For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ನಿರ್ಮಾಪಕನ ಎರಡನೇ ಸಿನಿಮಾ ಟೈಟಲ್ ನೋಡಿ

  By Bharath Kumar
  |

  ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರವನ್ನ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದ ನಿರ್ಮಾಪಕ ಉಮಾಪತಿ, ಈಗ ತಮ್ಮ ಎರಡನೇ ಚಿತ್ರವನ್ನ ಘೋಷಣೆ ಮಾಡಿದ್ದಾರೆ. ಈ ಮೊದಲೇ ಸುದ್ದಿಯಾದಂತೆ ಉಮಾಪತಿ ಅವರ ಎರಡನೇ ಚಿತ್ರವನ್ನ 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ.

  ಇದೀಗ, ಎರಡು ಸೂಪರ್ ಹಿಟ್ ಜೋಡಿಗಳ ಹೊಸ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು, ಚಿತ್ರಕ್ಕೆ 'ಒಂದಲ್ಲಾ ಎರಡಲ್ಲಾ' ಎಂದು ಟೈಟಲ್ ಇಡಲಾಗಿದೆ. ನಿರ್ಮಾಣದ ಜೊತೆಗೆ ರಾಜಕಾರಣದಲ್ಲಿ ತೊಡಗಿಕೊಂಡಿರುವ ಉಮಾಪತಿ ಶ್ರೀನಿವಾಸ, ಬೊಮ್ಮನಹಳ್ಳಿ ವಿಧಾನಸಭೆಯ ಕಾಂಗ್ರೆಸ್ ನಾಯಕರಾಗಿದ್ದಾರೆ. ಒಂದು ಕಡೆ ರಾಜಕೀಯ ಮತ್ತೊಂದುಕಡೆ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

  ದರ್ಶನ್ ಗೆ ಆಕ್ಷನ್ ಕಟ್ ಹೇಳಲು ಜೋಗಿ ಪ್ರೇಮ್ ಗೆ ದಾಖಲೆಯ ಸಂಭಾವನೆ

  ಮೊದಲ ಸಿನಿಮಾ ಬಹುದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದ ಉಮಾಪತಿ ಅವರು ಕಮರ್ಷಿಯಲ್ ಸಿನಿಮಾ ಮಾಡಿದ್ದರು. ಆದ್ರೆ, ಎರಡನೇ ಬಾರಿ ಪ್ರಯೋಗಾತ್ಮಕ ನಿರ್ದೇಶಕನ ಜೊತೆ ಕೈಜೋಡಿಸಿದ್ದು, ಈ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ.

  ನಿರ್ದೇಶಕ ಪ್ರೇಮ್ ಗಾಗಿ ತನ್ನ ಹಳೆ ನಿಯಮ ಮುರಿದ ದಾಸ ದರ್ಶನ್!

  ಸದ್ಯ, ಕಲಾವಿದರನ್ನ ಆಯ್ಕೆ ಮಾಡಿಕೊಂಡಿರುವ ಚಿತ್ರತಂಡ ನಾಯಕ ಹಾಗೂ ನಾಯಕಿ ಯಾರು ಎಂದು ಬಹಿರಂಗಪಡಿಸಿಲ್ಲ. 'ರಾಮಾ ರಾಮಾ ರೇ' ಎಂಬ ಸೂಪರ್ ಹಿಟ್ ಸಿನಿಮಾ ಮಾಡಿದ್ದ ನಿರ್ದೇಶಕ ಸತ್ಯ ಪ್ರಕಾಶ್, ಎರಡನೇ ಸಿನಿಮಾದಲ್ಲಿ ಯಾವ ರೀತಿ ಕತೆ ಮಾಡಿದ್ದಾರೆ ಎಂಬುದು ಕೂಡ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ.

  English summary
  Kannada movie Ondalla Eradalla title teaser released. the movie directed by sathya prakash fame of 'rama rama re', and produced by umapathy srinivas fame of 'hebbuli'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X