twitter
    For Quick Alerts
    ALLOW NOTIFICATIONS  
    For Daily Alerts

    'ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ': ಸಚಿವ ಡಾ ಸುಧಾಕರ್ ಪ್ರತಿಕ್ರಿಯೆ

    |

    'ಮನರಂಜನೆ ಬಹಳ ಮುಖ್ಯ, ಆದರೆ ಮನರಂಜನೆಗಿಂತ ಜನರ ಆರೋಗ್ಯ, ಕ್ಷೇಮ ಮುಖ್ಯ, ಹಾಗಾಗಿ, ಚಿತ್ರಮಂದಿರಗಳಿಗೆ ಸದ್ಯಕ್ಕೆ ನೂರರಷ್ಟು ಅವಕಾಶ ಕೊಡುವುದು ಸೂಕ್ತವಲ್ಲ'' ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

    Recommended Video

    ನನಗೆ ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ | Sudhakar | Filmibeat Kannada

    ಫೆಬ್ರವರಿ 1 ರಿಂದ ದೇಶಾದ್ಯಂತ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಕರ್ನಾಟಕದ ಸರ್ಕಾರ ಈ ಆದೇಶಕ್ಕೆ ತಡೆ ನೀಡಿದ್ದು, ಈ ತಿಂಗಳ ಅಂತ್ಯದವರೆಗೂ ಯಥಾಸ್ಥಿತಿಯಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸಲಿ ಎಂದು ತಿಳಿಸಿದೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ? ಅಖಾಡಕ್ಕಿಳಿದ ಪುನೀತ್ ರಾಜ್ ಕುಮಾರ್ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ? ಅಖಾಡಕ್ಕಿಳಿದ ಪುನೀತ್ ರಾಜ್ ಕುಮಾರ್

    ಧ್ರುವ ಸರ್ಜಾ, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಶಿವಣ್ಣ ಸೇರಿದಂತೆ ಹಲವರು ''ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ಕೊಡಿ'' ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ....

    ಚಿತ್ರಮಂದಿರ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಆತಂಕ

    ಚಿತ್ರಮಂದಿರ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಆತಂಕ

    ''ಚಿತ್ರಮಂದಿರಗಳು ಎಲ್ಲ ಕಡೆಯಿಂದಲೂ ಮುಚ್ಚಿದ (ಕ್ಲೋಸ್ಡ್) ಪ್ರದೇಶ, ಎಸಿ ಇರೋ ಜಾಗ. ಸೋಂಕು ಬಹಳ ಬೇಗನೆ ಹರಡುವ ಸಾಧ್ಯತೆ. ನಾನೊಬ್ಬ ಸಚಿವನಾಗಿ ಜವಾಬ್ದಾರಿ ಇದೆ. ನನಗೆ ಇಷ್ಟ ಬಂದಂತೆ ಆದೇಶ ಮಾಡಲು ಸಾಧ್ಯವಿಲ್ಲ. ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ನಾವು ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ'' ಎಂದು ಸುಧಾಕರ್ ತಿಳಿಸಿದ್ದಾರೆ.

    ರಾಜಕೀಯ ಸಭೆಯೂ ಸರಿ ಅಂತ ನಾನು ಹೇಳಲ್ಲ

    ರಾಜಕೀಯ ಸಭೆಯೂ ಸರಿ ಅಂತ ನಾನು ಹೇಳಲ್ಲ

    ರಾಜಕೀಯ ಸಭೆ ನಡೆಯುತ್ತೆ, ಮಾರ್ಕೆಟ್‌ನಲ್ಲಿ ಜನ ಸೇರ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್ ''ರಾಜಕಾರಣದ ಸಭೆ ಸರಿ ಅಂತ ನಾವು ಹೇಳಿಲ್ಲ. ಅದೂ ಸರಿ ಅಂತನೂ ಹೇಳಲ್ಲ. ಆದ್ರೆ ಅದು ಹೊರಗಡೆ ಮಾಡ್ತಿದ್ದಾರೆ, ಹೊರಗಡೆ ಆದರೂ ಅದು ಸರಿಯಲ್ಲ. ಸಾಧ್ಯವಾದ ಕಡೆ ಸೋಂಕು ನಿಯಂತ್ರಣ ಮಾಡೋದು ನಮ್ಮ ಸರ್ಕಾರದ ಜವಾಬ್ದಾರಿ'' ಎಂದು ಸ್ಪಷ್ಟನೆ ನೀಡಿದ್ದಾರೆ.

    ಫೆಬ್ರವರಿ 28ವರೆಗು ಶೇ 50ರಷ್ಟು ಮುಂದುವರಿಯಲಿದೆ

    ಫೆಬ್ರವರಿ 28ವರೆಗು ಶೇ 50ರಷ್ಟು ಮುಂದುವರಿಯಲಿದೆ

    ''ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ. ಹೆಚ್ಚಿನ ಅವಕಾಶ ನೀಡಲು ಆಯಾ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಸೂಚಿಸಿದೆ. ನಮ್ಮ ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ಫೆಬ್ರವರಿ 28ವರೆಗು ಶೇ 50ರಷ್ಟು ಮುಂದುವರಿಯಲಿ ಎಂದು ಹೇಳಿದ್ದೇವೆ. ನೆರೆಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್ ದಾಖಲಾಗುತ್ತಿದೆ. ಮನರಂಜನೆ ಬಹಳ ಮುಖ್ಯ, ಮನರಂಜನೆಗಿಂತ ಮುಖ್ಯ ಜನರ ಆರೋಗ್ಯ, ಕ್ಷೇಮ'' ಎಂದು ಸುಧಾಕರ್ ಹೇಳಿದರು.

    ಮತ್ತೊಮ್ಮೆ ಸಭೆ ಮಾಡ್ತೇನೆ

    ಮತ್ತೊಮ್ಮೆ ಸಭೆ ಮಾಡ್ತೇನೆ

    ''ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಸಾಧ್ಯವಾಗಲ್ಲ. ಮತ್ತೊಮ್ಮೆ ಸಿಎಂ ಮತ್ತು ತಾಂತ್ರಿಕ ಸಲಹ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಮಾಡುತ್ತೇನೆ'' ಎಂದು ಕೊನೆಯಲ್ಲಿ ಭರವಸೆ ನೀಡಿದರು.

    English summary
    Karnataka Health Minister Sudhakar Reaction to Karnataka Govt Stand on 50% Occupancy in Theatres.
    Wednesday, February 3, 2021, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X