twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ-ನಿಖಿಲ್ ಸಿನಿಮಾ ಆಗಬೇಕಿತ್ತು: ಆಗಲಿಲ್ಲ ಎಂಬ ನೋವು ಕಾಡ್ತಿದೆ.!

    |

    Recommended Video

    ಅಂಬಿ-ನಿಖಿಲ್ ಸಿನಿಮಾ ಆಗಬೇಕಿತ್ತು: ಆಗಲಿಲ್ಲ ಎಂಬ ನೋವು ಕಾಡ್ತಿದೆ..! | FILMIBEAT KANNADA

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ನಡುವೆ ಒಳ್ಳೆಯ ಬಾಂಧವ್ಯ, ಸ್ನೇಹವಿತ್ತು. ಅಂಬಿಯ ಅಂತಿಮ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಪರೋಕ್ಷವಾಗಿ ಬೆಂಬಲಿಸಿದ್ದರು ಎಂಬುದು ಗೊತ್ತಿರುವ ವಿಚಾರವೇ.

    ಸ್ನೇಹಿತನನ್ನ ಕಳೆದುಕೊಂಡ ಎಚ್ಡಿಕೆ, ಸತತ ಮೂರು ದಿನಗಳು ಖುದ್ದೇ ತಾವೇ ಮುಂದು ನಿಂತು ಅಂಬಿಯ ಅಂತ್ಯಕ್ರಿಯೆ ಮಾಡಲು ಸರ್ಕಾರದಿಂದ ನೆರವಾದರು. ಇದಕ್ಕಾಗಿ ನಾಡಿನ ಜನ ಹಾಗೂ ಚಿತ್ರರಂಗ ಸಮ್ಮಿಶ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಅಂಬಿ ಬಗೆಹರಿಸದೇ ಬಿಟ್ಟು ಹೋದ 'ಆ ಎರಡು' ಸಮಸ್ಯೆಗಳ ಭವಿಷ್ಯವೇನು.? ಅಂಬಿ ಬಗೆಹರಿಸದೇ ಬಿಟ್ಟು ಹೋದ 'ಆ ಎರಡು' ಸಮಸ್ಯೆಗಳ ಭವಿಷ್ಯವೇನು.?

    ಈ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಪ್ರೈಸ್ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ. ಅಂಬರೀಶ್ ಮತ್ತು ತಮ್ಮ ಮಗ ನಿಖಿಲ್ ಕುಮಾರ್ ಅವರ ಜೊತೆ ಒಟ್ಟಿಗೆ ಒಂದು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದರಂತೆ. ಆದ್ರೆ, ಆ ಆಸೆ ಬರಿ ಆಸೆಯಾಗಿಯೇ ಉಳಿದುಕೊಂಡಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಯಾವ ಚಿತ್ರವನ್ನ ಮಾಡಲು ಯೋಚಿಸಿದ್ದರು.? ಮುಂದೆ ಓದಿ.....

    ಅಂಬರೀಶ್ ಮತ್ತು ನಿಖಿಲ್ ಕಾಂಬಿನೇಷನ್.!

    ಅಂಬರೀಶ್ ಮತ್ತು ನಿಖಿಲ್ ಕಾಂಬಿನೇಷನ್.!

    ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೊತೆ ಒಂದು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದರಂತೆ ಕುಮಾರಸ್ವಾಮಿ. ತಮ್ಮ ಮಗ ನಿಖಿಲ್ ಹಾಗೂ ಅಂಬಿ ಜೋಡಿಯಲ್ಲಿ ಆ ಸಿನಿಮಾ ಮಾಡಲು ತಯಾರಾಗಿದ್ದರು. ಅಂಬರೀಶ್ ತಂದೆಯ ಪಾತ್ರ ಹಾಗೂ ನಿಖಿಲ್ ಮಗನ ಪಾತ್ರದಲ್ಲಿ ತೋರಿಸಲು ಎಚ್ಡಿಕೆ ಚಿಂತಿಸಿದ್ದರಂತೆ. ಆದ್ರೆ, ಇದು ಬರಿ ಆಸೆಯಾಗಿಯೇ ಉಳಿದುಕೊಂಡಿತು.

    ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?

    ಪ್ರಭಾಸ್ ಚಿತ್ರದ ರೀಮೇಕ್ ಹಕ್ಕು ಖರೀದಿಸಿದ್ದರು

    ಪ್ರಭಾಸ್ ಚಿತ್ರದ ರೀಮೇಕ್ ಹಕ್ಕು ಖರೀದಿಸಿದ್ದರು

    'ಬಾಹುಬಲಿ' ಚಿತ್ರದ ಮೂಲಕ ಗ್ಲೋಬರ್ ಸ್ಟಾರ್ ಆಗಿರುವ ಪ್ರಭಾಸ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ರೆಬೆಲ್' ಚಿತ್ರದ ರೀಮೇಕ್ ಹಕ್ಕು ಖರೀದಿಸಿದ್ದರು. ಅಂಬರೀಶ್ ಮತ್ತು ನಿಖಿಲ್ ಕುಮಾರ್ ಕಾಂಬಿನೇಷನ್ ನಲ್ಲಿ ಆ ಸಿನಿಮಾ ಮಾಡಬೇಕು ಎಂಬ ಆಸೆ ಹೊಂದಿದ್ದರು ಕುಮಾರಸ್ವಾಮಿ.

    ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?

    ಪ್ರಭಾಸ್ ಮತ್ತು ಕೃಷ್ಣಂರಾಜು ಸಿನಿಮಾ

    ಪ್ರಭಾಸ್ ಮತ್ತು ಕೃಷ್ಣಂರಾಜು ಸಿನಿಮಾ

    2012ರಲ್ಲಿ ತೆರೆಕಂಡಿದ್ದ ತೆಲುಗು ಹಿಟ್ ಸಿನಿಮಾ 'ರೆಬೆಲ್'. ಈ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿದ್ದು, ಅವರ ತಂದೆಯ ಪಾತ್ರದಲ್ಲಿ ಹಿರಿಯ ನಟ ಕೃಷ್ಣಂರಾಜು ಅಭಿನಯಿಸಿದ್ದರು. ಪ್ರಭಾಸ್ ಪಾತ್ರದಲ್ಲಿ ನಿಖಿಲ್ ಹಾಗೂ ಕೃಷ್ಣಂರಾಜು ಪಾತ್ರದಲ್ಲಿ ಅಂಬರೀಶ್ ಅವರನ್ನ ಹಾಕ್ಕೊಂಡು ಸಿನಿಮಾ ಮಾಡಬೇಕೆಂದುಕೊಂಡಿದ್ದರಂತೆ ಕುಮಾರಸ್ವಾಮಿ.

    ಅಂಬಿಗೆ ದರ್ಶನ್-ಸುದೀಪ್ ಇಬ್ಬರು ಒಟ್ಟಿಗೆ ಹೆಗಲು ಕೊಡಬೇಕಿತ್ತಂತೆ.!ಅಂಬಿಗೆ ದರ್ಶನ್-ಸುದೀಪ್ ಇಬ್ಬರು ಒಟ್ಟಿಗೆ ಹೆಗಲು ಕೊಡಬೇಕಿತ್ತಂತೆ.!

    ರಾಜಕೀಯ ಕಾರಣಕ್ಕಾಗಿ ಆಗಲಿಲ್ಲ

    ರಾಜಕೀಯ ಕಾರಣಕ್ಕಾಗಿ ಆಗಲಿಲ್ಲ

    ರೀಮೇಕ್ ಹಕ್ಕು ಕುಮಾರಸ್ವಾಮಿ ಬಳಿಯೇ ಇತ್ತು. ಆದ್ರೆ, ರಾಜಕೀಯ ಕಾರಣಗಳಿಂದ, ಆ ಒತ್ತಡದಲ್ಲಿ ಸಿನಿಮಾ ಮಾಡೋದಕ್ಕೆ ಆಗಿಲ್ಲ. ಈಗಲೂ ಆ ನೋವು ಕಾಡುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೊಂಡರು.

    ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?

    ಪ್ರಧಾನಮಂತ್ರಿ ಮನೆಯಲ್ಲಿ ಒಟ್ಟಿಗೆ ಊಟ ಮಾಡಿದ್ರು

    ಪ್ರಧಾನಮಂತ್ರಿ ಮನೆಯಲ್ಲಿ ಒಟ್ಟಿಗೆ ಊಟ ಮಾಡಿದ್ರು

    ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಮಾತನಾಡಿದ ಅವರು, ವಿಷ್ಣುವರ್ಧನ್, ಅಂಬರೀಶ್ ಮತ್ತು ನಾನು ಮೂವರು ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ, ಒಂದೇ ಫ್ಲೈಟ್ ನಲ್ಲಿ ಹೋಗಿ, ಅವರ ಮನೆಯಲ್ಲಿ ಊಟ ಮಾಡಿ, ವಾಪಸ್ ಬಂದಿದ್ವಿ. ಅವರ ಸ್ಮಾರಕನೂ ಆಗುತ್ತೆ. ವಿಚಾರ ಮಾಡಿ ನಿರ್ಧಾರ ಮಾಡ್ತೀವಿ'' ಎಂದು ನೆನಪು ಮಾಡಿಕೊಂಡರು.

    ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ

    English summary
    Hd kumaraswamy was planned to do movie with rebel star ambareesh and nikhil kumar. but that project did not start.
    Friday, November 30, 2018, 18:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X