'ಹೆಬ್ಬುಲಿ' ಗೆದ್ದಿದ್ದಕ್ಕೆ 'ಕಿಚ್ಚ'ನ ಮನೆಯಲ್ಲಿ ಸಕ್ಸಸ್ ಪಾರ್ಟಿ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಬಾಕ್ಸ್ ಆಫೀಸ್ ನ ಎಲ್ಲಾ ದಾಖಲೆಗಳನ್ನ ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಒಪನಿಂಗ್ ಮಾಡಿರುವ 'ಹೆಬ್ಬುಲಿ' ಕಲೆಕ್ಷನ್ ನಲ್ಲಿ ಕಿಂಗ್ ಎನಿಸಿಕೊಂಡಿದೆ.[ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!]
ಹೀಗೆ, ಪ್ರತಿಯೊಂದು ಹಂತದಲ್ಲೂ ದಾಖಲೆಗಳನ್ನ ಮಾಡುತ್ತಾ ಘರ್ಜಿಸುತ್ತಿರುವ 'ಹೆಬ್ಬುಲಿ' ಚಿತ್ರತಂಡ ಸದ್ಯ, ಯಶಸ್ಸಿನ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ಕಿಚ್ಚ ಸುದೀಪ್, 'ಹೆಬ್ಬುಲಿ' ಚಿತ್ರತಂಡಕ್ಕೆ ತಮ್ಮ ಮನೆಯಲ್ಲೇ ಸಕ್ಸಸ್ ಪಾರ್ಟಿ ಕೊಟ್ಟಿದ್ದಾರೆ. ಹಾಗಾದ್ರೆ, ಹೆಬ್ಬುಲಿ ಸಕ್ಸಸ್ ಪಾರ್ಟಿಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಅಂತ ಮುಂದೆ ನೋಡಿ.....

ಕಿಚ್ಚನ ಮನೆಯಲ್ಲಿ 'ಹೆಬ್ಬುಲಿ' ಸಕ್ಸಸ್ ಪಾರ್ಟಿ!
ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಗೆಲುವಿನ ಹಿನ್ನಲೆ, ಅಭಿನಯ ಚಕ್ರವರ್ತಿ ತಮ್ಮ ಮನೆಯಲ್ಲಿ ಸಕ್ಸಸ್ ಪಾರ್ಟಿ ಅಯೋಜಿಸಿದ್ದರು. ಕಂಪ್ಲೀಟ್ 'ಹೆಬ್ಬುಲಿ' ಚಿತ್ರತಂಡದ ಜೊತೆ ಸಂತಸ ಹಂಚಿಕೊಂಡ ಕಿಚ್ಚ, ಎಲ್ಲರನ್ನು ಕರೆಯಿಸಿ ಸಂಭ್ರಮಿಸಿದ್ದಾರೆ.['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]

ಪಾರ್ಟಿಯಲ್ಲಿ ಯಾರೆಲ್ಲ ಭಾಗವಹಿಸಿದ್ದರು!
ಕಿಚ್ಚನ ಮನೆಯಲ್ಲಿ ಅಯೋಜಿಸಿದ್ದ ಸಕ್ಸಸ್ ಪಾರ್ಟಿಯಲ್ಲಿ ಚಿತ್ರದ ನಿರ್ದೇಶಕ ಕೃಷ್ಣ, ಖಳನಟ ರವಿಶಂಕರ್, ನಿರ್ಮಾಪಕರಾದ ಉಮಾಪತಿ, ರಘುನಾಥ್, ಸಾಹಸ ನಿರ್ದೇಶಕ ರವಿವರ್ಮ, ನಟ ನೀನಾಸಂ ಸತೀಶ್ ಸೇರಿದಂತೆ ಚಿತ್ರದ ತಂತ್ರಜ್ಞರು ಭಾಗಿಯಾಗಿದ್ದರು.

ರವಿಚಂದ್ರನ್ ಅನುಪಸ್ಥಿತಿ!
ಕಿಚ್ಚನ 'ಹೆಬ್ಬುಲಿ' ಪಾರ್ಟಿಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾಗಿಯಾಗಿಲ್ಲ. ಚಿತ್ರದಲ್ಲಿ ಸುದೀಪ್ ಅವರ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ಬಣ್ಣ ಹಚ್ಚಿದ್ದರು.

2 ದಿನಕ್ಕೆ ಬಾಕ್ಸ್ ಆಫೀಸ್ ಚಿಂದಿ!
'ಹೆಬ್ಬುಲಿ' ಚಿತ್ರ ಮೊದಲ ದಿನ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿದ್ದು, ಎರಡು ದಿನಗಳಲ್ಲಿ ಬರೋಬ್ಬರಿ ಕಲೆಕ್ಷನ್ 18 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.[ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?]

'ಕೋಟಿಗೊಬ್ಬ-2' ದಾಖಲೆ ಬ್ರೇಕ್!
ವರದಿಗಳ ಪ್ರಕಾರ ಸುದೀಪ್ ಅಭಿನಯಿಸಿದ್ದ 'ಕೋಟಿಗೊಬ್ಬ-2' ಚಿತ್ರ, ಈ ಹಿಂದೆ ಅತ್ಯುತ್ತಮವಾದ ಒಪನಿಂಗ್ ಮಾಡಿ, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಆದ್ರೀಗ, 'ಕೋಟಿಗೊಬ್ಬ-2' ಚಿತ್ರವನ್ನ ಹಿಂದಿಕ್ಕಿ 'ಹೆಬ್ಬುಲಿ' ಅಬ್ಬರಿಸುತ್ತಿದೆ.[ಕಿಚ್ಚನ 'ಹೆಬ್ಬುಲಿ' ಮೊದಲ ದಿನ ಗಳಿಸಿದ್ದೆಷ್ಟು?]


Click it and Unblock the Notifications











