ಆತಂಕ,ದುಗುಡ, ದುಮ್ಮಾನ ; ರಜನಿಕಾಂತ್ ಅಣ್ಣನಿಗೆ ಹೃದಯಾಘಾತ -ಬೆಂಗಳೂರಿಗೆ ಓಡೋಡಿ ಬಂದ ತಲೈವಾ

ರಜನಿಕಾಂತ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಅಭಿಮಾನಿಗಳ ಪಾಲಿನ ತಲೈವಾ. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಹೈದ್ರಾಬಾದ್- ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜನಿಕಾಂತ್ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ತಾವು ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.ಆದರೆ ಇಂಥ ರಜನಿಕಾಂತ್ ಮನಸ್ಸು ಮಾತ್ರ ಹುಟ್ಟೂರಿನಲ್ಲಿ...

ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವಾರು ಬಾರಿ ರಜನಿಕಾಂತ್ ಬೆಂಗಳೂರಿಗೆ ಸದ್ದಿಲ್ಲದೇ ಬಂದು ಹೋಗಿದ್ದಾರೆ. ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಕಂಡರೂ ಮತ್ತೆ ಆರಂಭದ ಶೂನ್ಯಕ್ಕೆ ಮರಳಿ ತಮ್ಮನ್ನು ತಾವು ಅವಲೋಕಿಸಿಕೊಂಡಿದ್ದಾರೆ. ಮಹಾನ್ ಸಾಧಕನೊಬ್ಬ ಹೀಗೆ ಬರಿಗೈದಾಸನಂತೆ, ತನಗಿರುವ ಅಂತಸ್ತು, ಐಶ್ವರ್ಯಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದಾರೆ.

Heartbreak for Rajinikanth as Elder Brother Satyanarayana Rao Fights for Life in Bengaluru ICU

ಇಂಥಾ ರಜನಿಕಾಂತ್ ಇವತ್ತು ಏನೇ ಆಗಿರಬಹುದು. ಆದರೆ ಇವರ ಈ ಸಾಧನೆಯ ಹಿಂದೆ ಹಲವರ ಪರಿಶ್ರಮ ಇದೆ. ಹಲವರ ಬೆವರಿನ ಹನಿ ಇದೆ. ಈ ಮಾತನ್ನು ಖುದ್ದು ರಜನಿಕಾಂತ್ ಕೂಡ ಅಲ್ಲಗಳೆಯಲಾರರು. ತಮ್ಮ ಸ್ನೇಹಿತ ರಾಜ್ ಬಹದ್ದೂರ್ ಮತ್ತು ತಮ್ಮ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಅವರ ಬೆಂಬಲ ಮತ್ತು ಪ್ರೀತಿಯನ್ನು ರಜನಿ ಯಾವತ್ತೂ ಮರೆಯಲಾರರು.

ಆದರೆ.. ವಿಧಿ, ಆಗಾಗ ಅಗ್ನಿ ಪರೀಕ್ಷೆಯನ್ನೊಡ್ಡುತ್ತೆ. ಜೀವಕ್ಕೆ ಜೀವ ಎನ್ನುವಂತೆ ಇರುವವರಿಗೆ ಸವಾಲೊಡ್ಡುತ್ತೆ. ಬದುಕಿನ ಬಂಧ.. ಬಾಂಧವ್ಯ.. ಕಳಚುವ ಪ್ರಯತ್ನ ಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ರಜನಿಯ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಜೀವನ್ಮರಣದ ಹೋರಾಟವನ್ನು ಸದ್ಯ ಮಾಡುತ್ತಿದ್ದಾರೆ.

ಹೌದು, ಬೆಂಗಳೂರಿನ ಹೊಸಕೆರೆಹಳ್ಳಿಯ ''ನಂದಿ ಕಾರಿಡಾರ್‌''ನಲ್ಲಿ ವಾಸ ಮಾಡುವ 84 ವರ್ಷದ ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಹೃದಯಾಘಾತವಾಗಿದೆ ಎನ್ನುವ ಆತಂಕಕಾರಿ ಸುದ್ದಿ ಸದ್ಯ ಹೊರ ಬಿದ್ದಿದೆ. ''TV 9 ಕನ್ನಡ'' ವರದಿಯ ಪ್ರಕಾರ ಈ ಆಘಾತಕಾರಿ ಸುದ್ದಿಯನ್ನು ತಿಳಿದ ತಕ್ಷಣ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಜನಿಕಾಂತ್ ಚೆನ್ನೈದಿಂದ ಓಡೋಡಿ ಬಂದಿದ್ದಾರೆ. ''ನ್ಯೂಸ್ 18 ಕನ್ನಡ'' ಮತ್ತು ''TV 9 ಕನ್ನಡ'' ವರದಿಯ ಪ್ರಕಾರ ತೀವೃ ಅನಾರೋಗ್ಯಕ್ಕೀಡಾದ ತಮ್ಮ ಸಹೋದರನನ್ನು ಖುದ್ದು ರಜನಿಕಾಂತ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರಜನಿಯ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ರಜನಿಕಾಂತ್ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳಲ್ಲಿ ಕೂಡ ದುಗುಡ ಮನೆ ಮಾಡಿದೆ. ಆಸ್ಪತ್ರೆಯ ವೈದ್ಯರಿಂದ ಹೆಲ್ತ್ ಬುಲೆಟಿನ್‌ನನ್ನೂ ಕೂಡ ನಿರೀಕ್ಷೆ ಮಾಡಲಾಗುತ್ತಿದೆ.

heartbreak-for-rajinikanth-as-elder-brother-satyanarayana-rao-fights-for-life-in-bengaluru-icu

ರಜನಿಕಾಂತ್ ಅವರಾಗಲಿ.. ಅವರ ಕುಟುಂಬಸ್ಥರಾಗಲಿ.. ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ಕೂಡ ಇನ್ನೂ ಹಂಚಿಕೊಂಡಿಲ್ಲವಾದರು ಹಲವರು ರಜಿನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಜಿನಿಯವರ ಅಣ್ಣ ಸತ್ಯನಾರಾಯಣ್ ಚೇತರಿಸಿಕೊಳ್ಳಲಿ, ಮನೆ ಮಾಡಿರುವ ಈ ಆತಂಕ ದುಗುಡ ಮತ್ತು ದುಮ್ಮಾನ ದೂರವಾಗಲಿ ಎನ್ನುವುದು ನಮ್ಮ ಆಶಯ ಮತ್ತು ಪ್ರಾರ್ಥನೆ ಕೂಡ.

More from Filmibeat

English summary
Superstar Rajinikanth faces heartbreak as his elder brother, Satyanarayana Rao Gaikwad, is admitted to a Bengaluru hospital with a cardiac emergency. Read the emotional family update.
Read more about: rajinikanth rajanikanth health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X