»   » ಕಿಚ್ಚನ 'ಹೆಬ್ಬುಲಿ' ಘರ್ಜನೆ ಜನವರಿ 26ಕ್ಕೆ ಅಲ್ಲ!

ಕಿಚ್ಚನ 'ಹೆಬ್ಬುಲಿ' ಘರ್ಜನೆ ಜನವರಿ 26ಕ್ಕೆ ಅಲ್ಲ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ್ದೇ ಟಾಕ್. ಹಾಡುಗಳು ರಿಲೀಸ್ ಮಾಡಿ ಘರ್ಜಿಸುತ್ತಿರುವ 'ಹೆಬ್ಬುಲಿ', ಈಗ ಥಿಯೇಟರ್ ಗೆ ಬರುವ ತಯಾರಿಯಲ್ಲಿದೆ.

ಈಗಾಗಲೇ ಚಿತ್ರತಂಡದ ಮಾಹಿತಿ ಪ್ರಕಾರ ಫೆಬ್ರವರಿ 10 ರಂದು ರಾಜ್ಯಾದ್ಯಂತ 'ಹೆಬ್ಬುಲಿ' ತೆರೆಗೆ ಬರುವುದು ಖಚಿತವಾಗಿದೆ. ಆದ್ರೆ, ಸಾಕಷ್ಟು ಜನ ಇನ್ನೂ ಗೊಂದಲದಲ್ಲೇ ಇದ್ದಾರೆ. ಯಾಕಂದ್ರೆ, ಈ ಮೊದಲು ಜನವರಿ 26.ಕ್ಕೆ 'ಹೆಬ್ಬುಲಿ' ಸಿನಿಮಾ ಬಿಡುಗಡೆ ಆಗುತ್ತೆ ಎನ್ನಲಾಗಿತ್ತು. ಆದ್ರೆ, ಫೆಬ್ರವರಿ 10 ರಂದು ಸಿನಿಮಾ ರಿಲೀಸ್ ಆಗಲಿದೆ ಎನ್ನುವುದು ತಾಜಾ ಸುದ್ದಿ.[ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಒಂದು ಕಹಿ ಸುದ್ದಿ]


Hebbuli Movie Has Releasing on february 10th

ಈ ವಿಷ್ಯವನ್ನ ಖುದ್ದು ಸುದೀಪ್ ಅವರು ಕೂಡ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಹೇಳಿದ್ದರು. ''ಹೆಬ್ಬುಲಿ' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಸರ್'' ಎಂದು ಪ್ರಥಮ್ ಕೇಳಿದ ಪ್ರಶ್ನೆಗೆ, ಸುದೀಪ್ ಅವರು ಫೆಬ್ರವರಿ 10 ಎಂದು ಉತ್ತರಿಸಿದ್ದರು.[ರಿಲೀಸ್ ಆಗಿಲ್ಲ, ಆಗ್ಲೇ ದುಡ್ಡು ಬಾಚೋಕೆ ಶುರು ಮಾಡಿದ 'ಹೆಬ್ಬುಲಿ' ಕಿಚ್ಚ?]


ಸುದೀಪ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿರುವ 'ಹೆಬ್ಬುಲಿ' ಚಿತ್ರವನ್ನ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಬಹುಬಾಷಾ ನಟಿ ಅಮಲಾ ಪೌಲ್ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಖಳನಾಯಕ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ನಲ್ಲಿ, 'ಹೆಬ್ಬುಲಿ' ಹಾಡುಗಳು ಕೇಳಿ ಎಂಜಾಯ್ ಮಾಡುತ್ತಿರುವ ಕಿಚ್ಚನ ಫ್ಯಾನ್ಸ್ ಫೆಬ್ರವರಿಯಲ್ಲಿ ದೊಡ್ಡ ಹಬ್ಬ ಮಾಡೋಕೆ ಸಿದ್ದವಾಗುತ್ತಿದ್ದಾರೆ.['ಹೆಬ್ಬುಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ಆರ್ಮಿ' ಲುಕ್.!]

English summary
Kannada Actor Kiccha Sudeep Starrer Hebbuli Movie Releasing on february 10th. the movie Directed by Krishan and Amal paul Female lead opposite Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada