For Quick Alerts
  ALLOW NOTIFICATIONS  
  For Daily Alerts

  'ನಾನು ನಿನ್ನ ಸಹವಾಸ ಮಾಡಿದ್ದಕ್ಕೆ ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲು': ಡಾಲಿಗೆ ಯೋಗಿ ಅವಾಜ್!

  |

  ಸಿನಿಮಾ ಅಂದ್ಮೇಲೆ ಅದೆಷ್ಟೋ ನಟ-ನಟಿಯರು ಕ್ಲೋಸ್ ಆಗಿರೋದು ಕಾಮನ್. ಫ್ರೆಂಡ್‌ಶಿಫ್‌ನಲ್ಲಿ ಸಿನಿಮಾ ಮಾಡೋದೂ ಅಷ್ಟೇ ಕಾಮನ್. ಇನ್ನೂ ಹೆಚ್ಚಿನ ಸ್ನೇಹ ಇತ್ತು ಅಂದರೆ, ಕಣ್ಮುಚ್ಕೊಂಡು ಕಾಲ್‌ ಶೀಟ್ ಕೊಡೋದೂ ಕಾಮನ್.

  ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಅಂತ ಮನೆಗೆ ಹೋಗೋದಿಲ್ಲ. ಬೆಳಗ್ಗೆ ಮನೆ ಬಿಟ್ಟರೆ ಮಧ್ಯರಾತ್ರಿ ಮನೆ ಸೇರುತ್ತಾರೆ. ಇಂತಹ ಉದಾಹರಣೆಗಳು ಚಿತ್ರರಂಗದಲ್ಲಿ ಕಾಮನ್. ಸದ್ಯ ಯೋಗಿ ಹಾಗೂ ಡಾಲಿ ಧನಂಜಯ್ ಇಬ್ಬರೂ ಸ್ಯಾಂಡಲ್‌ವುಡ್‌ನಲ್ಲಿ ಕ್ಲೋಸ್ ಫ್ರೆಂಡ್ಸ್. ಅದಕ್ಕೆ ಇಬ್ಬರೂ ಸೇರಿ 'ಹೆಡ್ ಬುಷ್' ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

  ದುಬೈನಲ್ಲಿ ರಾಜ್ ಕಪ್: ಹೆಡ್ ಬುಷ್, ಕಬ್ಜ ಸಿನಿಮಾದ್ದೇ ಹವಾ!ದುಬೈನಲ್ಲಿ ರಾಜ್ ಕಪ್: ಹೆಡ್ ಬುಷ್, ಕಬ್ಜ ಸಿನಿಮಾದ್ದೇ ಹವಾ!

  'ಹೆಡ್ ಬುಷ್' ಸಿನಿಮಾ ಮಾಡುವಾಗ ಇಬ್ಬರೂ ಎಷ್ಟು ಮುಳುಗಿ ಹೋಗಿದ್ದರು ಅನ್ನೋದನ್ನು ಯೋಗಿ ರಿವೀಲ್ ಮಾಡಿದ್ದಾರೆ. ಎಷ್ಟು ಕಾಲ್ ಶೀಟ್ ಕೊಟ್ಟಿದ್ದಾರೆ ಅನ್ನೋದು ಅವರಿಗೆ ಗೊತ್ತಿಲ್ವಂತೆ. ಎಲ್ಲಕ್ಕಿಂತ ಹೆಚ್ಚಾಗಿ, ಯೋಗಿ ಡಾಲಿ ಧನಂಜಯ್ ಸಹವಾಸ ಮಾಡಿದ್ದಕ್ಕೆ ಅವರ ಪತ್ನಿ ಮನೆ ಬಿಟ್ಟು ಹೋಗಿದ್ದರಂತೆ. ಅದಕ್ಕೆ ಆ ಸನ್ನಿವೇಶವನ್ನು ಯೋಗಿ ಡಾಲಿ ಮುಂದೆನೇ ಬಿಚ್ಚಿಟ್ಟಿದ್ದಾರೆ. ಆ ಸ್ವಾರಸ್ವಕರ ಸಂಗತಿ ಇಲ್ಲಿದೆ ಓದಿ.

  ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲಪ್ಪಾ

  ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲಪ್ಪಾ

  "ನಿನಗೆ ಬೈದುಕೊಂಡಿರೋ ಮಾತನ್ನು ಹೇಳೋಕೆ ಆಗಲ್ಲ. ಬೀಪ್‌ ಹಾಕಬೇಕಾಗುತ್ತೆ. ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲಪ್ಪಾ. ಒಂದು ವಾರ ಬಂದಿರಲಿಲ್ಲ ಮನೆಗೆ. ನಿನ್ನ ಸಹವಾಸ ಮಾಡಿ. ಅಂದ್ರೆ, ಶೂಟಿಂಗ್.. ಶೂಟಿಂಗ್.. ನನ್ನ ಹೆಂಡ್ತಿ ಇವತ್ತಿಗೂ ಹೇಳುತ್ತಾಳೆ. ನೀನು ಶೂಟಿಂಗ್ ಹೋಗುತ್ತಿದ್ಯಾ. ಇಲ್ಲಾ ಬೇರೆ ಎಲ್ಲಾದರೂ ಹೋಗುತ್ತಿದ್ಯಾ ಅಂತ ಕೇಳುತ್ತಾಳೆ. ಇಲ್ಲಮ್ಮ ದೇವರಾಣೆಗೂ ಶೂಟಿಂಗ್ ಅಂತ ಹೇಳಿದ್ದೆ." ಎಂದು ಹೆಂಡ್ತಿ ಅನುಮಾನ ಪಟ್ಟ ಸಂಗತಿಯನ್ನು ಸ್ವಾರಸ್ಯಕರವಾಗಿ ಹೇಳಿದ್ದಾರೆ.

  ಧನಂಜಯ್ ಅಭಿನಯದ 'ಹೆಡ್‌ ಬುಷ್' ಸಿನಿಮಾ ಪರೋಕ್ಷವಾಗಿ ಟಾಂಗ್ ಕೊಟ್ಟ ಜಯರಾಜ್ ಸೊಸೆ!ಧನಂಜಯ್ ಅಭಿನಯದ 'ಹೆಡ್‌ ಬುಷ್' ಸಿನಿಮಾ ಪರೋಕ್ಷವಾಗಿ ಟಾಂಗ್ ಕೊಟ್ಟ ಜಯರಾಜ್ ಸೊಸೆ!

  ನನ್ನ ಸಂಸಾರ ಒಡೆದು ಹಾಕ್ತಿದ್ಯಲ್ಲೋ

  ನನ್ನ ಸಂಸಾರ ಒಡೆದು ಹಾಕ್ತಿದ್ಯಲ್ಲೋ

  "ಬೆಳಗ್ಗೆ ನಾನು ಆರು ಗಂಟೆಗೆ ಮನೆಯಿಂದ ಹೊರಟರೆ, ಮಾರನೇ ದಿನ ಮಿಡ್‌ನೈಟ್ 2 - 3 ಗಂಟೆಗೆ ಮನೆಗೆ ಹೋಗುತ್ತಿದೆ. ಯಾವ ಸೆಟ್ಟಲ್ಲೂ ಹಿಂಗೆ ಇರಲ್ವಲ್ಲ ಯಾಕೆ ಅಂತ. ನಮ್ಮ ಕೆಲಸ ಹಂಗೆ ಆಗ್ತಿದೆಯಮ್ಮ ಅಂದ್ರೆ, ನಾನು ನಿನ್ನ ನಂಬಲ್ಲ ಅಂತ ಮನೆ ಬಿಟ್ಟು ಹೋಗಿದ್ದಳು. ನಿನ್ನ ಸಹಾವಾಸ ಮಾಡಿದ್ದಕ್ಕೆ, ನನ್ನ ಸಂಸಾರ ಒಡೆದು ಹಾಕ್ತಿದ್ಯಲ್ಲೋ." ಅಂತ ಡಾಲಿ ಲೈಟ್ ಆಗಿ ಅವಾಜ್ ಹಾಕಿದ್ದಾರೆ.

  ಬೇಗ ಮನೆಗೆ ಹೋಗ್ಬೇಕು

  ಬೇಗ ಮನೆಗೆ ಹೋಗ್ಬೇಕು

  " ನೋಡೊ ಹೆಂಗೋ ಸಮಾಧಾನ ಮಾಡಿ ನನ್ನ ಹೆಂಡ್ತಿ ಮಗುನಾ ಮನೆಗೆ ಕರ್ಕೊಂಡು ಬಂದಿದ್ದೀನಿ. ಈ ಇಂಟರ್ವ್ಯೂ ಮುಗಿಸಿಕೊಂಡ ಟಕ್ ಅಂತ ಮನೆಗೆ ಹೋಗಬೇಕು. ಆಮೇಲೆ ಇದಕ್ಕೂ ಮನೆಬಿಟ್ಟು ಹೋಗ್ಬಿಡ್ತಾಳೆ." ಅಂತ ಧನಂಜಯ್ ಕಿಂಡಲ್ ಮಾಡಿದ್ದಾರೆ ಯೋಗಿ.

  ಹೆಡ್‌ ಬುಷ್‌ಗೆ 99 ಕಾಲ್‌ ಶೀಟ್ ಕೊಟ್ಟಿದ್ದೀನಿ

  ಹೆಡ್‌ ಬುಷ್‌ಗೆ 99 ಕಾಲ್‌ ಶೀಟ್ ಕೊಟ್ಟಿದ್ದೀನಿ

  "ನಿಮ್ಮ ಡೈರೆಕ್ಟರ್ ಶೂನ್ಯಗೆ ಕೇಳಿದೆ ಎಷ್ಟು ದಿನ ಶೂಟಿಂಗ್ ಮಾಡಿದೆ ಅಂತ. ಸಾರ್, ಒಂದು 60 ದಿನ ಮಾಡಿದ್ದೀನಿ ಅಂದ. ಲೇ ಕಾಲ್‌ ಶೀಟ್ ಎಷ್ಟು ಆಯ್ತು ಹೇಳು ಅಂದೆ. ಅವನು ಎಷ್ಟು ಅಂತ ಒಪ್ಪಿಕೊಳ್ಳುತ್ತಿಲ್ಲ. ನಾನೇ ಲೆಕ್ಕ ಹಾಕಿರೋ ಪ್ರಕಾರ 99 ಕಾಲ್‌ ಶೀಟ್ ಆಗಿದೆ. ಇವತ್ತು ಸೇರಿದ್ರೆ 100 ಕಾಲ್ ಶೀಟ್. ನಿನ್ನನ್ನು ದಿನಾ ಬೈಯ್ಕೊಂಡಿದ್ದೀನಿ ಸೆಟ್‌ನಲ್ಲಿ. ಬೆಳಗ್ಗೆ ಆರೂವರೆ ಏಳಕ್ಕೆ ಬರೋದು. ಮಧ್ಯಾಹ್ನ 12 ಗಂಟೆಗೆ ಒಂದು ಶಾಟ್ ತೆಗೆಯೋದು. ಅದೂ ಮೂಡ್ ಇದ್ರೆ ತೆಗೆಯೋನು." ಅಂತ ಹೆಡ್ ಬುಷ್ ಸಿನಿಮಾ ಶೂಟಿಂಗ್ ಅನುಭವವನ್ನು ಹೇಳಿದ್ದಾರೆ.

  English summary
  Head Bush Star Yogi Wife Left House Because Of Daali Dhananjay, Know More.
  Thursday, September 29, 2022, 22:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X