»   » ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ 'ಹೆಬ್ಬುಲಿ' ನಿರ್ಮಾಪಕ ರಘುನಾಥ್

ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ 'ಹೆಬ್ಬುಲಿ' ನಿರ್ಮಾಪಕ ರಘುನಾಥ್

Posted By:
Subscribe to Filmibeat Kannada

ಮಲ್ಲೇಶ್ವರದಲ್ಲಿ ಇರುವ ಎಸ್.ಆರ್.ವಿ ಥಿಯೇಟರ್ ನಲ್ಲಿ ನಡೆದ ಖಾಸಗಿ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪುನೀತ್ ಅವರನ್ನ ಖ್ಯಾತ ನಿರ್ಮಾಪಕ ರಘುನಾಥ್ ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು.

'ಆಕ್ಸಿಡೆಂಟ್' ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ರಘುನಾಥ್, ನಂತರ 'ಜಿಗರ್ ಥಂಡ', 'ಹೆಬ್ಬುಲಿ' ಸಿನಿಮಾಗಳನ್ನು ನಿರ್ಮಿಸಿ ಹೆಸರು ಮಾಡಿದರು.

'Hebbuli' Producer Raghunath meets Puneeth Rajkumar

ಸಿನಿಮಾ ನಿರ್ಮಾಣ ಮಾತ್ರವಲ್ಲದೇ, ಹೋಟೆಲ್ ಸೇರಿದಂತೆ ಸಾಕಷ್ಟು ಉದ್ಯಮಗಳನ್ನು ನಡೆಸುತ್ತಾ, ಪುನೀತ್ ರಾಜ್ ಕುಮಾರ್ ಅವರು ಭೇಟಿ ನೀಡಿದ 'ಎಸ್.ಆರ್.ವಿ ಥಿಯೇಟರ್' ಕೂಡ ರಘುನಾಥ್ ಅವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ ಆಗಿದೆ.

ಇಂಥದ್ದೊಂದು ಸ್ಥಳದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಘುನಾಥ್ ಅವರ ಭೇಟಿ ಮತ್ತು ಪರಸ್ಪರ ಪ್ರೀತಿಯ ಮಾತುಕತೆ ನಿಜಕ್ಕೂ ವಿಶೇಷ.

English summary
'Hebbuli' Producer Raghunath meets Puneeth Rajkumar. Take a look at the picture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada