8 ಲಕ್ಷ ರೂಪಾಯಿ ಸಾಲ, ಗಿಚ್ಚಿ ಗಿಲಿಗಿಲಿ ಜಾಹ್ನವಿಗೆ ಚಿತ್ರ ಹಿಂಸೆ ನೀಡಿದ ಸೈಕೋ..!

ಪ್ರತಿಯೊಂದು ಮೋಸ ಶುರುವಾಗುವುದೇ ನಂಬಿಕೆಯಿಂದ. ನಂಬಿಕೆ ಎನ್ನುವುದು ಇಲ್ಲದಿದ್ದರೆ ಮೋಸ ಎನ್ನುವುದು ಹುಟ್ಟುವುದೇ ಇಲ್ಲ. ಇನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾ ಹಾವಳಿ. ನಂಬಿಕೆಯ ಹೆಸರಿನಲ್ಲಿ ಅದೆಷ್ಟು ಜನರ ಮಾನ ಮತ್ತು ಪ್ರಾಣವನ್ನು ಈ ಸಾಮಾಜಿಕ ಜಾಲತಾಣ, ತಂತ್ರಜ್ಞಾನ ನುಂಗಿಕೊಂಡಿವೆಯೋ ? ಜನ್ಮೇಪಿ ಒಬ್ಬರನ್ನೊಬ್ಬರ ಮುಖವನ್ನು ನೋಡಿರೋದೇ ಇಲ್ಲ. ಜೊತೆಯಲ್ಲಿ ಕೂಡ ಆಡಿ ಬೆಳೆದವರೂ ಆಗಿರುವುದಿಲ್ಲ.

ಇಂತಹ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಂಡು, ಆತ್ಮೀಯತೆ ಬೆಳೆಸಿಕೊಂಡು ಖೆಡ್ಡಾ ತೋಡುತ್ತಾರೆ. ಅವರ ಅಸಲಿಯತ್ತು ತಿಳಿಯುವಷ್ಟರಲ್ಲಿ ಅರ್ಧ ಜೀವನ ಕಳೆದು ಹೋಗಿರುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಜಾಹ್ನವಿಗೆ ಆದ ಅನುಭವ.

He Was a Psycho Anchor-Turned-Actress Jhanvi Shares Shocking Details of Abuse

ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಅಧಿಪತ್ರ ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.

ಇಂಥಾ ಜಾಹ್ನವಿ ತಮ್ಮ ವ್ಯೆಯಕ್ತಿಕ ಬದುಕಿನಲ್ಲಿ ಹಲವು ನೋವು ಉಂಡಿದ್ದಾರೆ. ಮೋಸ ಹೋಗಿದ್ದಾರೆ. ಈ ಕುರಿತು ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನವಿ ಹೇಗೆ ಅಣ್ಣ ಅಣ್ಣ ಎಂದು ಹೇಳುತ್ತಲೇ ಒಬ್ಬ ವ್ಯಕ್ತಿ ಮೋಸ ಮಾಡಿದ, ಹೇಗೆಲ್ಲ ಕಾಡಿದ, ಹೇಗೆಲ್ಲ ತನ್ನ ಬದುಕಿನಲ್ಲಿ ಆಟವಾಡಲು ಬಂದ ಎನ್ನುವುದನ್ನು ಹೇಳಿದ್ದಾರೆ.

ಆ ವ್ಯಕ್ತಿಯನ್ನು ನಾನು ಬ್ಲೇಮ್ ಮಾಡಲ್ಲ, ನನ್ನ ಹಣೆಬರಹ, ಪರಿಸ್ಥಿತಿ ಸರಿ ಇರಲಿಲ್ಲ ಅಷ್ಟೇ ಎಂದಿರುವ ಜಾಹ್ನವಿ, ನಾನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ರಾಷ್ಟ್ರೀಕತ ಬ್ಯಾಂಕ್‌ಗಳಲ್ಲಿ ನನಗೆ ಲೋನ್ ಸಿಗಲಿಲ್ಲ, ಹೀಗಾಗಿ ನಾನು ಖಾಸಗಿ ಬ್ಯಾಂಕ್‌ನಲ್ಲಿ ಲೋನ್ ಪಡೆದಿದ್ದೆ, ಮನೆ ತೆಗೆದುಕೊಂಡಿದ್ದೇ ಎಂದು ಹೇಳಿದ್ದಾರೆ.

ನನ್ನ ಲೋನ್‌ನ್ನು ರಾಷ್ಟ್ರೀಕತ ಬ್ಯಾಂಕ್‌ಗೆ ಟ್ರಾನ್ಸ್‌ಫರ್ ಮಾಡಿಸಬೇಕಿತ್ತು, ಹೀಗಾಗಿ ಯಾರಾದರೂ ಒಬ್ಬ ವ್ಯಕ್ತಿ ಬ್ಯಾಂಕ್ ಎಂದರೆ ಸಾಕು ನಾನೇ ಹೋಗಿ ಪರಿಚಯ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿರುವ ಜಾಹ್ನವಿ, ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ನನಗೆ ಪರಿಚಯವಾಗಿದ್ದರು. ಕನ್ನಡ ಕೂಡ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ. ನಾನು ಆಗ ತುಂಬಾ ಮುಗ್ದೆ, ಎಲ್ಲರನ್ನೂ ಬೇಗ ನಂಬಿ ಬಿಡುತ್ತಿದ್ದೆ ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ದೂರಿದ್ದಾರೆ.

ಇನ್ನು ಆ ವ್ಯಕ್ತಿ ಬ್ಯಾಂಕ್‌ನವನು ಎಂದು ಹೇಳಿಕೊಂಡಿದ್ದ. ನನ್ನ ತಂಗಿಯೆಂಧು ಕರೆದ, ನಿಮ್ಮ ಅಣ್ಣನಾಗಿರುತ್ತೇನೆ ಎಂದು ಹೇಳಿದ್ದ, ಹೀಗಾಗಿ ನಾನು ಮೆಸೇಜ್ ಮಾಡಲು ಶುರು ಮಾಡಿದ್ದೇ ಎಂದಿರುವ ಜಾಹ್ನವಿ ಮುಂದೆ ಲೋನ್ ಜಾಸ್ತಿಯಾಯ್ತು ಹೀಗಾಗಿ ನಾನು ಆ ವ್ಯಕ್ತಿಯ ಹತ್ತಿರ ಸಾಲ ಮಾಡಿದ್ದೆ ಎಂದು ಹೇಳಿದ್ದಾರೆ. ಆದರೆ ಅದಕ್ಕೂ ಮೊದಲೇ ಆ ವ್ಯಕ್ತಿ ಬೇರೆ ಬೇರೆ ನಂಬರ್‌ಗಳಿಂದ ನನಗೆ ಕಾಲ್ ಮಾಡುತ್ತಿದ್ದ ನಾನು ಪೊಲೀಸ್‌ನವರ ಬಳಿ ವಿಚಾರಿಸಿದಾಗ ಕರೆ ಮಾಡುತ್ತಿರುವುದು ಈ ವ್ಯಕ್ತಿನೇ ಎನ್ನುವುದು ನನಗೆ ಗೊತ್ತಾಯ್ತ ಎಂದಿರುವ ಜಾಹ್ನವಿ ಆಗಲೇ ಈ ವ್ಯಕ್ತಿ ನಾರ್ಮಲ್ ಅಲ್ಲ ಎನ್ನುವುದು ಗೊತ್ತಾಯ್ತು ಎಂದು ಹೇಳಿದ್ದಾರೆ.

ದಿನಗಳು ಉರುಳಿದಂತೆ ನನ್ನ ತಂಗಿ ನನಗೆ ಮಾತ್ರ ಎನ್ನುವಂತೆ ಆತ ವರ್ತಿಸಲು ಶುರು ಮಾಡಿದ್ದ ಎಂದು ಹೇಳಿರುವ ಜಾಹ್ನವಿ, ನನ್ನ ನ್ಯೂಸ್ ನ ಬೇರೆ ಯಾರಾದರೂ ಸ್ಟೇಟಸ್ ಹಾಕಿದ್ದರೆ ಕೋಪ ಮಾಡಿಕೊಳ್ಳಲು ಶುರು ಮಾಡಿದ್ದ ಎಂದು ಹೇಳಿದ್ದಾರೆ. ಹೀಗಾಗಿಯೇ ಅಂತರ ಕಾಪಾಡಿಕೊಳ್ಳುವುದು ಒಳ್ಳೆಯದು ಎಂದು ನಾನು ದೂರ ಇಡಲು ಮುಂದಾದೆ ಆದರೆ ಆ ವ್ಯಕ್ತಿಯ ಬಳಿ ನಾನು 8 ಲಕ್ಷ ಸಾಲ ತೆಗೆದುಕೊಂಡಿದ್ದೆ, ಹೀಗಾಗಿ ನನಗೆ ಮೋಸ ಮಾಡುತ್ತಿದ್ದಾರೆ ಅಂತ ಆ ವ್ಯಕ್ತಿ ಅಂದುಕೊಂಡಿರಬಹುದು ಎಂದು ಹೇಳಿರುವ ಜಾಹ್ನವಿ ಇದೇ ಮನಸ್ಥಿತಿಯಲ್ಲಿ ಆತ ಎಲ್ಲ ಚಾನೆಲ್‌ಗೆ ನನ್ನ ಬಗ್ಗೆ ನಾನೇ ಬರೆದಂತೆ ಕೆಟ್ಟ ಕೆಟ್ಟದಾಗಿ ಬರೆದು ನನ್ನ ಸಹಿಯನ್ನು ಕೂಡ ಹಾಕಿ ಕಳುಹಿಸಲು ಶುರು ಮಾಡಿದ್ದ ಆ ಪತ್ರದಲ್ಲಿ ನನ್ನ ಮನೆ ಹರಾಜಿಗೆ ಬಂದಿದೆ, ನಾನು ಎಲ್ಲದಕ್ಕೂ ಸಿದ್ದಳಿದ್ದೇನೆ ಎಂದೆಲ್ಲ ಬರೆದಿದ್ದ ಎಂದು ಹೇಳಿದ್ದಾರೆ.

ಕೊನೆಗೆ ಬೇಸತ್ತು ನಾನು ಹೈದರಾಬಾದ್‌ಗೆ ಹೋಗಿ ಪೊಲೀಸ್‌ ಕಂಪ್ಲೇಂಟ್ ಕೊಟ್ಟಿದ್ದೆ. ನಂತರ ಅವನನ್ನು ಜೈಲಿಗೆ ಹಾಕಿದ್ದರು. ಆ ನಂತರ ನಾನು ಅವನ ಸಾಲವನ್ನು ಕೂಡ ತೀರಿಸಿದೆ ಎಂದಿರುವ ಜಾಹ್ನವಿ ನನ್ನ ಬದುಕಿನಲ್ಲಾದ ಈ ಘಟನೆಯ ನಂತರ ನಾನು ವ್ಯಕ್ತಿಗಳ ಮೇಲೆ ನಂಬಿಕೆಯನ್ನು ಕೂಡ ಕಳೆದುಕೊಂಡೆ ಎಂದಿದ್ದಾರೆ. ಈಗ ಯಾರನ್ನು ತುಂಬಾ ಬೇಗ ನಂಬುವುದಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Jhanvi, the Gichi Giligili star, shares a chilling story of abuse — from someone she met online through Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X