ಹೊಸ ಸಿನಿಮಾಗೆ ಸಜ್ಜಾದ 'ಹೀಗೊಂದು ದಿನ' ಡೈರೆಕ್ಟರ್
'ಹೀಗೊಂದು ದಿನ' ಸಿನಿಮಾದ ವಿಭಿನ್ನ ಪ್ರಯೋಗದ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರು ಈಗ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ.
ಒಂದೇ ಶಾಟ್ ನಲ್ಲಿ 'ಹೀಗೊಂದು ದಿನ' ಇಡೀ ಸಿನಿಮಾವನ್ನು ಶೂಟ್ ಮಾಡಿದ್ದ ವಿಕ್ರಮ್ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಈಗ ಇದೇ ನಿರ್ದೇಶಕ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ವಿಕ್ರಮ್ ಹೊಸ ಸಿನಿಮಾದ ಪ್ಲಾನ್ ಮಾಡಿದ್ದು, ಸದ್ಯದಲ್ಲಿಯೇ ಅವರ ಟೈಟಲ್ ಹಾಗೂ ಪೋಸ್ಟರ್ ಅನ್ನು ರಿಲೀಸ್ ಮಾಡಲಿದ್ದಾರಂತೆ. ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾದಲ್ಲಿ 'ಡಾ|| ಪಾಲ್' ವೆಬ್ ಸೀರಿಸ್ ಮೂಲಕ ಜನಪ್ರಿಯತೆ ಗಳಿಸಿದ್ದ ಕೈಲಾಶ್ ಪಾಲ್ ನಟಿಸುತ್ತಿದ್ದಾರೆ.

ವೆಬ್ ಸೀರಿಸ್ ನಲ್ಲಿ ತಮ್ಮ ನಟನೆ ಮೂಲಕ ಎಲ್ಲರನ್ನು ನಕ್ಕು ನಗಿಸಿದ್ದ ಇವರು ಈಗ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇನ್ನೊಬ್ಬ ದೊಡ್ಡ ನಟರು ಕೂಡ ಕಾಣಿಸಿಕೊಂಡಿದ್ದು, ಅದನ್ನು ಸದ್ಯದಲ್ಲಿಯೇ ನಿರ್ದೇಶಕರು ರಿವೀಲ್ ಮಾಡಲಿದ್ದಾರಂತೆ. ಇನ್ನು ಚಿತ್ರದ 75% ಚಿತ್ರೀಕರಣ ಈಗಾಗಲೇ ಮುಗಿದಿದೆ.
English summary
'Heegondu Dina' kannada movie director, 'Vikram Yoganand' planning to do a new movie.


Click it and Unblock the Notifications