ನೀನ್ ಹೀಗ್ ಹೊರಟ್ರೆ ನಿನ್ನೆ ನಂಬ್ಕೊಂಡ್ ಬದುಕ್ತಿದ್ದೋರ ಗತಿ ಏನು ? ದಿಲೀಪ್ ರಾಜ್‌ಗೆ ಸುಷ್ಮಾ ಭಾರದ್ವಾಜ್ ಭಾವುಕ ವಿದಾಯ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.

ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

Heart Heavy with Thousand Kilos Sushma Bharadwaj s Gut-Wrenching Farewell to Dileep Raj

ಹೌದು, ದಿಲೀಪ್ ರಾಜ್ ಇನ್ನಿಲ್ಲ ಎಂಬ ಸುದ್ದಿ ಇಂದು (ಮೇ 13) ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡೆದಿದೆ. ಯಾರೆಂದರೆ ಯಾರು ನಂಬಲಾಗದ ಸುದ್ದಿ ಇದು. ಸಾಯುವ ವಯಸ್ಸು ಅಲ್ಲವೇ ಅಲ್ಲ. ಇನ್ನೂ ಬದುಕಿ ಬಾಳಬೇಕಿತ್ತು, ಹಲವರ ಬಾಳಿಗೆ ಬೆಳಕಾಗಬೇಕಿತ್ತು ದಿಲೀಪ್ ರಾಜ್.

ಇಂದು (ಮೇ 13) ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾವಿದನನ್ನು ಮಾತ್ರವಲ್ಲ, ಒಬ್ಬ ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿಯನ್ನು ಕೂಡ ಕಳೆದುಕೊಂಡಿದೆ. ಹಲವರು ದಿಲೀಪ್ ರಾಜ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ವಿಧಿಗೆ ಶಾಪ ಹಾಕುತ್ತಿದ್ದಾರೆ. ನಟಿ ಸುಷ್ಮಾ ಭಾರದ್ವಾಜ್ ಕೂಡ ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ. ನೀನ್ ಹೀಗ್ ಹೊರಟ್ರೆ ನಿನ್ನೆ ನಂಬ್ಕೊಂಡ್ ಬದುಕ್ತಿದ್ದೋರ ಗತಿ ಏನು? ಎಂದು ಬಿಕ್ಕಿದ್ದಾರೆ.

ಸುಷ್ಮಾ ಭಾರದ್ವಾಜ್ ಬರಹ

ಬೇಜಾರಾಗ್ತಿದೆ. ಎದೆ ಮೇಲೆ ಸಾವಿರ ಕೇಜಿಯಷ್ಟು ಭಾರ ಕೂತಿದೆ. ಯಾಕೆ ಹೀಗೆ? ಯಾರು ನೀನು? ನೀನ್ ಹೀಗ್ ಹೊರಟ್ರೆ ನಿನ್ನೆ ನಂಬ್ಕೊಂಡ್ ಬದುಕ್ತಿದ್ದೋರ ಗತಿ ಏನು? Life is unfair ಸರಿ. life ಯಾವತ್ತೂ ನಮ್ಹತ್ರ ಏನನ್ನೂ ಪ್ರಾಮಿಸ್ ಮಾಡಿಲ್ಲ. ಈ ಲೈಫ್ ಅಲ್ಲಿ symmetry ಹುಡುಕ್ತಿದ್ದಿದ್ದು ನಾವೇ. ಆದ್ರೂ life is unfair. ಹೋಗ್ಬಾ ದಿಲೀಪ.

ಮೊದಲನೇ ಸಲ ವಿಜಯನಗರದಿಂದ ನಿನ್ನನ್ನ ಶೂಟಿಂಗ್ ಗಾಡಿಲಿ ಪಿಕ್ ಮಾಡಿದಾಗ ನಿನ್ ಮುಖದ್ ಮೇಲಿದ್ದ ಜಾಲಿ ನಗು ನಂಗಿನ್ನೂ ನೆನಪಿದೆ. 2001 ನೇ ಇಸವಿ ಇರ್ಬೇಕದು. ಅರ್ಧಸತ್ಯ ಸೀರಿಯಲ್ ಶೂಟಿಂಗು. ಆಮೇಲೆ ಅದೆಷ್ಟು ಶೂಟಿಂಗಿಗೆ ರಾಮೋಜಿ ಫಿಲಂ ಸಿಟಿಗೆ ಹೋಗಿದ್ವೋ, ಅದೆಷ್ಟು ಸಲ ನಂಗೆ " ಲೇ, ಪೇಮೆಂಟ್ ಎಲ್ಲ ಸರಿಯಾಗ್ ಮಾತಾಡೇ, ಸುಮ್ಸುನ್ನೆ ಕಮ್ಮಿಗೆಲ್ಲಾ ಒಪ್ಕೋಬೇಡ " ಅಂತಿದ್ದೆ. ಅದೆಷ್ಟೋ ಸಲ ಅಣ್ಣನಾಗಿ ಜೊತೆಗ್ ನಿಂತಿದ್ದೀಯ, ಕಾಪಾಡಿದ್ದೀಯ.

Heart Heavy with Thousand Kilos Sushma Bharadwaj s Gut-Wrenching Farewell to Dileep Raj

ನಾ zee ಲಿದ್ದಾಗ ಕೆಲ್ಸ ಕೊಡ್ಸು ಅಂದಿದ್ದಾಗ ಕೆಲ್ಸ ಕೊಡ್ಸಕ್ ಆಗುತ್ತೋ ಇಲ್ವೋ ಒಟ್ನಲ್ಲಿ ಎಲ್ಲಾ ಕಡೆ ಇಂಟರ್ವ್ಯೂ ಅಂತೂ ಕೊಡಿಸ್ತೀನಿ ಅಂದಿದ್ದೆ. ನೀನು ಚಾನೆಲ್ ಕೆಲಸಕ್ ಸೇರಿದಾಗ ಮತ್ತದೇ ನಗು.. ಎಂಥೆಂಥ ತಿಕ್ಕಲುಗಳಿರ್ತಾವಲ್ಲ ಪ್ರಪಂಚದಲ್ಲಿ ಅಂತ. ಎಷ್ಟೋ ಜನ ಸಹಾಯ ತಗೊಂಡು ಮರೀತಾರೆ. but you were always so grateful. ನಿನ್ ಸೀರಿಯಲ್ಲಿಗೆ ಬಂದು ಆಕ್ಟ್ ಮಾಡು ಅಂತಿದ್ದೆ. ಬರೀ ಅಂತಿದ್ದೆ. ಹೀರೋ ಆದಾಗಲೂ ಪ್ರೊಡ್ಯೂಸರ್ ಆದಾಗಲೂ ಎಷ್ಟೇ ಬೆಳೆದಾಗಲೂ ಯಾವದನ್ನೂ ತಲೆಗ್ ತಗೊಳ್ಳಿಲ್ಲ ನೀನು. ಆ ನಿಷ್ಕಲ್ಮಶ ನಗುನ ಬಿಟ್ಟುಕೊಡ್ಲಿಲ್ಲ ನೀನು.

ಬೆಳಿಗ್ಗೆ ಬರೋ ಒಂದು message ನಲ್ಲಿ ಯಾರೋ ಒಬ್ರು ಇಲ್ಲವಾಗ್ತಾರೆ ಶಾಶ್ವತವಾಗಿ ಅಂದ್ರೆ ದಿಕ್ಕೆಡುತ್ತೆ. ಮೊದಲ್ನೇ ಸಲ ಸಿಕಾಗ್ಲೇ ನಿನ್ ಡಾನ್ಸ್ ಪ್ಯಾಶನ್ ಬಗ್ಗೆ, ವಿದ್ಯಾ ಬಗ್ಗೆ ಹೇಳಿದ್ದೆ ನೀನು. ಕನ್ನಡಿ ಹಾಗೆ ಬದುಕಿದ್ರಿ ನೀವಿಬ್ಬರೂ. ಅಷ್ಟು ಜೊತೆಗೆ. ಈಗವಳನ್ನ ನೆನೆಸಿಕೊಳ್ಳೋಕೂ ಧೈರ್ಯ ಇಲ್ಲ ನಂಗೆ. ಹೋಗ್ಬಾ ದಿಲೀಪ. ಈ uncertain ಪ್ರಪಂಚದಲ್ಲಿ ನಾವೆಲ್ಲರೂ ಸರದಿಲಿ ಇರೋರೆ.ಇಷ್ಟ್ ಬೇಗ ಹೀಗೆ ಹೊರಟಿದ್ದಕ್ಕೆ ಮೇಲೆ ಬಂದು ಜಗಳ ಆಡ್ತೀನಿ.

English summary
"Heart heavy with 1000kg." Sushma Bharadwaj’s viral farewell to Dileep Raj captures a beautiful 25-year journey of friendship, success, and loss. Read more.
Read more about: death filmibeat news ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X