ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ಶಿಫ್ಟ್, ಆದ್ರೆ ಅಲ್ಲೂ ಸಮಸ್ಯೆ ಇದೆ.!
Recommended Video

ಅಂಬರೀಶ್ ಅವರು ಮೂಲತಃ ಮಂಡ್ಯ ಜಿಲ್ಲೆಯ ದೊಡ್ಡರಸನ ಕೆರೆಯವರು. ಅಂಬಿಗೆ ಮಂಡ್ಯ ಜನ ಅಂದ್ರೆ ಎಲ್ಲಿಲ್ಲದ ಅಕ್ಕರೆ. ಅದೇ ರೀತಿ ಮಂಡ್ಯ ಜನರಿಗೂ ಅಂಬಿ ಕಂಡ್ರೆ ಬೆಟ್ಟದಷ್ಟು ಪ್ರೀತಿ. ಈ ಪ್ರೀತಿ ಸಾವಿನಲ್ಲೂ ಮುಂದುವರಿದಿದೆ.
ಅಂಬರೀಶ್ ಅವರ ಅಂತ್ಯಕ್ರಿಯೆಯನ್ನ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಆದ್ರೆ, ಮಂಡ್ಯದ ಕೆಲವು ಅಭಿಮಾನಿಗಳು ''ಅಂಬರೀಶ್ ಅವರ ಅಂತ್ಯಕ್ರಿಯೆ ಇಲ್ಲಿಯೇ ಮಾಡಬೇಕು. ಮಂಡ್ಯಗೆ ಅವರ ಪಾರ್ಥಿವ ಶರೀರ ತೆಗೆದುಕೊಂಡು ಬನ್ನಿ'' ಎಂದು ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ತೀವ್ರ ಗೊಂದಲಕ್ಕೆ ಒಳಗಾಗಿದ್ದ ಸರ್ಕಾರ ಮತ್ತು ಕುಟುಂಬ ಗಂಭೀರವಾದ ಚರ್ಚೆ ನಡೆಸಿ, ಒಂದು ತೀರ್ಮಾನಕ್ಕೆ ಬಂದಿದೆ. ಯಾವುದೇ ಸಮಸ್ಯೆಗಳು ಆಗದೇ, ಅನುಕೂಲಕರವಾಗಿದ್ದರೇ ಮಂಡ್ಯಕ್ಕೆ ಪಾರ್ಥಿವ ಶರೀರ ಶಿಫ್ಟ್ ಮಾಡುವುದಾಗಿ ಹೇಳಿದ್ದ ಸಿಎಂ ಈಗ ಅಧಿಕೃತವಾಗಿ ಒಪ್ಪಿಗೆ ನೀಡಿದ್ದಾರೆ. ಆದ್ರೆ, ಇಲ್ಲೊಂದು ಅತಂಕ ಮುಖ್ಯಮಂತ್ರಿಗೆ ಕಾಡುತ್ತಿದೆ. ಅಷ್ಟಕ್ಕೂ, ಮುಖ್ಯಮಂತ್ರಿ ಕಾಡುತ್ತಿರುವ ಆತಂಕವೇನು.? ಮಂಡ್ಯಗೆ ಯಾವಾಗ ಶಿಫ್ಟ್ ಮಾಡುತ್ತಿದ್ದಾರೆ.? ಮುಂದೆ ಓದಿ....

ಅಂತ್ಯ ಸಂಸ್ಕಾರ ಕೇವಲ ಸರ್ಕಾರದ ನಿರ್ಧಾರವಲ್ಲ
'ಅಂಬರೀಶ್ ಅವರ ಅಂತ್ಯ ಸಂಸ್ಕಾರದ ಪ್ರಕ್ರಿಯೆ ಕೇವಲ ಸರ್ಕಾರದ ನಿಲುವು ಮಾತ್ರವಲ್ಲ. ಕುಟುಂಬದವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲವೂ ಒಳ್ಳೆಯ ರೀತಿಯಲ್ಲಿ ಸಂಸ್ಕಾರ ಮಾಡುವ ಬಗ್ಗೆ ಮಾತನಾಡಿದ್ದೇವೆ' ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ಶಿಫ್ಟ್ ಮಾಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ.

ಮಂಡ್ಯಕ್ಕೆ ಪಾರ್ಥಿವ ಶರೀರ ಶಿಫ್ಟ್
'ಮಂಡ್ಯ ಜನತೆಯ ಒತ್ತಾಯದಂತೆ ಅಂಬರೀಶ್ ಅವರ ಪಾರ್ಥಿವ ಶರೀರ ರವಾನಿಸುತ್ತಿದ್ದೇವೆ. ಏರ್ ಲಿಫ್ಟ್ ಮೂಲಕ ಅಂಬಿ ಪಾರ್ಥಿವ ಶರೀರವನ್ನ ತೆಗೆದುಕೊಂಡು ಹೋಗಲು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಸೇನಾ ಕಾಫ್ಟರ್ ಬಳಸುತ್ತಿದ್ದೇವೆ ಎಂದು' ಸಿಎಂ ಹೇಳಿದ್ದಾರೆ.

ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನ
ಅಂಬಿಯ ಪಾರ್ಥಿವ ಶರೀರವನ್ನ ಬೆಂಗಳೂರಿನಿಂದ ನೇರವಾಗಿ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂಗೆ ಕೊಂಡೊಯ್ಯಲಾಗುವುದು. ಸಂಜೆ 4 ಗಂಟೆಗೆ ಬೆಳಿಗ್ಗೆ 6 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಇಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮಂಡ್ಯ ಸ್ಟೇಡಿಯಂ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಹುಟ್ಟೂರಿನವರು ಹೊಸ ಖ್ಯಾತೆ ತೆಗದರೇ
ಅಂಬಿ ಪಾರ್ಥಿವ ಶರೀರ ರವಾನಿಸಲು ತೀರ್ಮಾನಿಸಲಾಗಿದೆ. ಆದ್ರೆ, ಮುಖ್ಯಮಂತ್ರಿಗೆ ಈಗ ಆತಂಕ ಕಾಡುತ್ತಿದೆ. ಅಂಬರೀಶ್ ಹುಟ್ಟೂರಿನವರು ''ಇಲ್ಲೇ ಅವರ ಅಂತ್ಯ ಸಂಸ್ಕಾರ ಮಾಡಲಿ'' ಎಂದು ಒತ್ತಾಯ ಮಾಡಿದ್ರೆ ಏನೂ ಮಾಡೋದು. ಅಲ್ಲಿ ಹೊಸ ಗೊಂದಲವಾಗಬಹುದು ಎಂಬ ಭಯ ಕಾಡಿದೆ. ರಾಜ್ ಕುಮಾರ್ ಕುಮಾರ್ ಅವರ ಸ್ಮಾರಕದ ಪಕ್ಕದಲ್ಲಿ ಒಂದೂವರೆ ಎಕೆರೆ ಸರ್ಕಾರಿ ಜಾಗ ಇದೆ. ಅಲ್ಲಿ ಅಂತ್ಯಕ್ರಿಯೆ ಮಾಡಲು ಸರ್ಕಾರ ನಿರ್ಧರಿಸದೆ ಎಂದು ಸಿಎಂ ಹೇಳಿದರು.

ಬೆಳಿಗ್ಗೆ ಬೆಂಗಳೂರಿಗೆ ವಾಪಸ್
ಬೆಳಿಗ್ಗೆ ಮಂಡ್ಯದಿಂದ ಬೆಂಗಳೂರಿಗೆ ಅಂಬಿ ಪಾರ್ಥಿವ ಶರೀರವನ್ನ ಮತ್ತೆ ವಾಪಸ್ ತರಲಾಗುತ್ತೆ. ನಂತರ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋದವರೆಗೂ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ನಡೆಸುವ ಸ್ಥಳಕ್ಕೆ ಹೋಗಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಚಿತಪಡಿಸಿದ್ದಾರೆ.


Click it and Unblock the Notifications











