ನನ್ನ ಮಾಜಿ ಗಂಡನಿಗೆ ಹೊಸ ಹೆಂಡತಿ ಇದ್ದಾರೆ, ಮಗು ಕೂಡ ಇದೆ - ಗಿಚ್ಚಿ ಗಿಲಿ ಗಿಲಿ ಜಾಹ್ನವಿ

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ.ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ.

ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ.ಆದರೆ.. ದಾಂಪತ್ಯ ಅಂತ್ಯವಾದ ನಂತರ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಉದಾಹರಣೆಗೆ ಜಾಹ್ನವಿ.

he-has-moved-on-anchor-and-actress-jhanvi-reveals-on-ex-husbands-second-marriage-finding-peace

ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಅಧಿಪತ್ರ ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.

ಇಂಥಾ ಜಾಹ್ನವಿ ತಮ್ಮ ವ್ಯೆಯಕ್ತಿಕ ಬದುಕಿನಲ್ಲಿ ಹಲವು ನೋವು ಉಂಡಿದ್ದಾರೆ. ಅನೇಕ ಸಲ ತಮ್ಮ ಜೀವನದ ಮುಳ್ಳಿನ ಹಾದಿಯನ್ನು ನೆನೆದು ಕಣ್ಣೀರನ್ನು ಹಾಕಿದ್ದಾರೆ. ಆದರೂ ಕೂಡ ಇವರ ವ್ಯೆಯಕ್ತಿಕ ಬದುಕಿನ ಕುರಿತು ಇನ್ನು ಹಲವರಲ್ಲಿ ಕುತೂಹಲ ಇದ್ದೇ ಇದೆ. ಹೀಗಾಗಿಯೇ ಈಗಲೂ ಕೂಡ ಜಾಹ್ನವಿಗೆ ಅವರ ಮದುವೆ ಮತ್ತು ವಿಚ್ಛೇದನದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ ಜಾಹ್ನವಿ ಅವರಿಗೆ ಮತ್ತೊಮ್ಮೆ ವಿಚ್ಛೇದನದ ಕುರಿತು ಪ್ರಶ್ನೆಯನ್ನು ಮಾಡಲಾಗಿದೆ. ಈ ಪ್ರಶ್ನೆಗಳಿಗೆ ಬೇಸರ ಮಾಡಿಕೊಳ್ಳದೇ ಜಾಹ್ನವಿ ಉತ್ತರವನ್ನು ಕೂಡ ನೀಡಿದ್ದಾರೆ. ಈ ಕುರಿತು ''ವಿದ್ಯಾ ಮಲ್ನಾಡ್‌ ವ್ಲಾಗ್ಸ್‌'' ಯೂಟ್ಯೂಬ್ ಚಾನೆಲ್‌ ಜೊತೆ ಮಾತನಾಡಿರುವ ಜಾಹ್ನವಿ ಮೊದಲಿಗೆ ತಮ್ಮ ಎರಡನೇ ಮದುವೆಯ ಕುರಿತು ಮಾತನಾಡಿದ್ದಾರೆ.

ಮೊದಲ ಮದುವೆಯೇ ನನಗೆ ಒಳ್ಳೆಯ ಅನುಭವ ನೀಡಿದೆ. ಹೀಗಾಗಿ ಮದುವೆ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿರುವ ಜಾಹ್ನವಿ, ಸದ್ಯ ನಾನು ಹೀಗೆಯೇ ಖುಷಿಯಾಗಿದ್ದೀನಿ, ನೆಮ್ಮದಿಯಿಂದ ಇದ್ದೀನಿ, ಶಾಂತವಾಗಿ ಇದ್ದೀನಿ, ನನಗೆ ಯಾವತ್ತು ಕೂಡ ಮದುವೆಯಾಗಬೇಕು ಅಂತ ಅನ್ಸಿಲ್ಲ ಎಂದು ಹೇಳಿದ್ದಾರೆ. ನನ್ನ ಮಗನ ಬದುಕು ಭವಿಷ್ಯ ರೂಪಿಸಬೇಕು ಅದಷ್ಟೇ ನನ್ನ ಸದ್ಯದ ಯೋಚನೆ ಯೋಜನೆ ಎಂದು ಹೇಳಿದ್ದಾರೆ.

he-has-moved-on-anchor-and-actress-jhanvi-reveals-on-ex-husbands-second-marriage-finding-peace

ನನ್ನ ಮಗ ಈಗ 8ನೇ ಕ್ಲಾಸ್‌ನಲ್ಲಿ ಓದ್ತಿದ್ದಾನೆ, ಮತ್ತೊಬ್ಬ ವ್ಯಕ್ತಿಯನ್ನು ನಮ್ಮ ಜೀವನಕ್ಕೆ ಸೇರಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ ಎಂದು ಹೇಳಿರುವ ಜಾಹ್ನವಿ ನಾನು ಸಿನಿಮಾಗಾಗಿ ಡಿವೋರ್ಸ್ ತೆಗೆದುಕೊಂಡಿಲ್ಲ ಎಂದು ಕೂಡ ಸ್ಪಷ್ಟ ಪಡಿಸಿದ್ದಾರೆ. ಮದುವೆಯಾದ ನಂತರ ನನ್ನ ಬದುಕಿನಲ್ಲಿ ಏನೆಲ್ಲಾ ಆಯ್ತು ಎನ್ನುವ ಕೆಲ ವಿಚಾರ ಈಗಾಗಲೇ ನಾನು ಹೇಳಿದ್ದೀನಿ, ಆದರೆ.. ಸಂಪೂರ್ಣ ವಿಚಾರ ನನ್ನ ಸುತ್ತ ಮುತ್ತ ಇದ್ದವರಿಗೆ, ನನ್ನನ್ನು ಬಲ್ಲವರಿಗೆ ಮಾತ್ರ ಗೊತ್ತು ಎಂದು ಹೇಳಿರುವ ಜಾಹ್ನವಿ ನನಗೆ ತುಂಬಾ ನೋವಾಗಿದೆ, ಅತ್ತಿರುವ ದಿನಗಳಿವೆ, ಆದರೆ ಈ ಕ್ಷಣದಲ್ಲಿ ನಾನು ಎಲ್ಲಿಯೇ ಇದ್ದರೂ ಚೆನ್ನಾಗಿರಲಿ ಅಂತಷ್ಟೇ ಬಯಸುತ್ತೇನೆ ಎಂದು ಹೇಳಿದ್ಧಾರೆ.

ನನ್ನ ಮದುವೆ-ವಿಚ್ಛೇದನದ ಕುರಿತು ಮಾತನಾಡುವುರು ಮಾತನಾಡುತ್ತಲೇ ಇರುತ್ತಾರೆ, ಅವರ ಬಾಯಿ ಮುಚ್ಚಿಸೋಕೆ ಆಗಲ್ಲ ಎಂದು ಹೇಳಿರುವ ಜಾಹ್ನವಿ ನಾವು ಯಾಕೆ ಡಿವೋರ್ಸ್ ತಗೊಂಡೆ ಎನ್ನುವುದು ಒಂದು ಟೈಮ್‌ನಲ್ಲಿ ಗೊತ್ತಾಗುತ್ತೆ ಎಂದು ಹೇಳಿರುವ ಜಾಹ್ನವಿ, ಅವರು ಅವರ ಹೆಂಡತಿ ಮತ್ತು ಮಗು ಜೊತೆ ಚೆನ್ನಾಗಿರಲಿ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಜಾಹ್ನವಿ, ನನಗೆ ಈಗ ಮಗ ಇದ್ದಾನೆ.. ಅವರಿಗೆ ಫ್ಯಾಮಿಲಿ ಬೇಕು ಅನಿಸಿದಾಗ, ಯಾರು ಇಲ್ಲ ಅನಿಸಿದಾಗ, ಅವರು ಬೇರೆಯವರ ಜೊತೆ ಇರೋದರಲ್ಲಿ ತಪ್ಪಿಲ್ಲ ಎಂದು ಹೇಳಿರುವ ಜಾಹ್ನವಿ ನಾನು ಸಿಂಗಲ್ ಆಗಿ ಖುಷಿಯಾಗಿದ್ದೀನಿ, ಅವರ ಅವರ ಖುಷಿ ಅವರಿಗೆ ಮುಖ್ಯ ಆಗಿರುತ್ತೆ ಎಂದು ಹೇಳಿದ್ದಾರೆ. ಅವರ ಅವರ ಲೈಫ್ ಅವರ ಅವರು ನೋಡಿಕೊಳ್ಳಲೇಬೇಕಲ್ವಾ ಎಂದು ಹೇಳಿದ್ದಾರೆ. ಸದ್ಯ ನಾನು ಆರಾಮಾಗಿದ್ದೇನೆ.. ನೆಮ್ಮದಿಯಿಂದ ಇದ್ದೇನೆ.. ಖುಷಿಯಾಗಿದ್ದೇನೆ ಎನ್ನುವ ಮಾತುಗಳನ್ನು ಕೂಡ ಈ ಸಂದರ್ಶನದಲ್ಲಿ ಜಾಹ್ನವಿ ಪುನರುಚ್ಚಿಸಿದ್ದಾರೆ.

More from Filmibeat

English summary
In a heartfelt interview, Actress Jhanvi opens up about her ex-husband moving on, his second marriage, and how she found happiness & peace after divorce.
Read more about: jhanvi divorce filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X