ನಟ 'ಯೋಗಿ' ಹುಟ್ಟುಹಬ್ಬಕ್ಕೆ 'ಹೆಡ್‌ ಬುಷ್' ಸರ್ಪ್ರೈಸ್!

ಚಿಕ್ಕ ವಯಸ್ಸಿಗೆ ಸಿನಿಮಾರಂಗಕ್ಕೆ ಬಂದು, ಸಣ್ಣ ಪಾತ್ರದ ಮೂಲಕ ಅಭಿನಯ ಶುರು ಮಾಡಿ ನಾಯಕನಟನಾಗಿ ಬೆಳೆದು ನಿಂತಿರುವ ಕೀರ್ತಿ ನಟ ಯೋಗಿಗೆ ಸಲ್ಲುತ್ತದೆ. ಯೋಗಿ, ಲೂಸ್ ಮಾದ ಯೋಗಿ ಎಂದೇ ಖ್ಯಾತರಾಗಿದ್ದಾರೆ. ಇಂದು (ಜುಲೈ 6) ನಟ ಯೋಗಿಗೆ ಹುಟ್ಟುಹಬ್ಬದ ಸಂಭ್ರಮ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ನಟ ಯೋಗಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿ ಬಳಗ ಸೇರಿದಂತೆ. ಸಿನಿಮಾರಂಗದ ಸ್ನೇಹಿತರಿಂದಲೂ ಕೂಡ ಯೋಗಿ ಹುಟ್ಟು ಹಬ್ಬಕ್ಕೆ ಶುಭಾಷಯಗಳು ಹರಿದು ಬರ್ತಿದೆ.

ನಟ ಯೋಗಿಯ ಮುಂಬರುವ ಸಿನಿಮಾಗಳು, ಮತ್ತು ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆದ ಪೋಸ್ಟರ್ ಮತ್ತು ರಿವೀಲ್ ಆದ ಪಾತ್ರಗಳು ಯಾವುವು ಎನ್ನುವುದರ ಜೊತೆಗೆ ಹೆಡ್-ಬುಷ್ ಚಿತ್ರದಲ್ಲಿ ಯೋಗಿಯ ಪಾತ್ರದ ಬಗ್ಗೆ ಮುಂದೆ ಓದಿ...

'ಹೆಡ್‌ ಬುಷ್' ಚಿತ್ರದಲ್ಲಿ ಗಂಗ ಆದ ಯೋಗಿ!

'ಹೆಡ್‌ ಬುಷ್' ಚಿತ್ರದಲ್ಲಿ ಗಂಗ ಆದ ಯೋಗಿ!

ಯೋಗಿ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂಬರುವ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಹೆಡ್ ಬುಷ್ ಚಿತ್ರದಲ್ಲಿ ನಟ ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರು ಗಂಗ ಎಂಬುದು ಈಗ ರಿವೀಲ್ ಆಗಿದ್ದು, ಯೋಗಿಯ ಲುಕ್ ಕೂಡ ಪೋಸ್ಟರ್‌ನಲ್ಲಿ ರಿವೀಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಲೂಸ್ ಮಾದ ಯೋಗಿ ಸಿಕ್ಕಾ ಪಟ್ಟೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

'ದುನಿಯಾ' ಮೂಲಕ ಸಿನಿ ಜರ್ನಿ ಶುರು!

'ದುನಿಯಾ' ಮೂಲಕ ಸಿನಿ ಜರ್ನಿ ಶುರು!

ದುನಿಯಾ ಸಿನಿಮಾದಲ್ಲಿ ವಿಲನ್ ಆಗಿ ಮೊದಲ ಬಾರಿಗೆ ಅಭಿನಯ ಶುರು ಮಾಡಿದರು ಯೋಗಿ. ಲೂಸ್ ಮಾದ ಪಾತ್ರದಲ್ಲಿ ಜನರ ಮುಂದೆ ಬಂದಿದ್ದ ಯೋಗಿ ಲೂಸ್​ ಮಾದ ಎಂದೇ ಫೇಮಸ್​ ಆದರು. ಆಗ ಸ್ಯಾಂಡಲ್​ವುಡ್​ಗೆ ಹೊಸ ವಿಲನ್ ಎಂಟ್ರಿ ಎಂದು ಹೇಳಲಾಗಿತ್ತು. ಆದರೆ ವಿಲನ್ ಅಲ್ಲ, ಹೀರೋ ಆಗಿ ಮೆರೆದರು ನಟ ಯೋಗಿ. 16ನೇ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಈ ನಟ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

'ನಂದ ಲವ್ಸ್ ನಂದಿತಾ' ಮೂಲಕ ನಾಯಕ!

'ನಂದ ಲವ್ಸ್ ನಂದಿತಾ' ಮೂಲಕ ನಾಯಕ!

'ನಂದ ಲವ್ಸ್ ನಂದಿತಾ' ಸಿನಿಮಾದಲ್ಲಿ ಮೊದಲ ಬಾರಿ ನಾಯಕರಾದಾಗ ಯೋಗಿಗೆ ಕೇವಲ 17 ವರ್ಷ. ಈ ಸಿನಿಮಾ ಸೂಪರ್ ಹಿಟ್​ ಆಯ್ತು. ನಂತರ ಅಂಬಾರಿ ಸೇರಿದಂತೆ ಅನೇಕ ಹಿಟ್​ ಸಿನಿಮಾಗಳನ್ನು ಯೋಗಿ ನೀಡಿದ್ದಾರೆ.

ನಟ ಲೂಸ್ ಮಾದ ಯೋಗಿ, ಈ ಹೆಸರನ್ನು ಕೇಳಿದ್ರೆ ನೆನಪಾಗೋದು ಜಿಂಕೆ ಮರಿನಾ ಹಾಡು. ಈ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಇದೇ ಕಾಡು ಕೇಳಿ ಬರುತ್ತಿತ್ತು. ಈಗಲೂ ಜನರ ನೆನಪಿನಲ್ಲಿ ಈ ಹಾಡಿದೆ.

ಏಳು ಬೀಳು ಕಂಡ ಯೋಗಿ!

ಏಳು ಬೀಳು ಕಂಡ ಯೋಗಿ!

ಯೋಗಿ ತಮ್ಮ ಸಿನಿಮಾ ಜರ್ನಿಯಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಿದ್ಲಿಂಗು ಸಿನಿಮಾ ಅವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿತು. ಆದರೆ ಅವರ ನಿರ್ಮಾಣದ ಯಕ್ಷ ಸಿನಿಮಾ ದೊಡ್ಡ ಹೊಡೆತ ನೀಡಿತು.

ಈಗ ಮತ್ತೆ ಯೋಗಿ ಪುಟಿದೆದ್ದಿದ್ದು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಲಂಕೆ, ಕಿರಿಕ್ ಶಂಕರ್ ಸೇರಿದಂತೆ ವಿವಿಧ ಸಿನಿಮಾಗಳು ಬಿಡುಗಡೆಯಾಗಿ ಹೆಸರು ಮಾಡಿದೆ. ವಿನೋದ್​ ಪ್ರಭಾಕರ್ ಜೊತೆ ಲಂಕಾಸುರ ಸೇರಿದಂತೆ ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

More from Filmibeat

English summary
Dali Dhananjay starrer Head Bush movie team release poster on the occasion of Loose Mada Yogi Birthday, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X