ಮತ್ತೊಂದು ಮಗುವಿಗೆ ಜನ್ಮ ನೀಡಿದ 'ಅಮೇರಿಕಾ ಅಮೇರಿಕಾ' ನಾಯಕಿ

By Pavithra

Recommended Video

ಸಿಹಿ ಸುದ್ದಿ ಕೊಟ್ಟ ಹೇಮಾ ಪಂಚಮುಖಿ..! | Filmibeat Kannada

'ಅಮೇರಿಕಾ ಅಮೇರಿಕಾ', 'ದೊರೆ', 'ಸಂಭ್ರಮ', ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡವರು ಹೇಮಾ ಪಂಚಮುಖಿ. 'ಅಮೇರಿಕಾ ಅಮೇರಿಕಾ' ಚಿತ್ರ ನಂತರ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡು ಮಿಂಚಿ ಮರೆಯಾದ ಹೇಮಾ ಸದ್ಯ ನಾಟ್ಯ ಶಾಲೆಯಲ್ಲಿ ಬ್ಯುಸಿ ಆಗಿರುವುದು ಗೊತ್ತಿರುವ ವಿಚಾರ. ಹೇಮಾ ನಟ ಪ್ರಶಾಂತ್ ಗೋಪಾಲ ಶಾಸ್ತ್ರಿ ಅವರನ್ನು ಎರಡನೇ ಮದುವೆ ಆಗಿದ್ದು ಕೂಡ ಈಗ ಹಳೆ ಸುದ್ದಿ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಮನೆಯವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಮಾಡಿಕೊಂಡ ಹೇಮಾ ಇಂದು (ಸೆಪ್ಟೆಂಬರ್ 6) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಹೇಮಾ ಹಾಗೂ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Hema panchamikhi prashanth shashtri blessed with a baby girl

ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದು ಆಕೆ ವಿದ್ಯಾಭ್ಯಾಸದ ಜೊತೆಗೆ ತಾಯಿಯಂತೆ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ ಸಾಕಷ್ಟು ಅಭಿಮಾನಿಗಳು ಹೇಮಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

Hema panchamikhi prashanth shashtri blessed with a baby girl

ಸದ್ಯ ಸಿನಿಮಾ ಸಹವಾಸದಿಂದ ದೂರ ಉಳಿದುಕೊಂಡಿರುವ ಹೇಮಾ ಮತ್ತು ಪ್ರಶಾಂತ್ ನೃತ್ಯ ಶಾಲೆಯ ಮೂಲಕ ಮಕ್ಕಳಿಗೆ ಪಾಠ ಹಾಗೂ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ಮಾಡುತ್ತಾರೆ.

More from Filmibeat

English summary
Kannada America America movie fame actress Hema panchamikhi and prashanth shashtri blessed with a baby girl, on september 5th at bangalore private hospital
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X