತ್ ಳಂಗ್ ನೀರ್ ಚಿತ್ರಗಳು ಪ್ರದರ್ಶನವಾಗಲಿದೆ.

ದಿನಕ್ಕೆ ನಾಲ್ಕು ಪ್ರದರ್ಶನಗಳು ನಡೆಯಲಿದ್ದು, 12, 13, 14, 15, 16 ಹಾಗೂ 17ನೇ ತಾರೀಖಿನವರೆಗೂ ಪ್ರದರ್ಶನವಾಗಲಿದೆ. ಕನ್ನಡ ಮತ್ತು ಅಂತರಾಷ್ಟ್ರೀಯ ಚಿತ್ರಗಳು ಮೈಸೂರಿನ ಐನಾಕ್ಸ್ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ.

More from Filmibeat

English summary
Chief Minister HD Kumaraswamy inaugurate the Dasara Film Festival. Many artists including Nagathihalli Chandrasekhar were honored during this time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X